ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಶಕ್ತಿಶಾಲಿಯಾಗಿರುವ ಮಹಿಳೆಯರು ಪುರುಷನ ಸಹವಾಸವೇ ಬೇಡವೆಂಬ ಮನಸ್ಥಿತಿಗೆ ತಲುಪಿದ್ದಾರೆ. ಪುರುಷರೇ ಸ್ವಾತಂತ್ರ್ಯ ಮತ್ತು ಜೀವನ ನೀಡಬೇಕು ಎಂಬ ಸ್ಥಿತಿಯಲ್ಲಿಯೂ ಅವರಿಲ್ಲ. ಸಮಾಜದ ಸವಾಲು ಮತ್ತು ಸಂದರ್ಭಗಳನ್ನು ಎದುರಿಸಲು ಆಕೆ ಈಗ ಸಂಪೂರ್ಣ ಶಕ್ತಳು. 

ನಿಮಗೆ ನೀವೇ: ಪ್ರತಿಯೊಬ್ಬರಿಗೂ ಅವರದ್ದೇ ಆದ ಸಂಬಂಧಗಳ ಕಟ್ಟುಪಾಡುಗಳಿರುತ್ತವೆ. ನಿಮ್ಮ ಪ್ರೀತಿ ಹುಡುಕಿಕೊಳ್ಳಲು ಸಾಧ್ಯವಾಗದಿದ್ದರೆ ಅಥವಾ ಇಲ್ಲೀವರೆಗೆ ಅದು ಸಿಗದಿದ್ದರೆ ತಮ್ಮ ಶಕ್ತಿಯನ್ನು ವೇಸ್ಟ್ ಮಾಡಿಕೊಳ್ಳಲು ಸಿದ್ಧರಿರುವುದಿಲ್ಲ.

ಕೊನೆಗೂ ಕ್ಯಾನ್ಸರ್ ಔಷಧಿ ಕಂಡು ಹಿಡಿದ ವಿಜ್ಞಾನಿಗಳು: ಯಾವಾಗಿಂದ ಲಭ್ಯ? ಇಲ್ಲಿದೆ ವಿವರ

ಪಾಸಿಟಿವ್ ಯೋಚನೆ: ಆರ್ಥಿಕವಾಗಿ, ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರುವ ಹೆಣ್ಣು ಸದಾ ಪಾಸಿಟಿವ್ ಆಗಿಯೇ ಯೋಚಿಸುತ್ತಾಳೆ. ತಮ್ಮ ಬಗ್ಗೆ ತಾವೇ ವಿಶೇಷ ಆಸಕ್ತಿ ತೆಗೆದುಕೊಳ್ಳುತ್ತಾರೆ. ತಮ್ಮ ರಕ್ಷಣೆ ಮತ್ತು ಸೌಂದರ್ಯದ ಬಗ್ಗೆ ಸದಾ ಗಮನ ಹರಿಸುತ್ತಾರೆ. 

ಪುರುಷ ಬೇಕಂತಲೇ ಇಲ್ಲ: ಇನ್ನು ಲೈಂಗಿಕ ತೃಪ್ತಿಯ ವಿಚಾರಕ್ಕೆ ಬಂದರೂ ಮಹಿಳೆಗೆ ಪುರುಷ ಬೇಕೆ ಬೇಕು ಎಂಬ ಅನಿವಾರ್ಯ ಇಲ್ಲ. ವಿವಿಧ ಉಪಕರಣಗಳು ಮತ್ತು ಇತರೆ ಚಟುವಟಿಕೆಗಳ ಮೂಲಕವೂ ಆಕೆ ಸಂತೃಪ್ತಿ ಪಡೆದುಕೊಳ್ಳಬಲ್ಲಳು.

ಲೇಟಾಗೇಕೆ ಆಗುತ್ತೆ ಪಿರಿಯಡ್ಸ್?

ಸಮಯ ವ್ಯರ್ಥ ಮಾಡಲ್ಲ:  ಕೆಟ್ಟ ಸಂಬಂಧಗಳನ್ನು ಸ್ಟ್ರಾಂಗ್ ಲೇಡಿ ಯಾವ ಕಾಲಕ್ಕೂ ಉತ್ತೇಜಿಸುವುದಿಲ್ಲ. ಕೆಲವು ಕೆಟ್ಟ ಸಂಬಂಧಗಳು ಇಬ್ಬರ ಜೀವನವನ್ನು ಹಾಳು ಮಾಡುತ್ತದೆಂಬುದನ್ನು ಅವರು ಹಲವು ಉದಾಹರಣೆಗಳ ಮೂಲಕ ಮನದಟ್ಟು ಮಾಡಿಕೊಂಡಿರುತ್ತಾರೆ.

ಏಕಾಂಗಿತನವೇ ಶಕ್ತಿ: ಏಕಾಂಗಿಯಾಗಿರುವುದು ಶಕ್ತಿಶಾಲಿ ಮಹಿಳೆಯರಿಗೆ ಸಮಸ್ಯೆಯೇ ಅಲ್ಲ. ಈ ಏಕಾಂಗಿತನವೇ ಅವರಿಗೆ ಮತ್ತಷ್ಟು ಶಕ್ತಿ ತುಂಬುತ್ತದೆ. ಕೆಲವೊಮ್ಮೆ ಸಮಸ್ಯೆಗಳಿಗ ಉತ್ತರವನ್ನು ಇಲ್ಲಿಯೇ ಹುಡುಕಿಕೊಳ್ಳುತ್ತಾರೆ.

ನೀವು ನೀವಾಗಿರಿ: ಭಗವಾನ್ ಬುದ್ಧ ಹೇಳಿರುವಂತೆ ನೀವು ನೀವಾಗಿರಿ, ನಿಮ್ಮ ತನವನ್ನು ನಿಮ್ಮ ಒಳಗೆ ಹುಡುಕಿಕೊಳ್ಳಿ ಎಂಬುದನ್ನು ಈ ಮಹಿಳೆಯರು ರೂಢಿಸಿಕೊಂಡಿರುತ್ತಾರೆ.