ಜೀವನ ಎಂದರೆ ಚೆನ್ನಾಗಿ ಓದೋದು, ಇಷ್ಟಪಟ್ಟ ಕೆಲಸಕ್ಕೆ ಸೇರೋದು, ಫ್ರೆಂಡ್ಸ್ ಜೊತೆ ಪಾರ್ಟಿ ಎಂಜಾಯ್ ಮಾಡೋದು ಅಷ್ಟೇನಾ? ಖಂಡಿತಾ ಅಲ್ಲ. ಜೀವನದಲ್ಲಿ ನಾವು ಅಂದುಕೊಂಡದ್ದು ಮಾಡೋದು, ಮನಸಿನ ಮೂಲೆಯಲ್ಲಿರುವ ಆಸೆಯನ್ನು ಈಡೇರಿಸೋದು ಎಲ್ಲವೂ ಜೀವನವೇ. ನಿಮಗೆ ಮೂವತ್ತು ದಾಟುವ ಮುನ್ನ ಜೀವನದಲ್ಲಿ ಮಾಡಲೇಬೇಕಾದ ಒಂದಿಷ್ಟು  ಕೆಲಸಗಳ ಲಿಸ್ಟ್ ಇಲ್ಲಿದೆ ನೋಡಿ.. 

- ನೀವೆಷ್ಟೇ ಬ್ಯುಸಿ ಇದ್ದರೂ ಯಾವುದಾದರೊಂದು ಸ್ಪೋರ್ಟ್ಸ್‌ನಲ್ಲಿ ನಿಮ್ಮನ್ನು ನೀವು ತೊಡಗಿಸಿ. ಇದರಿಂದ ಆ್ಯಕ್ಟಿವ್ ಆಗಿರಬಹುದು.

- ನಿಮ್ಮ ವಾರ್ಡ್‌ರೋಬನ್ನು ಪೂರ್ತಿಯಾಗಿ ಹೊಸ ಬಟ್ಟೆಗಳಿಂದ ತುಂಬಿಸಿ. ಹಳೆ ಬಟ್ಟೆಗಳಿಗೆ ಬೈ ಬೈ ಎನ್ನಿ. 

ಹುಡುಗಿಯರು ಸೋಲೋ ಟ್ರಿಪ್‌ ಹೋಗುವುದು ಹೇಗೆ?

- ನೀವು ಈಗಾಗಲೇ ಏನಾದರೂ ಕೆಲಸ ಮಾಡುತ್ತಿರಬಹುದು. ಅದು ಬಿಟ್ಟು ನಿಮ್ಮದೇ ಆದ ಬ್ಲಾಗ್ ಬರೆಯಿರಿ, ಬಿಜಿನೆಸ್ ಮಾಡಿ, ಬಡ ಜನರಿಗೆ ಸಹಾಯವಾಗುವಂಥ ಏನಾದರೂ ಕೆಲಸ ಮಾಡಿ. ಇದರಿಂದ ಜೀವನ ಎಂದರೆ ಏನು ಅನ್ನೋದು ತಿಳಿಯುತ್ತದೆ. 

- ಜೀವನವನ್ನು ಎಂಜಾಯ್ ಮಾಡಬೇಕೆಂದು ಏನೇನೋ ತಿನ್ನೋ ಬದಲು ಆರೋಗ್ಯಯುತ ಆಹಾರವನ್ನು ಸೇವಿಸಿ. ಸದಾ ಹೆಲ್ತಿಯಾಗಿರಿ. 

- ನೀವು ಎಲ್ಲಿಗೇ ಹೋದರೂ ನಿಮ್ಮ ಕ್ಯಾಮೆರಾ ನಿಮ ಜೊತೆ ಇರಲಿ. ಕೆಲವೊಮ್ಮೆ ಅಪರೂಪ ಎನಿಸಿದ್ದು ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಇನ್ನು ಹಲವು ಚಿತ್ರಗಳು ನೆನಪಾಗಿ ಉಳಿಯುತ್ತದೆ. 

- ನಿಮ್ಮ ಸ್ಯಾಲರಿಯನ್ನು ಒಟ್ಟು ಮಾಡಿ ಒಂದು ಕಾರು ತೆಗೆಯಿರಿ. ಅಥವಾ ಅಂದುಕೊಂಡಿದ್ದನ್ನು ಖರೀದಿಸಲು ಆಗದಂಥ ವಸ್ತುವನ್ನು ಕೊಳ್ಳಿ. 

- ಪುಸ್ತಕ ಹೆಚ್ಚಿನ ಜ್ಞಾನ ಕೊಡುತ್ತದೆ. ಜೊತೆಗೆ ನಿಮಗೆ ಉತ್ತಮ ಸಂಗಾತಿಯಾಗಬಲ್ಲದು. ಆದುದರಿಂದ ಇಂದಿನಿಂದಲೇ ಉತ್ತಮ ಪುಸ್ತಕ ಓದಲು ಆರಂಭಿಸಿ.

ಸ್ವರ್ಗಸೀಮೆಯ ಮಡಿಲು, ಅತಿ ಸುಂದರ ಬೀಚ್, ದ್ವೀಪ ಪ್ರಪಂಚ ಫುಕೆಟ್

- ಗಾರ್ಡನಿಂಗ್ ಮಾಡೋದು ಮರೀಬೇಡಿ. ನಿಮ್ಮ ಮನೆಯಲ್ಲಿ ಗಿಡಗಳನ್ನು ಬೆಳೆಸಿ ಅದನ್ನು ನಿಮ್ಮ ಮಕ್ಕಳಂತೆ ಸಾಕಲು ಆರಂಭಿಸಿ. ಒಂದು ಸಲ ನೀವು ಕೆಲಸ ಆರಂಭಿಸಿದರೆ ಮತ್ತೆ ನಿಮಗೆ ಅರಿವಿಲ್ಲದೆ ಗಿಡಗಳ ಕಡೆಗೆ ಪ್ರೀತಿ ಹೆಚ್ಚುತ್ತದೆ. 

- ಫ್ಯೂಚರ್‌ ಗೋಲ್ಸ್‌, ಕನಸಿನ ತಾಣಗಳು, ಹೊಸ ಶಬ್ಧಗಳು ಹೀಗೆ ಎಲ್ಲವನ್ನೂ ಒಂದು ಲಿಸ್ಟ್‌ ಮಾಡಿಡಿ. ನಂತರ ಒಂದೊಂದು ಕನಸುಗಳನ್ನು ಈಡೇರಿಸುತ್ತಾ ಬನ್ನಿ. 

- ಸೋಲೋ ಟ್ರಿಪ್ ನಿಮ್ಮನ್ನು ನೀವು ಅರಿಯಲು ಬೆಸ್ಟ್ . ಏಕಾಂಗಿಯಾಗಿ ಭಾರತ ಅಥವಾ ಫಾರಿನ್‌ ದೇಶಗಳಿಗೆ ಪ್ರವಾಸ ಕೈಗೊಳ್ಳಿ.

- ನಿಮ್ಮ ಜೀವನ ಕಲಿಸಿದ ಪಾಠವನ್ನು ಡೈರಿಯಲ್ಲಿ ಬರೆದಿಡಿ. ಇದು ನಿಮ್ಮ ಮುಂದಿನ ಜೀವನದಲ್ಲಿ ಸಹಾಯಕ್ಕೆ ಬರುತ್ತದೆ. 

- ಪೋಷಕರಿಗೆ ಹಲವು ಕನಸುಗಳಿರುತ್ತವೆ, ಅವುಗಳನ್ನು ನಿಮ್ಮ ಬಳಿ ಹೇಳಿಕೊಳ್ಳದಿರಬಹುದು. ಆದರೆ ಅವರು ಒಂದು ಬಹು ದೊಡ್ಡ ಕನಸನ್ನು ನನಸು ಮಾಡುವ ಮೂಲಕ ಅವರಿಗೆ ಸರ್ಪ್ರೈಸ್ ನೀಡಿ. 

- ಹೆದರಿಕೆಯನ್ನೇ ಹೆದರಿಸಿ. ಅಂದರೆ ನಿಮಗೆ ಯಾವ ವಿಷಯದ ಬಗ್ಗೆ ಹೆಚ್ಚು ಭಯ ಇದೆಯೋ, ಜಂಪಿಂಗ್, ಪ್ಯಾರಾ ಗ್ಲೈಡಿಂಗ್, ಸೋಲೋ ಟ್ರಿಪ್ ... ಇವುಗಳನ್ನ ಮಾಡಿ. ಹೀಗೆ ಮಾಡಿದ್ರೆ ಜೀವನದಲ್ಲಿ ಮತ್ತೆಂದೂ ನಿಮಗೆ ಭಯ ಅನಿಸೋದೇ ಇಲ್ಲ.