Asianet Suvarna News Asianet Suvarna News

ಕಾಲಕ್ಕೂ ಟೈಂ ಬರಬೇಕು, ಈ ಕ್ಷಣ ಖುಷಿಯಾಗಿದ್ದುಬಿಡಿ

ಜೀವನದಲ್ಲಿ ಅಪ್ಸ್ ಆ್ಯಂಡ್ ಡೌನ್ಸ್ ಕಾಮನ್. ಬಿದ್ದಾಗ ಅಳುತ್ತಲೇ ಕೂರುವ ಬದಲು, ಎದ್ದೇಳಲು ಯತ್ನಿಸಬೇಕು. ಕಾಲಕ್ಕೂ ಒಂದು ಟೈಂ ಬರಬೇಕು. ಆಗ ನೋವು ತಾನೇ ಮರೆಯಾಗುತ್ತದೆ. ಇಂಥ ನೋವು ಮರೆಮಾಚಿಸುವಂಥ, ಜೀವನದಲ್ಲಿ ಸ್ಪೂರ್ತಿ ತುಂಬುವಂಥ 27 ಕೋಟ್‌ಗಳು ಇಲ್ಲಿವೆ. 90ರ ವಯೋವೃದ್ಧ ಬರೆದಿದ್ದಾದರೂ ಇದು ಪ್ರತಿಯೊಬ್ಬರ ಜೀವನಕ್ಕೂ ಅಗತ್ಯವಾದ ಪಾಠ.

27 tips for happiness in life by Regina Brett of Ohio
Author
Bengaluru, First Published Oct 1, 2018, 5:26 PM IST

ವೃದ್ಧಾಪ್ಯ ಹಲವು ಪಾಠ ಕಲಿಸುತ್ತದೆ. ಮಾಗಿದ ಮನಸ್ಸು, ಅನುಭವಗಳು ಮನುಷ್ಯನನ್ನು ಪಕ್ವವಾಗಿಸುತ್ತದೆ. ಇವುಗಳ ಸಮ್ಮಿಲನದಿಂದ ಬದುಕು ಸುಂದರವಾಗುತ್ತದೆ.  ಸುಂದರವಾಗಿಸಿಕೊಳ್ಳುವುದು ಪ್ರತಿಯೊಬ್ಬ ಮನುಷ್ಯನ ಕೈಲಿರುತ್ತೆ. ಬದುಕಿನ ಬಗ್ಗೆ, ವೃದ್ಧಾಪ್ಯದ ಬಗ್ಗೆ ಅಮೆರಿಕದ 90 ವರ್ಷದ ರಿಗಿನಾ ಬ್ರೆಟ್ಟ್ ಎಂಬುವವರು ಬರೆದ ಸ್ವೀಟ್ ಆ್ಯಂಡ್ ಅರ್ಥಪೂರ್ಣ ಕೋಟ್‌ಗಳು ಹಿರಿಯರ ದಿನದ ಅಂಗವಾಗಿ ಇಲ್ಲಿವೆ....

27 tips for happiness in life by Regina Brett of Ohio

- ಜೀವನ ನಿಷ್ಪಕ್ಷಪಾತವಾಗಿಲ್ಲದೇ ಹೋದರೂ, ಚೆಂದವಾಗಿದೆ. 
- ಅನುಮಾನವಿದ್ಯಾ? ಮತ್ತೊಂದು ಹೆಜ್ಜೆ ಮುಂದಿಡಿ. 
- ಅನಾರೋಗ್ಯದಲ್ಲಿದ್ದಾಗ ಉದ್ಯೋಗ ನಮ್ಮ ಕಾಳಜಿ ವಹಿಸೋಲ್ಲ. ಆದರೆ, ಸ್ನೇಹಿತರು ಹಾಗೂ ಕುಟುಂಬ ತೆಗೆದುಕೊಳ್ಳುತ್ತೆ.
- ಮಾಡಿದ ಎಲ್ಲ ವಾದಗಳಲ್ಲಿಯೂ ಗೆಲ್ಲಬೇಕೆಂದೇನೂ ಇಲ್ಲ. ಆದರೆ, ನಿಮ್ಮ ಆತ್ಮ ಸಾಕ್ಷಿಗೆ ಒಪ್ಪುವಂತಿರಿ. 
- ಅಳುವುದಾದರೆ ಜತೆಯಾಗಿ ಅತ್ತು ಬಿಡಿ. ಇದಕ್ಕಿಂತ ದಿವ್ಯೌಷಧಿ ಮತ್ತೊಂದಿಲ್ಲ.
- ಕಳೆದ ಸಮಯ ಶಾಂತವಾಗಿರಲಿ. ಇದು ವರ್ತಮಾನವನ್ನೂ ಖುಷಿಯಾಗಿಡುತ್ತೆ.
- ನಿಮ್ಮ ಜೀವನವನ್ನು ಮತ್ತೊಬ್ಬರೊಂದಿಗೆ ಹೋಲಿಸಿಕೊಳ್ಳಬೇಡಿ. ಅವರ ಜೀವನ ಪಯಣ ಹೇಗಿತ್ತೆಂಬುದನ್ನು ಊಹಿಸುವುದೂ ಅಸಾಧ್ಯ. 
- ಆಗಾಗ ಸುದೀರ್ಘ ಉಸಿರನ್ನು ತೆಗೆದುಕೊಳ್ಳಿ. ಇದು ನಿಮ್ಮ ಮನಸ್ಸನ್ನು ಶಾಂತಿಯಾಗಿಡುತ್ತೆ.
- ಅನಗತ್ಯ ವಿಷಯದ ಕಡೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುವ ವಿಷಯಗಳಿಂದ ದೂರವಿರಿ.
- ಖುಷಿಯಾಗಿರ್ಲಿಕ್ಕೆ ಯಾವುತ್ತೂ ಕಾಲ ಮಿಂಚಿದೆ ಎಂದಿರುವಿದಿಲ್ಲ. ಎಲ್ಲವೂ ನಮ್ಮ ಕೈಯಲ್ಲಿರುತ್ತೆ.  
- ಪ್ರತಿದಿನವನ್ನೂ ವಿಶೇಷವೆಂದೇ ಪರಿಗಣಿಸಿ. ಕ್ಯಾಂಡಲ್ ಹಚ್ಚಿ, ಚೆಂದ ಚೆಂದ ಬಟ್ಟೆ ತೊಡಿ. ವಿಶೇಷ ದಿನಗಳಿಗೆಂದೇ ಸಂತೋಷವನ್ನು ಕಾಯ್ದಿರಿಸಬೇಡಿ. ಪ್ರತಿ ಕ್ಷಣವನ್ನೂ ಸಂತೋಷದಿಂದ ಕಳೆಯಿರಿ.
- ನಿಮ್ಮ ಸಂತೋಷಕ್ಕೆ ನೀವೇ ಕಾರಣ, ಬೇರೆ ಯಾರೂ ಅಲ್ಲ.
- ಮತ್ತೊಬ್ಬರನ್ನು ಕ್ಷಮಿಸುವುದರೊಂದಿಗೆ ನಿಮ್ಮನ್ನು ಕ್ಷಮಿಸಿಕೊಳ್ಳಿ.
- ಬೇರೆಯವರನ್ನು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆಂಬುವುದಕ್ಕೆ ನೀವು ತೆಲೆ ಕೆಡಿಸಿಕೊಳ್ಳಬೇಕಾಗಿಲ್ಲ.
- ಎಲ್ಲ ನೋವನ್ನೂ ಸಮಯವೇ ಮರೆಸುತ್ತೆ. ಅದಕ್ಕೆ ತುಸು ಟೈಂ ಕೊಟ್ಟು ಬಿಡಿ.
- ಎಷ್ಟೇ ಒಳ್ಳೆ ಹಾಗೂ ಕೆಟ್ಟ ಟೈಂ ಆಗಲಿ, ಬದಲಾಗಲೇಬೇಕು.
- ನಿಮ್ಮನ್ನು ನೀವು ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ. ಬೇರೆ ಯಾರೂ ನಿಮ್ಮನ್ನು ಸೀರಿಯಸ್ ಆಗಿ ಪರಿಗಣಿಸೋಲ್ಲ.
- ಪವಾಡಗಳಲ್ಲಿ ಇರಲಿ ನಂಬಿಕೆ.
- ದೇವರು ನಿಮ್ಮನ್ನು ಪ್ರೀತಿಸುತ್ತಾನೆ. ನೀವೇನು ಮಾಡಿದೀರಾ? ಬಿಟ್ಟಿದ್ದೀರಾ ಎಂಬುವುದು ಮುಖ್ಯವಲ್ಲ.
- ಯಂಗ್ ಆಗಿ ಸಾಯೋದಕ್ಕಿಂತ ವೃದ್ಧರಾಗುವುದೊಳಿತು. 
- ನಿಮ್ಮ ಮಕ್ಕಳಿಗೂ ಒಂದೇ ಬಾರಿ ಬಾಲ್ಯ ಬರುವುದೆಂಬುವುದು ನೆನಪಿರಲಿ.
- ಪ್ರೀತಿ ಮಾತ್ರ ಕಡೇವರೆಗೂ ಉಳಿಯುವುದು.
- ಎಲ್ಲೆಡೆ ಪವಾಡಗಳು ಕಾಯುತ್ತಿರುತ್ತವೆ. ಹೊರ ಹೋಗಿ ನೋಡಬೇಕಷ್ಟೆ.
- ವೈರತ್ವ ಎಂಬುವುದು ವೇಸ್ಟ್ ಆಫ್ ಟೈಂ. ನಿಮ್ಮ ಹತ್ತಿರ ಈಗಾಗಲೇ ಇರುವುದನ್ನು ಅಕ್ಸೆಪ್ಟ್ ಮಾಡಿ. 
- ಒಳ್ಳೆ ಟೈಂ ಇನ್ನೂ ಬರುವುದ ಬಾಕಿ ಇದೆ.
- ನಿಮ್ಮ ಮನಸ್ಸು  ಹೇಗಾದ್ರೂ ಇರಲಿ. ಎದ್ದೇಳಿ, ಚೆಂದವಾಗಿ ಡ್ರೆಸ್ ಮಾಡಿಕೊಳ್ಳಿ...
- ಜೀವನವನ್ನು ಯಾರೂ ಕಟ್ಟಿ ಹಾಕಿರದಿದ್ದರೂ, ಅದೊಂದು ಉಡುಗೊರೆ.

Follow Us:
Download App:
  • android
  • ios