ಇಂದಿನ ರಾಶಿ ಭವಿಷ್ಯ

20 th june Wednesday horoscope
Highlights

ಮೇಷ ರಾಶಿ :  ನೋಡಿ ಇಂದು ನಿಮ್ಮ ರಾಶಿಯಿಂದ ಪಂಚಮದಲ್ಲಿ  ಚಂದ್ರನಿದ್ದಾನೆ ಹಾಗಿದ್ದಾಗ ನಿಮ್ಮ ರಾಶಿಗೆ ಎಂಥ ಫಲಗಳಿರಬಹುದು ಚಿಂತಿಸೋಣ. ಚಂದ್ರನಿಂದ ಪಂಚಮದಲ್ಲಿ ಶನಿ ಇರುವುದರಿಂದ ಮಕ್ಕಳಿಂದ ಸ್ವಲ್ಪ ತೊಂದರೆ, ಶಾಲೆಗಳಲ್ಲಿ ಮಕ್ಕಳು ಎಡವಟ್ಟು ಮಾಡಿಕೊಂಡು ಆ ಸಮಸ್ಯೆಯನ್ನ ನೀವು ಎದುರಿಸಬೇಕಾಗಬಹುದು. ನಿಮ್ಮ ಆರೋಗ್ಯದಲ್ಲಿಯೂ ಕೂಡ ಸ್ವಲ್ಪ ಸಮಸ್ಯೆ ಉಂಟಾಗಲಿದೆ. ಜಾಗ್ರತೆ ಇರಲಿ.
ದೋಷ ಪರಿಹಾರ - ಆಂಜನೇಯ ಸ್ವಾಮಿಗೆ 5 ಪ್ರದಕ್ಷಿಣೆಹಾಕಿ.  

ಮೇಷ ರಾಶಿ :  ನೋಡಿ ಇಂದು ನಿಮ್ಮ ರಾಶಿಯಿಂದ ಪಂಚಮದಲ್ಲಿ  ಚಂದ್ರನಿದ್ದಾನೆ ಹಾಗಿದ್ದಾಗ ನಿಮ್ಮ ರಾಶಿಗೆ ಎಂಥ ಫಲಗಳಿರಬಹುದು ಚಿಂತಿಸೋಣ. ಚಂದ್ರನಿಂದ ಪಂಚಮದಲ್ಲಿ ಶನಿ ಇರುವುದರಿಂದ ಮಕ್ಕಳಿಂದ ಸ್ವಲ್ಪ ತೊಂದರೆ, ಶಾಲೆಗಳಲ್ಲಿ ಮಕ್ಕಳು ಎಡವಟ್ಟು ಮಾಡಿಕೊಂಡು ಆ ಸಮಸ್ಯೆಯನ್ನ ನೀವು ಎದುರಿಸಬೇಕಾಗಬಹುದು. ನಿಮ್ಮ ಆರೋಗ್ಯದಲ್ಲಿಯೂ ಕೂಡ ಸ್ವಲ್ಪ ಸಮಸ್ಯೆ ಉಂಟಾಗಲಿದೆ. ಜಾಗ್ರತೆ ಇರಲಿ.
ದೋಷ ಪರಿಹಾರ - ಆಂಜನೇಯ ಸ್ವಾಮಿಗೆ 5 ಪ್ರದಕ್ಷಿಣೆಹಾಕಿ.  

ವೃಷಭ : ಇಂದು ನೀವಂದುಕೊಂಡ ಗುರಿಯನ್ನು ಮುಟ್ಟಲು ಪ್ರಯಾಸಪಡಬೇಕಾಗುತ್ತದೆ. ಮಿತ್ರರಿಂದ ಪ್ರಶಂಸೆಯ ಮಾತುಗಳನ್ನು ಕೇಳಲಿದ್ದೀರಿ. ಗಂಟಲು ತೊಂದರೆ ಜೊತೆ ಅಷ್ಟಮದ ಶನಿ ನಿಮ್ಮ ಕಾಲಿಗೆ ಪೆಟ್ಟುತರಬಹುದು. ಓಡಾಡುವಾಗ ಸ್ವಲ್ಪ ಎಚ್ಚರವಹಿಸಿದರೆ ಸಾಕು. 
ದೋಷ ಪರಿಹಾರ : ಅಂಥ ಸಮಸ್ಯೆಯನ್ನು ಕಾಣಲಾರಿರಿ, ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ ನಮಸ್ಕಾರ ಮಾಡಿ ಸಾಕು.

ಮಿಥುನ : ವ್ಯಾಪಾರ ಸ್ಥಳದಲ್ಲಿ ಏನಾದರೂ ಕಳೆದುಕೊಳ್ಳುವ ಸಂಭವವಿದೆ. ಜಾಗ್ರತೆ ಇಂದ ನೋಡಿಕೊಳ್ಳಿ, ಸಹೋದರಿಯರು ಸಹಾಯ ಮಾಡುತ್ತಾರೆ. ಪಂಚಮದಲ್ಲಿರುವ ಗುರು ನಿಮ್ಮ ಮಕ್ಕಳಿಂದ ಸಂತೋಷವನ್ನು ಕೊಡುತ್ತಾನೆ, ಶುಭ ಸುದ್ದಿಯನ್ನು ಕೇಳಲಿದ್ದೀರಿ.
ದೋಷ ಪರಿಹಾರ : ಹತ್ತಿರದ ದೇವಾಲಯದಿಂದ ಒಂದು ನಿಂಬೆಹಣ್ಣನ್ನು ಮಂತ್ರಿಸಿ ತಂದು ನಿಮ್ಮ ವ್ಯಾಪಾರ ಸ್ಥಳದಲ್ಲಿ ಕಟ್ಟಿ. ಅನೂಕೂಲವಾಗುತ್ತದೆ.

ಕಟಕ : ಇಬ್ಬರು ಹೆಣ್ಣುಮಕ್ಕಳಿಂದ ತೊಂದರೆ ಅನುಭವಿಸಲಿದ್ದೀರಿ, ಕಪ್ಪು ವ್ಯಕ್ತಿ ನಿಮ್ಮನ್ನು ಮೋಸ ಮಾಡಬಹುದು ಎಚ್ಚರದಿಂದಿರಿ ಎಲ್ಲರಿಗೂ ಈ ಸಮಸ್ಯೆ ಅನ್ವಯವಾಗುವುದಿಲ್ಲ. ಯೋಚಿಸಬೇಡಿ. ಕೆಲವರು ಜಾಗ್ರತೆಯಿಂದ ಇದ್ದರೆ ಸಾಕು. 
ದೋಷ ಪರಿಹಾರ : ಮಂತ್ರಾಕ್ಷತೆ ಜೇಬಲ್ಲಿಟ್ಟುಕೊಳ್ಳಿ, ಅರ್ಚನೆ ಮಾಡಿದ ಕುಂಕುಮ ಹಣೆಗೆ ಧರಿಸಿ ಸಹಾಯವಾಗುತ್ತದೆ.

ಸಿಂಹ : ನಿಮ್ಮ ಮಕ್ಕಳು ಎಡವಿಬೀಳುವ ಸಾಧ್ಯತೆ ಇದೆ, ಅಷ್ಟೇ ಅಲ್ಲ ನಿಮ್ಮ ಸೊಂಟ ಭಾಗದಲ್ಲಿ ನೋವು ಕಾಣಿಸಲಿದೆ. ಮುಖ್ಯ ಸಂಗತಿ ಅಂದ್ರೆ ದೂರದ ಊರಿನಿಂದ ಒಂದು ಶುಭವಾರ್ತೆ ಕೇಳಲಿದ್ದೀರಿ 
ದೋಷ ಪರಿಹಾರ :‘‘ ನಮಸ್ತೆ ಅಸ್ತು ಭಗವನ್ವಿಶ್ವೇಶ್ವರಾಯ ಮಹಾ ದೇವಾಯ ನಮ:’’ ಈ ಮಂತ್ರವನ್ನ 11 ಬಾರಿ ಹೇಳಿಕೊಳ್ಳಿ ಸರ್ವ ದೋಷ ನಿವಾರನೆಯಾಗಲಿದೆ.

ಕನ್ಯಾ : ಕೆಲ ಸ್ತ್ರೀಯರಿಗೆ ಉದ್ಯೋಗ ಪ್ರಾಪ್ತಿ, ಕೆಲವರು ಮನೆಯಲ್ಲಿನ ಬಂಧುಗಳಿಂದ ಕಟು ಮಾತನ್ನು ಕೇಳಲಿದ್ದೀರಿ. ನಿಮ್ಮಲ್ಲಿ ಒಂದು ಮೊಂಡು ಧೈರ್ಯ ಮೂಡಲಿದೆ. ಹೆಚ್ಚು ಯೋಚಿಸುವ ಅಗತ್ಯವೇನಿಲ್ಲ. 
ದೋಷ ಪರಿಹಾರ : ಮಾತು ಕಡಿಮೆ ಮಾಡಿ ಅದೇ ಇಂದಿನ ಪರಿಹಾರ ಮಾರ್ಗ.

ತುಲಾ : ಭಾಗ್ಯ ಸ್ಥಾನದಲ್ಲಿ ರವಿ-ಬುಧರ ಯುತಿ ಇರುವುದರಿಂದ ಬರಬೇಕಿದ್ದ ಹಣ ಖಂಡಿತಾ ಬರಲಿದೆ, ಉದ್ಯೋಗದಲ್ಲೂ ಕೀರ್ತಿ ಲಾಭವಿದೆ, ಸಹೋದರರಲ್ಲಿ ಭಿನ್ನಾಭಿಪ್ರಾಯ ಮಾತ್ರ ತಪ್ಪಿದ್ದಲ್ಲ. ಯೋಚಿಸದಿರಿ ನಿಮಗೇ ಜಯ.
ದೋಷ ಪರಿಹಾರ : ದೇವಿ ದೇವಸ್ಥಾನಕ್ಕೆ 3 ಕೆಂಪು ಹೂವನ್ನು ಸಮರ್ಪಿಸಿ ಬನ್ನಿ.

ವೃಶ್ಚಿಕ : ಧನಸ್ಥಾನದಲ್ಲಿ ಶನಿ ಇದ್ದಾನೆ, ಧನಾಧಿಪತಿ ವ್ಯಯದಲ್ಲಿದ್ದಾನೆ ನಾಳೆ ಚಂದ್ರ ಕನ್ಯಾ ರಾಶಿಗೆ ಹೋಗುತ್ತಾನೆ ಇವೆಲ್ಲವನ್ನ ತಾಳೆಮಾಡಿ ನೋಡಿದರೆ ಸ್ವಲ್ಪ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಇನ್ನೆರಡು ಮೂರು ದಿನ ಸ್ವಲ್ಪ ಜಾಗೃತೆಯಿಂದ ಇರಿ.
ದೋಷ ಪರಿಹಾರ : ಮುಂಜಾನೆಯೇ   ಶಿವ ದೇವಸ್ಥಾನಕ್ಕೆ ಹೋಗಿ ದೇವಾಲಯದ ಕಸ ಗುಡಿಸಿ ಬನ್ನಿ. ನನಗೆ  ಗೊತ್ತು ನೀವು ಹೋಗಲ್ಲ. ಆದ್ರೆ ಸೇವೆ ಮಾಡಿಬನ್ನಿ ಆನಂತರದ ಚಮತ್ಕಾರ ನಿಮ್ಮ ಅನುಭವಕ್ಕೆ ಬರುತ್ತದೆ.

ಧನಸ್ಸು : ಸಾಡೇಸಾತ್ ನಿಮ್ಮನ್ನು ಕಾಡಿರುತ್ತದೆ. ಕೆಲವರಿಗೆ ಯಾವುದೇ ಸಮಸ್ಯೆ ಆಗಿರುವುದಿಲ್ಲ ಕಾರಣ ಶನಿ ನಿಮ್ಮ ಜಾತಕದಲ್ಲಿ ಒಳ್ಳೆ ಸ್ಥಾನದಲ್ಲಿರಬಹುದು. ಇರಲಿ ಸಂತೋಷ ಆದರೆ ಧನಸ್ಥಾನದ ಕುಜ, ಕೇತು ಸ್ವಲ್ಪ ಜಗಳ ತರಲಿದ್ದಾನೆ. ಎಚ್ಚರದಿಂದಿರಿ. 
ದೋಷ ಪರಿಹಾರ : ಗಂಪತಿಗೆ ದೇವಸ್ಥಾನಕ್ಕೆ 21 ಕೆಂಪು ಹೂವನ್ನು ಸಮರ್ಪಿಸಿ ಬನ್ನಿ.

ಮಕರ : ದೇಹ ಕೃಷವಾಗಲಿದೆ, ಸ್ವಲ್ಪ ಆಯಾಸ ಸುಸ್ತನ್ನು ಅನುಭವಿಸಬೇಕಾದೀತು, ಆದರೆ ಹಾಗೇ ಚೇತರಿಕೆಯೂ ಒದಗಲಿದೆ. ಗಂಡ-ಹೆಂಡಿರಲ್ಲಿ ಸ್ವಲ್ಪ ವಾಗ್ವಾದವಾಗಬಹುದು. ಸ್ವಲ್ಪ ಅನುಸರಿಸಿಕೊಮಡು ಹೋಗಿ.
ದೋಷ ಪರಿಹಾರ : ಮನೆ ದೇವರಿಗೆ ಎಳನೀರಿನ್ನು ನೈವೇದ್ಯ ಮಾಡಿ ಆ ಎಳನೀರನ್ನ ಕುಡಿದುಬಿಡಿ. ಇರುವ ಸಮಸ್ಯೆ ಸ್ವಲ್ಪ ಕಡಿಮೆಯಾಗಲಿದೆ

ಕುಂಭ : ಹೆಂಡತಿ ಮಾತಿಗೆ ಮಣಿಯಬೇಕಾಗುತ್ತದೆ. ಸಂತೋಷದಿಂದ ಒಪ್ಪಿಕೊಳ್ಳಿ, ನಿಮ್ಮ ಉದ್ಯೋಗ ಸ್ಥಳದಲ್ಲಿ ನಿಮ್ಮದೇ ಮೇಲುಗೈ, ಗುರುವಿನ ಅನುಕೂಲವಿದೆ. ಹೆಚ್ಚು ಯೋಚಿಸುವ ಅಗತ್ಯವೇನಿಲ್ಲ.
ದೋಷ ಪರಿಹಾರ : ಅರ್ಧನಾರೀಶ್ವರ ದೇವಾಲಯವಿದ್ದರೆ ದಂಪತಿಗಳು ದರ್ಶನ ಮಾಡಿಬನ್ನಿ. ಇಲ್ಲವಾದರೆ ದೇವರ ಫೋಟೋನೋಡಿ ನಮಸ್ಕರಿಸಿ. 

ಮೀನ : ಸುಖ ಸ್ಥಾನದಲ್ಲಿರುವ ರವಿ-ಬುಧರ ಯುತಿ ಮನೆ ಸೌಖ್ಯ, ವಾಹನ ಸೌಖ್ಯ, ಬಂಧು ಸೌಖ್ಯ ತರಲಿದೆ. ನಿಮ್ಮ ಮನಸ್ಸನ್ನು ಕಾಡುವ ಯುವತಿಯಿಂದ ಸ್ವಲ್ಪ ಚಿತ್ತ ವಿಕಾರವೂ ಆಗಲಿದೆ. ದೇವಿ ದೇವಸ್ಥಾನಕ್ಕೆ ಹೋಗಿಬನ್ನಿ.
ದೋಷ ಪರಿಹಾರ : ಗುರು ಸನ್ನಿಧಿಗೆ ಹಳದಿ ವಸ್ತ್ರ ದಾನ ಮಾಡಿ. ಸಮಾಧಾನವಾಗಲಿದೆ.

loader