Asianet Suvarna News Asianet Suvarna News

ಒಣ ತುಟಿಗೆ ಲಿಪ್ ಬಾಮ್ ಹಚ್ಚೋ ಮುನ್ನ....

ತುಟಿ ಒಣಗುವ ಅಥವಾ ಒಡೆಯುವ ಸಮಸ್ಯೆ ಕೇವಲ ಚಳಿಗಾಲದಲ್ಲಿ ಮಾತ್ರವಲ್ಲ, ಮಳೆಗಾಲದಲ್ಲೂ ಕಾಡುತ್ತದೆ. ದೇಹಕ್ಕೆ ನೀರಿನ ಅಗತ್ಯವಿದೆ ಎಂದಾಗಲೂ  ಕಾಡೋ ಈ ಸಮಸ್ಯೆಗೆ ಪರಿಹಾರವೇನು?
 

11 home remedies to treat dry cracked lips in winter
Author
Bangalore, First Published Jul 23, 2019, 11:52 AM IST

ಚಳಿಗಾಲದಂತೆ ಮಳೆಗಾಲದಲ್ಲಿಯೂ ಶುಷ್ಕ ವಾತಾವರಣದಿಂದ ತುಟಿ ಡ್ರೈ ಆಗುತ್ತದೆ. ಇದರಿಂದ ಕೆಲವೊಮ್ಮೆ ಅಲರ್ಜಿ, ರಕ್ತ ಬರುವುದು, ಚರ್ಮವೂ  ಎದ್ದು ಬರುತ್ತದೆ. ಈ ಸಮಸ್ಯೆ ನಿವಾರಣೆಗೆ ಕೆಲವೊಂದು ಮನೆ ಮದ್ದುಗಳನ್ನು ಅನುಸರಿಸಬೇಕು. ಸಮಸ್ಯೆ ಹೆಚ್ಚಾದರೆ ವೈದ್ಯರ ಬಳಿ ತೋರಿಸಿ. ಅದಕ್ಕೂ ಮುನ್ನ ಏನೆಲ್ಲಾ ಮಾಡಬಹುದು ನೋಡೋಣ.. 

- ಪ್ರತಿದಿನ ರಾತ್ರಿ ಮಲಗೋ ಮುನ್ನ ತುಟಿಗೆ ಕೊಬ್ಬರಿ ಎಣ್ಣೆ ಹಚ್ಚಿ ಎರಡು ನಿಮಿಷ ಮಸಾಜ್ ಮಾಡಿ. ಕೊಬ್ಬರಿ ಎಣ್ಣೆಯಿಂದ ತುಟಿಯಲ್ಲಿ ಮಾಯಿಶ್ಚರೈಸರ್ ಉಳಿಯುತ್ತದೆ. 

- ಕಾಲ ಯಾವುದೇ ಇರಲಿ ಮನೆಯಿಂದ ಹೊರಗೆ ಹೋಗುವಾಗ ತುಟಿಗೆ ಸ್ವಲ್ಪ ಸನ್‌ಸ್ಕ್ರೀನ್ ಹಚ್ಚಿ. ಬಳಿಕ ತುಟಿಯನ್ನು ಸ್ಕಾರ್ಫ್‌ನಿಂದ ಮುಚ್ಚಿ. 

ಬಣ್ಣ ಹೇಳುತೈತೆ, ಮತ್ತೆ ಹೇಳುತೈತಿ ಹೆಣ್ಣು ಏನೆಂಬುದನ್ನು..!

- ತುಟಿಗೆ ಅವಾಗವಾಗ ಲಿಪ್ ಬಾಮ್ ಹಚ್ಚುತ್ತಿದ್ದರೆ ತುಟಿ ಹೆಚ್ಚು ಡ್ರೈ ಆಗುವುದಿಲ್ಲ. 

- ಗ್ರೀನ್ ಟೀ ಬ್ಯಾಗನ್ನು ಬಿಸಿ ನೀರಲ್ಲಿ ಹಾಕಿಡಿ, ನಂತರ ಆ ನೀರಿನಿಂದ ತುಟಿಯನ್ನು ಚೆನ್ನಾಗಿ ಉಜ್ಜಿ ತೊಳೆಯಿರಿ. ಇದರಿಂದ ತುಟಿ ಸ್ಮೂತ್ ಆಗುತ್ತದೆ. 

- ಪದೇ ಪದೇ ತುಟಿಯನ್ನು ನಿಮ್ಮ ನಾಲಿಗೆಯಿಂದ ಸವರಿ ಒದ್ದೆ ಮಾಡಬೇಡಿ. ಯಾಕೆಂದರೆ ಜೊಲ್ಲು ತುಟಿಯನ್ನು ಇನ್ನಷ್ಟು ಶುಷ್ಕವನ್ನಾಗಿಸುತ್ತದೆ.

- ಬ್ಯೂಟಿ ಪ್ರಾಡಕ್ಟ್‌ಗಳನ್ನು ಖರೀದಿಸುವಾಗ ಅವುಗಳಲ್ಲಿ ನಿಮಗೆ ಅಲರ್ಜಿಯನ್ನುಂಟು ಮಾಡುವ ಅಂಶಗಳಿವೆಯೇ ಎಂಬುದನ್ನು ಪರಿಶೀಲಿಸಿ. ಇಲ್ಲವಾದರೆ ತುಟಿಗೆ ಹಚ್ಚಿದಾಗೆ ಸೈಡ್ ಎಫೆಕ್ಟ್ ಆಗುತ್ತೆ. 

- ಅಲೋವೆರಾ ಜೆಲ್‌ನಲ್ಲಿ ವಿಟಮಿನ್, ಮಿನರಲ್ಸ್, ಆ್ಯಂಟಿ ಆಕ್ಸಿಡೆಂಟ್‌ಗಳಿವೆ. ಇದನ್ನು ತುಟಿಗೆ ಹಚ್ಚುತ್ತಿದ್ದರೆ ತುಟಿ ಡ್ರೈ ಆಗುವುದಿಲ್ಲ. 

ನಿಮ್ಮ ತುಟಿ ಕೆಂಪಾಗಿಸಬೇಕೆ ? ಹಾಗಿದ್ದರೆ ಈ ಟಿಪ್ಸ್ ಅನುಸರಿಸಿ

- ತುಟಿಗೆ ಜೇನು ಹಚ್ಚಿ ಮಸಾಜ್ ಮಾಡಿ. 

- ಬಾಯಿಯಿಂದ ಉಸಿರಾಡಿದರೆ ತುಟಿಗಳು ಒಗುತ್ತವೆ. ಅದಕ್ಕೆ ಮೂಗಿನಲ್ಲಿಯೇ ಉಸಿರಾಡಿ.

- ಸೌತೆಕಾಯಿ ತುಟಿಯನ್ನು ಮಾಯಿಶ್ಚರೈಸ್ ಆಗಿಡುತ್ತದೆ. 

- ಈ ಮೇಲಿನ ಸರಳ ವಿಧಾನಗಳಿಂದಲೂ ತುಟಿ ಒಡೆಯುವ ಸಮಸ್ಯೆ ಕಡಿಮೆಯಾಗದಿದ್ದರೆ, ತಕ್ಷಣಕ್ಕೆ ವೈದ್ಯರನ್ನು ಭೇಟಿಯಾಗಿ. ಕೆಲವೊಮ್ಮೆ ಸೋಂಕಿನಿಂದಲೂ ತುಟಿಗಳು ಒಡೆಯುತ್ತವೆ.  

Follow Us:
Download App:
  • android
  • ios