ಕೋಲಾರ: ವಾರ್ಡ್ ನಂ. 1ರಲ್ಲಿ JDS ಗೆಲುವು
ಕೋಲಾರದಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದ್ದು, ಕೋಲಾರದ ವಾರ್ಡ್ ನಂ 1 ರಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. ನಗರಸಭೆಯ 35 ವಾರ್ಡುಗಳಿಗೆ ನ.12 ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ನ.13ರಂದು ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ನಡೆಯಲಿದೆ.
ಕೋಲಾರ(ನ.14): ಕೋಲಾರದಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದ್ದು, ಕೋಲಾರದ ವಾರ್ಡ್ ನಂ 1 ರಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. ನಗರಸಭೆಯ 35 ವಾರ್ಡುಗಳಿಗೆ ನ.12 ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ನ.13ರಂದು ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ನಡೆಯಲಿದೆ.
ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 51,253 ಪುರುಷರು, 52,101 ಮಹಿಳೆಯರು ಮತ್ತು ಇತರೆ 18 ಸೇರಿ ಒಟ್ಟು1.32,282 ಮತದಾರರ ಪೈಕಿ35,886 ಪುರುಷರು(ಶೇ 70.02) ,34495 ಮಹಿಳೆಯರು(ಶೇ.66.32 ಮತ್ತು ಇತರೆ 4 ಮಂದಿ ಸೇರಿ ಒಟ್ಟು 70385 ಮತದಾನವಾಗಿದೆ.
ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ : ಮತ ಎಣಿಕೆ ಆರಂಭ
ಬೆಳಗ್ಗೆ 8 ಕ್ಕೆ ಮತ ಏಣಿಕೆ ಆರಂಭವಾಗಿದ್ದು ಮಧ್ಯಾಹ್ನ 12 ಗಂಟೆಯೊಳಗೆ ಎಲ್ಲ 25 ವಾರ್ಡುಗಳ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆ ಇದೆ. 7 ಕೊಠಡಿಗಳಲ್ಲಿ ಮತ ಎಣಿಕೆ ನಡೆಯಲಿದ್ದು ಪ್ರತಿ 5 ವಾರ್ಡಿಗೆ ಒಂದು ಟೇಬಲ್ ವ್ಯವಸ್ಥೆ ಮಾಡಲಾಗಿದೆ.
ಮತ ಎಣಿಕೆ ಸುಗಮವಾಗಿ ನಡೆಸುವ ಸಲುವಾಗಿ ಎಣಿಕಾ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾ ಗಿದ್ದು,ಭದ್ರತೆಗಾಗಿ 6 ಸಿಪಿಐ, 9 ಪಿಎಸ್‌ಐ, 80 ಸಿವಿಲ್ ಪೊಲೀಸ್, 60 ಗಹರಕ್ಷಕರು, 2 ಕೆಎಸ್‌ಆರ್‌ಪಿ ತುಕಡಿ ಹಾಗೂ 3 ಡಿಎಆರ್ ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ. ಎಣಿಕೆ ಕೇಂದ್ರದಲ್ಲಿ 1 ಸಿಪಿಐ, 2 ಪಿಎಸ್‌ಐ ಹಾಗೂ 20 ಜನ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಡಿವೈಎಸ್ಪಿ ಆರ್.ವಿ. ಚೌಡಪ್ಪ ತಿಳಿಸಿದ್ದಾರೆ.
ಡಿಸೆಂಬರಲ್ಲಿ ನಡೆಯಲ್ಲಿದೆ ಮತ್ತೊಂದು ಚುನಾವಣೆ
ದಾವಣಗೆರೆ, ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ 14 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಒಟ್ಟು 409 ವಾರ್ಡ್‌ಗಳಿಗೆ ಮಂಗಳವಾರ ಮತದಾನ ನಡೆದಿದ್ದು, ಗುರುವಾರ ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ.