Asianet Suvarna News Asianet Suvarna News

ಸೀರೆ ಧರಿಸಿ ಬಂದು ಪದ್ಮಶ್ರೀ ಸ್ವೀಕರಿಸಿದ 101 ವರ್ಷದ ಫ್ರೆಂಚ್ ಯೋಗ ಶಿಕ್ಷಕಿಯ ಲುಕ್‌ಗೆ ನೆಟ್ಟಿಗರು ಫಿದಾ

ಫ್ರೆಂಚ್ ಯೋಗ ಶಿಕ್ಷಕಿ ಷಾರ್ಲೆಟ್ ಚಾಪ್ಲಿನ್ ಭಾರತೀಯ ನಾರಿಯಂತೆ ಸೀರೆ ಧರಿಸಿ ಬಂದು ಅವರು ಈ ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮರ್ಮು ಅವರಿಂದ ಸ್ವೀಕರಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

101 year old French yoga teacher Charlotte Choplin received Padma Shri dressed in a sari, netizens were amazed by her look akb
Author
First Published May 12, 2024, 3:43 PM IST | Last Updated May 13, 2024, 11:23 AM IST

ಮೊನ್ನೆಯಷ್ಟೇ ಹಲವು ಗಣ್ಯರಿಗೆ 2024ರ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು ಫ್ರೆಂಚ್ ಯೋಗ ಶಿಕ್ಷಕಿ ಷಾರ್ಲೆಟ್ ಚಾಪ್ಲಿನ್ ಅವರು ಕೂಡ ಈ ಪದ್ಮಶ್ರೀ ಪ್ರಶಸ್ತಿಗೆ ಭಾಜನಾರಾಗಿದ್ದರು. ಭಾರತೀಯ ನಾರಿಯಂತೆ ಸೀರೆ ಧರಿಸಿ ಬಂದು ಅವರು ಈ ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮರ್ಮು ಅವರಿಂದ ಸ್ವೀಕರಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

ಗುರುವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಎರಡನೇ ನಾಗರಿಕ ಹೂಡಿಕೆ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪದ್ಮಶ್ರೀ ಪುರಸ್ಕೃತ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಫ್ರೆಂಚ್‌ ಯೋಗ ಶಿಕ್ಷಕಿ  ಷಾರ್ಲೆಟ್ ಚಾಪ್ಲಿನ್  ಅವರಿಗೂ 2024ರ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಮಾರಂಭಕ್ಕ ಸೀರೆ ಧರಿಸಿ ಭಾರತೀಯ ನಾರಿಯಂತೆ ಆಗಮಿಸಿದ ಷಾರ್ಲೆಟ್ ಚಾಪ್ಲಿನ್ ಎಲ್ಲರ ಗಮನ ಸೆಳೆದರು. 

ಫ್ರಾನ್ಸ್‌ ಜತೆ ರಕ್ಷಣಾ ಸಹಕಾರ: 99 ವರ್ಷದ ಫ್ರೆಂಚ್‌ ಯೋಗ ಶಿಕ್ಷಕಿಗೆ ಮೋದಿ ಶ್ಲಾಘನೆ

ಅವರು ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಅವರಿಗೆ ಶುಭ ಹಾರೈಸಿದ್ದಾರೆ. ಜೊತೆಗೆ ವಿದೇಶಿಯರಾದರೂ ಭಾರತದ  ನಿವಾಸಿಯಂತೆ ಭಾರತದ ಸೀರೆ ಧರಿಸಿ ಬಂದು ಪ್ರಶಸ್ತಿ ಸ್ವೀಕರಿಸಿರುವುದಕ್ಕೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪಿಐಬಿ ಇಂಡಿಯಾ ಈ ವೀಡಿಯೋ ಪೋಸ್ಟ್ ಮಾಡಿದ್ದು,  ರಾಷ್ಟ್ರಪತಿ ಮರ್ಮು ಅವರಿಗೆ ನಮಸ್ಕರಿಸುತ್ತಾ ಪ್ರಶಸ್ತಿ ಸ್ವೀಕರಿಸುವ ವೀಡಿಯೋ ವೈರಲ್ ಆಗಿದೆ. 

ಷಾರ್ಲೆಟ್ ಚಾಪ್ಲಿನ್ ಯಾರು?
ಮೂಲತಃ ವಿದೇಶದವರಾದ ಷಾರ್ಲೆಟ್ ಚಾಪ್ಲಿನ್ ಅವರು ಯೋಗ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ಕೆಲಸ ಮಾಡುತ್ತಿದ್ದು, ಆ ಕ್ಷೇತ್ರದ ಪ್ರಮುಖ ವ್ಯಕ್ತಿತ್ವವೆನಿಸಿದ್ದಾರೆ. ಸಾಮಾನ್ಯವಾಗಿ ಬಾಲ್ಯದಿಂದಲೇ ಯೋಗಾಭ್ಯಾಸ ಮಾಡಿದರೆ ಕೈಕಾಲುಗಳು ಸರಿಯಾಗಿ ಯೋಗಗಳ ಭಂಗಿಗೆ ಬಾಗಿ ಬಳುಕುತ್ತವೆ ಎಂದು ಹೇಳುತ್ತಾರೆ. ಆದರೆ ಚಾರ್ಲೆಟ್ ತಮ್ಮ 50ನೇ ವರ್ಷದಲ್ಲಿ ಯೋಗಾಭ್ಯಾಸ ಮಾಡಿ ಖ್ಯಾತಿಗೆ ಪಾತ್ರವಾದವರು. 

ತಮ್ಮ 101 ನೇ ವಯಸ್ಸಿನಲ್ಲಿಯೂ ಅವರು ಸಕ್ರಿಯವಾಗಿ ಯೋಗವನ್ನು ಕಲಿಸುತ್ತಿದ್ದಾರೆ. ಅವರು 1982 ರಲ್ಲಿ ಫ್ರಾನ್ಸ್‌ನಲ್ಲಿ ತಮ್ಮ ಯೋಗ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ನಂತರ ರಾಷ್ಟ್ರದಾದ್ಯಂತ ಯೋಗ, ಫಿಟ್‌ನೆಸ್ ಮತ್ತು ಆರೋಗ್ಯಕರ ಜೀವನಶೈಲಿಯ ಪ್ರಾಮುಖ್ಯತೆಯ ಬಗ್ಗೆ ಪ್ರಚಾರ ಮಾಡಿದರು.

ಮಗನ ಜೊತೆ 8400 ಕಿ.ಮೀ ಬೈಕಲ್ಲಿ ಸಂಚರಿಸಿದ ತಾಯಿಯ ಯಶಸ್ಸಿಗೆ ಯೋಗ ಕಾರಣ!

ಕಳೆದ ವರ್ಷ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ಯಾರಿಸ್‌ಗೆ ಭೇಟಿ ನೀಡಿದಾಗ ಅವರಿಗೆ ಷಾರ್ಲೆಟ್ ಅವರ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಯೋಗವನ್ನು ಪ್ರಚಾರ ಮಾಡುವ ವಿಚಾರದಲ್ಲಿ ಅವರ ಸಮರ್ಪಣೆ ಹಾಗೂ ಫ್ರಾನ್ಸ್‌ನಲ್ಲಿ ಯೋಗವನ್ನು ಅವರು ಪ್ರಚಾರ ಮಾಡಿದರು. ಇವರ ಸಾಧನೆ ಅನೇಕರಿಗೆ ಸ್ಪೂರ್ತಿಯಾಗಿದ್ದು, ವೀಡಿಯೋ ನೋಡಿದ ಅನೇಕರು ಷಾರ್ಲೆಟ್ ಅವರ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  ಯೋಗವನ್ನು ಆರಂಭಿಸುವುದಕ್ಕೆ ನನಗೆ ವಯಸ್ಸಾಯ್ತು ಎಂದು ಯೋಚನೆ ಮಾಡುತ್ತಿರುವ ನನಗೆ ನೀವು ನಿಜವಾದ ಪ್ರೇರಣೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇವರು ತಮ್ಮ 101ನೇ ವಯಸ್ಸಿನಲ್ಲಿ ಹೀಗೆ ವಾಕ್ ಮಾಡ್ತಾರೆ ಅಂದರೆ ಆ ಯೋಗ ಎಷ್ಟು ಒಳ್ಳೆಯದಿರಬಹುದು, ನಾನು ಜಿಮ್ ಬಿಟ್ಟು ಯೋಗ ಶುರು ಮಾಡುವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

 

Latest Videos
Follow Us:
Download App:
  • android
  • ios