ಫ್ರಾನ್ಸ್ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ತನ್ನ 50ನೇ ವಯಸ್ಸಿನಿಂದ ಯೋಗ ಮಾಡುತ್ತಿರುವ ಫ್ರಾನ್ಸ್‌ನ 99 ವರ್ಷದ ಯೋಗ ಶಿಕ್ಷಕಿ ಚಾಲೋರ್ಚ್ ಚಾಪಿನ್ ಅವರನ್ನು ಭೇಟಿ ಮಾಡಿದ್ದಾರೆ.
ಪ್ಯಾರಿಸ್: ಫ್ರಾನ್ಸ್ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ತನ್ನ 50ನೇ ವಯಸ್ಸಿನಿಂದ ಯೋಗ ಮಾಡುತ್ತಿರುವ ಫ್ರಾನ್ಸ್‌ನ 99 ವರ್ಷದ ಯೋಗ ಶಿಕ್ಷಕಿ ಚಾಲೋರ್ಚ್ ಚಾಪಿನ್ ಅವರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ಪ್ಯಾರಿಸ್‌ನಲ್ಲಿ ನನಗೆ ಚಾರ್ಲೋಟ್ ಚಾಪಿನ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. 50ನೇ ವಯಸ್ಸಿಗೆ ಯೋಗಾಭ್ಯಾಸ ಮಾಡುತ್ತಿರುವ ಅವರು ಶೀಘ್ರದಲ್ಲೇ 100 ವರ್ಷಕ್ಕೆ ಕಾಲಿಡುತ್ತಿದ್ದು ಆದರೆ ಯೋಗ ಮತ್ತು ಫಿಟ್ನೆಸ್ ಕುರಿತ ಅವರ ಉತ್ಸಾಹವು ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದೆ’ ಎಂದು ಶ್ಲಾಘಿಸಿದ್ದಾರೆ.
ಫ್ರಾನ್ಸ್ ಜತೆ ರಕ್ಷಣಾ ಸಹಕಾರ
ಭಾರತ ಹಾಗೂ ಫ್ರಾನ್ಸ್ ಸಂಬಂಧ ಮುಂದಿನ 25 ವರ್ಷಗಳಲ್ಲಿ ಇನ್ನಷ್ಟು ಗಟ್ಟಿಗೊಳ್ಳಲಿದೆ. ರಕ್ಷಣಾ ಸಹಕಾರ ಈ ಬಾಂಧವ್ಯದಲ್ಲಿ ಶಕ್ತಿಶಾಲಿ ಆಧಾರಸ್ತಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೆ, ಯುದ್ಧವಿಮಾನಗಳು, ಜಲಾಂತರ್ಗಾಮಿ ಹಾಗೂ ಹೆಲಿಕಾಪ್ಟರ್ ಎಂಜಿನ್ ತಯಾರಿಕೆಯಲ್ಲಿ ಸಹಕಾರ ಮುಂದುವರಿಯಲಿದೆ ಎಂದಿದ್ದಾರೆ. ಭಾರತವು ಈಗಾಗಲೇ ಫ್ರಾನ್ಸ್‌ನಿಂದ ನೌಕಾಪಡೆಗಾಗಿ 26 ರಫೇಲ್ ಯುದ್ಧವಿಮಾನ ಹಾಗೂ 3 ಸ್ಕಾರ್ಪೀನ್ ಜಲಾಂತರ್ಗಾಮಿ ಖರೀದಿಗೆ ಸಮ್ಮತಿಸಿದೆ. ಆದರೆ ಒಪ್ಪಂದದ ಮೊತ್ತದ ಬಗ್ಗೆ ಇನ್ನೂ ಮಾತುಕತೆ ನಡೆಸಿರುವ ಕಾರಣ ಈ ಬಗ್ಗೆ ನೇರವಾಗಿ ಘೋಷಣೆ ಮಾಡದೇ ಯುದ್ಧವಿಮಾನ ಹಾಗೂ ಜಲಾಂತರ್ಗಾಮಿ ವಿಷಯದಲ್ಲಿ ಸಹಕಾರ ಏರ್ಪಡಲಿದೆ ಎಂದಷ್ಟೇ ಮೋದಿ ಹೇಳಿದರು ಎಂದು ವಿಶ್ಲೇಷಿಸಲಾಗಿದೆ.
ಫ್ರಾನ್ಸ್ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪಾಲ್ಗೊಂಡ ಮೋದಿ, ಗಮನಸೆಳೆದ ವೈಮಾನಿಕ ಪ್ರದರ್ಶನ !
ತಮ್ಮ ಪ್ಯಾರಿಸ್ ಭೇಟಿಯ 2ನೇ ಹಾಗೂ ಕೊನೆಯ ದಿನ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಜತೆ ದ್ವಿಪಕ್ಷೀಯ ಸಭೆ ನಡೆಸಿ ಜಂಟಿ ಹೇಳಿಕೆ ನೀಡಿದ ಮೋದಿ, ‘ನಮ್ಮ ದ್ವಿಪಕ್ಷೀಯ ಬಾಂಧವ್ಯಕ್ಕೆ 25 ವರ್ಷಗಳಾಗಿವೆ. ಇನ್ನು ಮುಂದಿನ 25 ವರ್ಷಗಳಿಗೆ ನಾವು ನೀಲನಕ್ಷೆ ರೂಪಿಸುತ್ತಿದ್ದೇವೆ. ಇದರಲ್ಲಿ ರಕ್ಷಣಾ ಸಹಕಾರ ಮುಖ್ಯವಾದದ್ದು. ಮೇಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತದಲ್ಲಿ ಫ್ರಾನ್ಸ್ ಪಾತ್ರ ಮಹತ್ವದ್ದು. ಅದು ಜಲಾಂತರ್ಗಾಮಿ ಆಗಿರಬಹುದು ಅಥವಾ ನೌಕಾಪಡೆಯ ಯುದ್ಧವಿಮಾನ ಆಗಿರಬಹುದು’ ಎಂದರು.
ಪಾಕ್‌ಗೆ ಚಾಟಿ:
ಉಗ್ರವಾದದ ವಿರುದ್ಧ ಜಂಟಿಯಾಗಿ ಹೋರಾಡುತ್ತಿದ್ದೇವೆ. ಗಡಿಯಾಚಿನ ಉಗ್ರವಾದದ ವಿರುದ್ಧ ಕಠಿಣ ಕ್ರಮದ ಅಗತ್ಯವಿದೆ ಎಂದರು.ಇದೇ ವೇಳೆ, ಭಾರತ ಫ್ರಾನ್ಸ್‌ನ ಮಾರ್ಸೆಲ್ಲೆಸ್‌ನಲ್ಲಿ ದೂತಾವಾಸ ಆರಂಭಿಸಲಿದೆ ಎಂದ ಮೋದಿ, ಉಭಯ ದೇಶಗಳ ನಡುವೆ ಯುಪಿಐ ಪಾವತಿ ವ್ಯವಸ್ಥೆ ಜಾರಿಯಾಗಿದೆ ಎಂದರು ಹಾಗೂ ಭಾರತದಲ್ಲಿ ಕ್ಯಾಂಪಸ್ ಸ್ಥಾಪನೆಗೆ ಫ್ರಾನ್ಸ್ ವಿವಿಗಳಿಗೆ ಮೋದಿ ಆಹ್ವಾನಿಸಿದರು.
ಭಾರತದಲ್ಲಿ ಮಾನವ ಹಕ್ಕು ಉಲ್ಲಂಘನೆಯ ಆರೋಪ: ಮೋದಿ ಫ್ರಾನ್ಸ್ ಭೇಟಿ ವೇಳೆ ಯುರೋಪ್ ಸಂಸತ್ ಕುಚೋದ್ಯ
