ಕೋಲಾರದಲ್ಲಿ ಗುರು-ಶಿಷ್ಯ ಕಾಳಗ : ಸಿದ್ದು ಓಟಕ್ಕೆ ವರ್ತೂರು ಹಾಕ್ತಾರಾ ಬ್ರೇಕ್..!

ಹೈಕಮಾಂಡ್‌ ಸಮ್ಮತಿಸಿದರೆ ಈ ಬಾರಿ ಕೋಲಾರದಿಂದ ಸ್ಪರ್ಧಿಸುವೆ ಎಂದು ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸುತ್ತಿದ್ದಂತೆ ಕೋಲಾರ, ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿತು. ಇದರ ಬೆನ್ನಲ್ಲೇ, ಸಿದ್ದು ಕೋಲಾರದಿಂದ ಸ್ಪರ್ಧಿಸಲ್ಲ, ವರುಣಕ್ಕೆ ಹೋಗ್ತಾರೆ ಎನ್ನುವ ಮಾತುಗಳೂ ಕೇಳಿ ಬಂದವು

Karanataka Assembly election 2023 Siddaramia vs Varthur prakash in Kolara Assembly constituency akb

ಕೋಲಾರ: ಹೈಕಮಾಂಡ್‌ ಸಮ್ಮತಿಸಿದರೆ ಈ ಬಾರಿ ಕೋಲಾರದಿಂದ ಸ್ಪರ್ಧಿಸುವೆ ಎಂದು ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸುತ್ತಿದ್ದಂತೆ ಕೋಲಾರ, ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿತು. ಇದರ ಬೆನ್ನಲ್ಲೇ, ಸಿದ್ದು ಕೋಲಾರದಿಂದ ಸ್ಪರ್ಧಿಸಲ್ಲ, ವರುಣಕ್ಕೆ ಹೋಗ್ತಾರೆ ಎನ್ನುವ ಮಾತುಗಳೂ ಕೇಳಿ ಬಂದವು. ಆದರೆ, ಇದ್ಯಾವುದಕ್ಕೂ ಕ್ಯಾರೇ ಎನ್ನದ ಸಿದ್ದು, ಕ್ಷೇತ್ರ ಪ್ರವಾಸ ನಡೆಸಿ, ತಮ್ಮ ಪರವಾದ ಹವಾ ಸೃಷ್ಟಿಸಿಕೊಳ್ಳಲು ಮುಂದಾಗಿದ್ದಾರೆ. ಕ್ಷೇತ್ರದಲ್ಲಿ ಮನೆ ಮಾಡಿ, ತಮ್ಮ ಸ್ಪರ್ಧೆ ಖಚಿತ ಎಂಬ ಸುಳಿವು ನೀಡಿದ್ದಾರೆ. ತಮ್ಮ ವಿರುದ್ಧ ಮುನಿಸಿಕೊಂಡಿದ್ದ ಮಾಜಿ ಸಂಸದ ಕೆ.ಹೆಚ್‌.ಮುನಿಯಪ್ಪ (MP KH Muniyappa) ಅವರ ಮನವೊಲಿಸಿ, ಕ್ಷೇತ್ರದಲ್ಲಿ ಭಿನ್ನಮತ ಹೋಗಲಾಡಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಇದು ನನ್ನ ಕೊನೆಯ ಚುನಾವಣೆ ಎಂಬ ಹೇಳಿಕೆ ನೀಡಿ, ಅನುಕಂಪದ ಅಲೆ ಸೃಷ್ಟಿಸಲು ಮುಂದಾಗಿದ್ದಾರೆ.

ಅಹಿಂದ ಮತಗಳ ಮೇಲೆ ಕಣ್ಣಿಟ್ಟು, ಸುರಕ್ಷಿತ ನೆಲೆ ಅರಸಿ ಬಂದಿರುವ ಸಿದ್ದರಾಮಯ್ಯಗೆ ಸವಾಲು ಒಡ್ಡಲು ಕುರುಬ ಸಮುದಾಯದವರೇ (Kuruba community) ಆಗಿರುವ ವರ್ತೂರು ಪ್ರಕಾಶ್‌ (Varthur Prakash) ಮುಂದಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಕಳೆದ ಬಾರಿ ಜೆಡಿಎಸ್‌ನಿಂದ ಗೆದ್ದಿದ್ದ ಶ್ರೀನಿವಾಸಗೌಡರು, ಕಾಂಗ್ರೆಸ್‌ ಸೇರಿದ್ದು, ಸಿದ್ದುಗೆ ಬೆಂಬಲವಾಗಿ ನಿಂತಿದ್ದಾರೆ. ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆದ್ದಿರುವ ಸಾಧನೆ ಇವರದು. ಸಿದ್ದುಗೆ ಕ್ಷೇತ್ರದಲ್ಲಿನ ಕಾಂಗ್ರೆಸ್‌ ಭಿನ್ನಮತ ತಲೆನೋವಾಗಿ ಪರಿಣಮಿಸಿದೆ. ಪಕ್ಷದ ಪ್ರಮುಖ ನಾಯಕ, ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪನವರ ಬೆಂಬಲ ಗೆಲುವಿಗೆ ಅಗತ್ಯವಾಗಿದೆ.

Assembly election: ನಾನು ಹಸಿದ ಹೆಬ್ಬುಲಿ: ಸಿದ್ದರಾಮಯ್ಯನನ್ನು ಸೋಲಿಸದೆ ಬಿಡಲ್ಲ: ವರ್ತೂರು ಪ್ರಕಾಶ್

ಈ ಮಧ್ಯೆ, ಅಹಿಂದ ಸಮಾವೇಶದ (Ahinda convention) ಮೂಲಕವೇ ಕೋಲಾರಕ್ಕೆ ಪ್ರವೇಶ ಕೊಟ್ಟಿದ್ದ ವರ್ತೂರು ಪ್ರಕಾಶ್‌, 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದ ಕೆ.ಶ್ರೀನಿವಾಗೌಡರ ವಿರುದ್ಧ 21,029 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಪಕ್ಷಾಂತರಗೊಂಡಿದ್ದ ಕೆ.ಶ್ರೀನಿವಾಸಗೌಡರ (K.Srinivasa Gowda) ವಿರುದ್ಧವೇ 2ನೇ ಬಾರಿಗೆ ಜಯ ಸಾಧಿಸಿದರು. ಆದರೆ, 2018ರಲ್ಲಿ ಶ್ರೀನಿವಾಸಗೌಡರ ವಿರುದ್ಧ ಸೋತರು. ಈಗ ಬಿಜೆಪಿಗೆ ಸೇರ್ಪಡೆಯಾಗಿದ್ದು, ಬಿಜೆಪಿಗೆ ಸೇರ್ಪಡೆಯಾದ ದಿನದಿಂದಲೂ ತಾನೇ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿಕೊಳ್ಳುತ್ತಿದ್ದಾರೆ. ಆದರೆ, ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಓಂಶಕ್ತಿ ಚಲಪತಿಯವರು ಈ ಬಾರಿ ಮತ್ತೊಮ್ಮೆ ಅವಕಾಶ ಕಲ್ಪಿಸಿಕೊಡಬೇಕೆಂದು ಕ್ಷೇತ್ರದಲ್ಲಿ ಪಕ್ಷದ ಪರವಾಗಿ ಪ್ರಚಾರ ಶುರು ಮಾಡಿದ್ದಾರೆ.

ಜೆಡಿಎಸ್‌ನಿಂದ ಸಿಎಂಆರ್‌ ಶ್ರೀನಾಥ್‌ ಹೆಸರನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಇವರೊಂದಿಗೆ ಆಮ್‌ ಆದ್ಮಿ ಪಕ್ಷದಿಂದ ಸುಹೇಲ್‌ ದಿಲ್‌ ಸವಾಝ್‌ (Suhail Dil Sawaz) ಆಕಾಂಕ್ಷಿ ಎಂದು ಘೋಷಿಸಿಕೊಂಡಿದ್ದಾರೆ. ಇದೇ ವೇಳೆ, ಆರ್‌ಪಿಐ, ಎಸ್‌ಡಿಪಿಐ, ಎಲ್‌ಜೆಪಿಗಳು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ನಡೆಸಿವೆ.

ಸಿದ್ದರಾಮಯ್ಯ ನನಗೆ ಪ್ರತಿಸ್ಪರ್ಧಿಯೇ ಅಲ್ಲ: ವರ್ತೂರು ಪ್ರಕಾಶ್‌

ಜಾತಿವಾರು ಲೆಕ್ಕಾಚಾರ:

ಕ್ಷೇತ್ರದಲ್ಲಿ ದಲಿತರು ಮತ್ತು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ಅಂದಾಜು 2,31,742 ಮತದಾರರಿದ್ದು, ಆ ಪೈಕಿ ಪ.ಜಾ., ಪಂಗಡಕ್ಕೆ ಸೇರಿದವರು 70,000. ಮುಸ್ಲಿಮರು 50,000, ಒಕ್ಕಲಿಗರು 35,000, ಕುರುಬರು 25,000, ಇತರ ಸಮಾಜಗಳ 50,000 ಮತದಾರರಿದ್ದಾರೆ.

ಕ್ಷೇತ್ರ ಹಿನ್ನೆಲೆ:

ಚಳುವಳಿಗಳ ತವರೂರು, ಸಣ್ಣ ಕೆರೆಗಳ ನಾಡು ಎಂಬ ಖ್ಯಾತಿಯ ಕೋಲಾರ, ಈ ಹಿಂದೆ ಜಾತಿ ಕ್ರೌರ್ಯಕ್ಕೆ ಒಳಗೊಂಡಿತ್ತು. ಆದರೀಗ ಕ್ಷೇತ್ರದಲ್ಲಿ ಪಾಳೇಗಾರಿಕೆ ಸಡಿಲಗೊಂಡಿದೆ. 1957ರಲ್ಲಿ ಅಸ್ವಿತ್ವಕ್ಕೆ ಬಂದ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಈವರೆಗೆ ಮೂವರು ಮುಸ್ಲಿಂ ಅಭ್ಯರ್ಥಿಗಳು ಆರಿಸಿ ಬಂದಿದ್ದಾರೆ. ನಾಲ್ಕು ವಿಭಿನ್ನ ಪಕ್ಷಗಳಿಂದ ನಾಲ್ಕು ಬಾರಿ ಗೆಲುವು ಸಾಧಿಸಿದ ಕೀರ್ತಿ ಕೆ.ಶ್ರೀನಿವಾಸ ಗೌಡರಿಗಿದೆ. ಈಗವರು ಬಹುತೇಕ ಕಾಂಗ್ರೆಸ್‌ ಸೇರಿಯಾಗಿದೆ. ದಲಿತರು ಮತ್ತು ಮುಸ್ಲಿಮರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಹೆಸರುವಾಸಿ, ಇವರೇ ಇಲ್ಲಿನ ನಿರ್ಣಾಯಕ ಮತದಾರರೂ ಕೂಡ.

Latest Videos
Follow Us:
Download App:
  • android
  • ios