Assembly election: ನಾನು ಹಸಿದ ಹೆಬ್ಬುಲಿ: ಸಿದ್ದರಾಮಯ್ಯನನ್ನು ಸೋಲಿಸದೆ ಬಿಡಲ್ಲ: ವರ್ತೂರು ಪ್ರಕಾಶ್
ಸಿದ್ದರಾಮಯ್ಯ ವಿರುದ್ಧ ಮತ್ತೆ ತೊಡೆ ತಟ್ಟಿದ ವರ್ತೂರು ಪ್ರಕಾಶ್.
ಯೂ ಟರ್ನ್ ಮಾಡದೆ ತಾಖತ್ ಇದ್ರೆ ಸ್ಪರ್ಧೆ ಮಾಡಿ ಎಂದು ಸಿದ್ದರಾಮಯ್ಯಗೆ ಸವಾಲ್.
ನಾನು ಹಸಿದ ಹೆಬ್ಬುಲಿ, ನನ್ನ ಮೈಯಲ್ಲಿ ಕರೆಂಟ್ ಪಾಸ್ ಆಗ್ತಿದೆ
ವರದಿ : ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್
ಕೋಲಾರ (ಜ.18): ಸಿದ್ದರಾಮಯ್ಯ ಅವರಿಗೆ ತಾಕತ್ ಇದ್ದರೆ ಕೋಲಾರದಿಂದ ಸ್ಪರ್ಧೆ ಮಾಡಬೇಕು, ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಯೂಟರ್ನ್ ಮಾಡದಂತೆ ಮಾಜಿ ಸಿಎಂ ಸಿದ್ದರಾಮಯ್ಯರವರಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಸವಾಲ್ ಹಾಕಿದ್ದಾರೆ.
ಕೋಲಾರದ ಪತ್ರಕರ್ತರ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ೯ ನೇ ತಾರೀಖು ಬಂದು ಹೋದ ಬಳಿಕ ಸಾಕಷ್ಟು ಹೇಳಿಕೆಗಳನ್ನ ಮಾಡಲಾಗಿದ್ದು ಅದರಲ್ಲೂ ಗಾಂಧಿ ನಗರ, ಕಾಗಿನೆಲೆ ಸಂಸ್ಥೆ ಸೇರಿದಂತೆ ಹಲವು ಕಡೆಗಳಿಂದ ಒತ್ತಡಗಳು ಹಾಕುತ್ತಿದ್ದಾರೆ ಎಂಬ ಅಪಪ್ರಚಾರ ಮಾಡಲಾಗುತ್ತಿದೆ. ಆದ್ರೆ ನನಗೆ ಯಾವುದೇ ಒತ್ತಡ ಬಂದಿಲ್ಲ, ಸಿದ್ದರಾಮಯ್ಯ, ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಸೋತಿದ್ದಾರೆ. ಸೋಲು ನನ್ನ ಗೆಲುವಿನ ಮೆಟ್ಟಲು, ಇನ್ನೂ ನಾನು ಸೋಲಲ್ಲ, ಯಾರೂ ಸಹ ನನ್ನ ಬಿಟ್ಟು ಹೋಗಿಲ್ಲ, ಇನ್ನೂ ನಾನು ಬಿಜೆಪಿ ಸೇರಿದ ಬಳಿಕ ಗುಂಪು ಗುಂಪಾಗಿ ನಮ್ಮ ಪಕ್ಷಕ್ಕೆ ವಲಸೆ ಬರುತ್ತಿದ್ದಾರೆ ಎಂದರು.
ಮೋದಿ 2 ಕಡೆ ನಿಂತ್ರೆ ಲೀಡರ್, ನಾನು ನಿಂತ್ರೆ ಆಗಲ್ವಾ? ಸಿದ್ದರಾಮಯ್ಯ ಗೂಗ್ಲಿ!
ಕುರುಬ ಸಮಾಜದಲ್ಲಿ ಬಿರುಕು ಇಲ್ಲ: ಸಿದ್ದರಾಮಯ್ಯ ವಿರುದ್ದ ಸ್ಪರ್ಧೆ ಮಾಡಬೇಡ ಎಂದು ಹೇಳುವ ಸಮಾಜದ ಯಾವುದೆ, ನಾಯಕರು, ಸ್ವಾಮೀಜಿ ನನಗೆ ದೈರ್ಯ ಮಾಡಿಲ್ಲ. ಇನ್ನು ಸಿದ್ದರಾಮಯ್ಯ ಕೋಲಾರ ಕ್ಷೇತ್ರಕ್ಕೆ ಬರುತ್ತಾರೆ ಅನ್ನೋವರೆಗೂ ನನಗೆ ಅಭಿಮಾನ ಇತ್ತು, ಆದ್ರೆ ಅವರು ಘೋಷಣೆ ಮಾಡಿದ ಮೇಲೆ ನಾನು ಸನ್ಯಾಸಿಯಾಗಕ್ಕೆ ಆಗಲ್ಲ, ನಾನು ರಾಜಕಾರಣ ಮಾಡಬೇಕಲ್ಲ ಅದಕ್ಕೆ, ಅವರು ನನ್ನ ವಿರುದ್ಧ ತೊಡೆತಟ್ಟಿದ್ದಾರೆ, ಕುರುಬ ಸಮಾಜದಲ್ಲಿ ಯಾವುದೆ ಬಿರುಕು ಇಲ್ಲ, ನನಗೆ ನಗರ ಪ್ರದೇಶದಲ್ಲಿ ಹೆಚ್ಚಿಗೆ ಬೆಂಬಲ ಇಲ್ಲ, ಹಳ್ಳಿ ಪ್ರದೇಶದಲ್ಲಿ ಇದೆ. ಇನ್ನೂ ನನಗೆ ಆನೆ ಬಲ ಬಂದಿದೆ, ಯಾಕಂದ್ರೆ ದಲಿತರು, ಗೊಲ್ಲ ಸಮಯದಾಯದವರು ಸಿದ್ದರಾಮಯ್ಯ ವಿರುದ್ದ ಕರಪತ್ರಗಳನ್ನು ಹಂಚುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೋಲಾರದಲ್ಲಿ ಬೆಂಕಿ ಇಟ್ಟಿದ್ದೀರ: ಎ.ಕೃಷ್ಣಪ್ಪ, ವಿ.ಅರ್.ಪಾಟೀಲ್, ಶಿವಳ್ಳಿ ಹೀಗೆ ಸಾಕಷ್ಟು ನಾಯಕರಿಗೆ ಮೋಸ ಮಾಡಿದ್ದಾರೆ ಅವರು ಸುಮ್ಮನೆ ಬಿಡಲ್ಲ, ಕೋಲಾರದಲ್ಲಿ ಬೆಂಕಿ ಇಟ್ಟಿದ್ದೀರ ಯಾವುದೆ ಕಾರಣಕ್ಕು ಯೂ ಟರ್ನ್ ಹೊಡಿಬೇಡಿ, ಅಹಿಂದ ಜನರು ಇರುವ ಜಿಲ್ಲೆಯಲ್ಲಿ ಬೆಂಕಿ ಹಾಕಿದ್ದೀರಿ ಎಂದು ಕಿಡಿಕಾರಿದ್ರು. ಇನ್ನೂ ಹಾಲು ಕೊಡುವ ಕರು ನಿಖಿಲ್ ಕುಮಾರಸ್ವಾಮಿಯನ್ನ ಮುಗಿಸಿದ್ದೀರಿ, ಕುಮಾರಸ್ವಾಮಿ ಬಿಡ್ತಾರಾ, ಜೆಡಿಎಸ್, ವಕ್ಕಲಿಗರು ಇವರನ್ನ ಬಿಡ್ತಾರಾ ಎಂದು ಪ್ರಶ್ನಿಸಿದ ಅವರು ಸಿದ್ದರಾಮಯ್ಯ ಸ್ವಯಂ ಪ್ರೇರಣೆಯಿಂದ ಇಲ್ಲಿಗೆ ಬರುತ್ತಿರುವುದು, ಪಾಪ ರಮೇಶ್ ಕುಮಾರ್ ಒತ್ತಡ ಹಾಕಿಲ್ಲ, ಬೆಂಕಿ ಹಾಕಿದ್ಯಾ ನಿಂಗೆ ತಾಕತ್ ಇದ್ರೆ, ಯೂಟರ್ನ್ ಹೊಡೆಯಬೇಡ ಎಂದು ಸವಾಲ್ ಹಾಕಿದರು.
ಮುಖ್ಯಮಂತ್ರಿಗೆ ಧಮ್ ಇದ್ರೆ ಒಂದೇ ವೇದಿಕೆಗೆ ಚರ್ಚೆಗೆ ಬರಲಿ: ಸಿದ್ದರಾಮಯ್ಯ ಸವಾಲು
ಸಿದ್ದರಾಮಯ್ಯ ಯೂ ಟರ್ನ್ ಹೊಡಿತಾರೆ: ಕೋಲಾರ ಸ್ಪರ್ಧೆಯಿಂದ ಸಿದ್ದರಾಮಯ್ಯ ಯೂ ಟರ್ನ್ ಹೊಡಿತಾರೆ ಅಂತ ನನ್ನ ಅನಿಸಿಕೆ ,ಸ್ವಾಭಿಮಾನ,ಶಕ್ತಿ,ತಾಕತ್ ಇದ್ದರೆ ಸಿದ್ದರಾಮಯ್ಯ ಇಲ್ಲೇ ಸ್ಪರ್ಧೆ ಮಾಡಬೇಕು,ನಾನು ಹೈವೋಲ್ಟೇಜ್ ಹಾಗೂ ನಾನು ಹಸಿದ ಹೆಬ್ಬುಲಿ, ನನ್ ಹತ್ರ ಬಂದ್ರೆ ಬರ್ನ್ ಆಗೋಗ್ತಾರೆ, ಮೈ ತುಂಬ ಕರೆಂಟ್ ಇದೆ. ಅಲ್ಲದೆ ಸಿದ್ದರಾಮಯ್ಯ ಇಲ್ಲಿ ಮೂರನೆ ಸ್ಥಾನಕ್ಕೆ ಹೋಗುವುದು ಖಚಿತ ಎಂದು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.