Asianet Suvarna News Asianet Suvarna News

ರಾಮ ಮಂದಿರ ನಿರ್ಮಾಣಕ್ಕೆ 2 ವರ್ಷ ಹಿಂದೆಯೇ ಸಿಮೆಂಟ್ ಕೊಟ್ಟಿದ್ದ ಮುಸ್ಲಿಂ ಯುವಕ

ಅಯೋಧ್ಯೆ ತೀರ್ಪು ಏನಿರುತ್ತದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಊಹನೆ ಇತ್ತೇನೋ ಅಷ್ಟೇ. ಕೊಪ್ಪಳದ ಶಂಶುದ್ದೀನ್ ಮಾತ್ರ ಎರಡು ವರ್ಷ ಹಿಂದೆಯೇ ರಾಮ ಮಂದಿರ ನಿರ್ಮಾಣಕ್ಕೆಂದು ಒಂದು ಚೀಲ ಸಿಮೆಂಟ್ ಕೊಟ್ಟಿದ್ದಾರೆ.

muslim youth gave cement bag for rama mandir two years ago
Author
Bangalore, First Published Nov 10, 2019, 11:58 AM IST
  • Facebook
  • Twitter
  • Whatsapp

ಕೊಪ್ಪಳ(ನ.10): ಅಯೋಧ್ಯೆ ತೀರ್ಪು ಏನಿರುತ್ತದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಊಹನೆ ಇತ್ತೇನೋ ಅಷ್ಟೇ. ಕೊಪ್ಪಳದ ಶಂಶುದ್ದೀನ್ ಮಾತ್ರ ಎರಡು ವರ್ಷ ಹಿಂದೆಯೇ ರಾಮ ಮಂದಿರ ನಿರ್ಮಾಣಕ್ಕೆಂದು ಒಂದು ಚೀಲ ಸಿಮೆಂಟ್ ಕೊಟ್ಟಿದ್ದಾರೆ.

ರಾಮ‌ ಮಂದಿರ‌ ನಿರ್ಮಾಣಕ್ಕಾಗಿ ಕಳೆದ ಎರಡು ವರ್ಷಗಳ ಹಿಂದೆ ಸಿಮೆಂಟ್ ನೀಡಿದ್ದ‌ ಕೊಪ್ಪಳದ ಮುಸ್ಲಿಂ ಯುವಕ ಶಂಶುದ್ದೀನ್ ಸುಪ್ರೀಂ ಕೋರ್ಟ್ ತೀರ್ಪಿಗೆ ಖುಷಿ ವ್ಯಕ್ತಪಡಿಸಿದ್ದಾರೆ. ಕೊಪ್ಪಳದ ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದ ಮುಸ್ಲಿಂ ಯುವಕ‌ ಶಂಶುದ್ದಿನ್ 2017, ಅಕ್ಟೋಬರ್ ತಿಂಗಳಲ್ಲಿ ಅಯೋಧ್ಯೆಗೆ ತೆರಳಿದ್ದರು.

ಚುಡಾಯಿಸಿದವನಿಗೆ ಕಾಲೇಜು ಹುಡುಗಿಯಿಂದ ಬಿತ್ತು ಗೂಸಾ..!

ವೃತಿಯಲ್ಲಿ ಆಟೋ ಚಾಲಕನಾಗಿರುವ ಶಂಶುದ್ದಿನ್ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒಂದು ಚೀಲ‌ ಸಿಮೆಂಟ್‌ ನೀಡಿದ್ದರು. ಕೊಪ್ಪಳದಿಂದ ಲಕ್ನೊನದ ಅಯ್ಯೋಧ್ಯೆಗೆ ಪ್ರಯಾಣ ಬೆಳಸಿ ರಾಮ‌ ಮಂದಿರ ನಿರ್ಮಾಣ ಮಾಡಲು ಸಿಮೆಂಟ್ ನೀಡಿದ್ದ‌ರು.ಶನಿವಾರ ರಾಮಜನ್ಮ ಭೂಮಿ ವಿವಾದ ತೀರ್ಪು ಪ್ರಕಟವಾದ ಹಿನ್ನೆಲೆಯಲ್ಲಿ ಶಂಶುದ್ದಿನ್ ಸಂತಸ ವ್ಯಕ್ತಪಡಿಸಿದ್ದಾರೆ. ಕನಸು ನನಸಾಗಿದಕ್ಕೆ ಹರ್ಷ ವ್ಯಕ್ತಪಡಿಸಿದ ಶಂಶುದ್ದಿನ್ ಸುಪ್ರೀಂ ತಿರ್ಪನ್ನು ತೆಲೆಬಾಗಿ ಸ್ವಾಗತಿಸಿದ್ದಾರೆ.

ಕುರಿಗಳೇ ಸಾಕ್ಷಿಯಾದವು ಪ್ರೇಮಿಗಳ ವಿವಾಹಕ್ಕೆ!

7 ದಶಕಗಳ ಅಯೋಧ್ಯೆ ರಾಮ ಜನ್ಮ ಭೂಮಿ ವಿವಾದಕ್ಕೆ ಶನಿವಾರ ತೆರೆ ಬಿದ್ದಿದ್ದು, ಸುಪ್ರೀಂ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ ವಹಿಸಿ ಸುಪ್ರೀಂ ತೀರ್ಪು ನೀಡಿದೆ. ಯಾರ ಭಾವನೆಗೂ ಧಕ್ಕೆಯಾಗದಂತೆ ಬಾಬರಿ ಮಸೀದಿಗೂ ಅಯೋಧ್ಯೆಯಲ್ಲೇ ಪ್ರತ್ಯೇಕ ಜಾಗವನ್ನು ಕಲ್ಪಿಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.

Follow Us:
Download App:
  • android
  • ios