ಕೋಲಾರ(ನ.02): ಹಿಂದಿ ಗುಲಾಮರಂತೆ ವರ್ತಿಸುತ್ತಿರುವ ರಾಜ್ಯದ ಮುಖ್ಯ ಮಂತ್ರಿಗಳು ಶಾಲೆಗಳು, ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಾವುಟ ಹಾರಿಸುವುದಕ್ಕೆ ನಿಷೇಧ ಹೇರಿರು ವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮೇಡಿಹಾಳ ಎಂ.ಕೆ.ರಾಘವೇಂದ್ರ ಖಂಡಿಸಿದ್ದಾರೆ.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತಾಲೂಕಿನ ನರಸಾ ಪುರ ಕೈಗಾರಿಕಾ ಪ್ರದೇಶದಿಂದ ಹೊರಟ ಕರವೇಯ ‘ಕನ್ನಡ ರಥ ನಮ್ಮ ಪಥ’ ಶೀರ್ಷಿಕೆ ಯಲ್ಲಿ ಕನ್ನಡ ತೇರಿಗೆ ಚಾಲನೆ ನೀಡಿ ಅವರು ಮಾತನಾಡಿದ್ದಾರೆ. ರಾಷ್ಟ್ರಧ್ವಜದ ಬಗ್ಗೆ ನಮಗೆ ಗೌರವವಿದೆ. ಹಾಗೆಯೇ ಕನ್ನಡ ಭಾಷೆ, ನಾಡಿಗೆ ಪ್ರತ್ಯೇಕ ಬಾವುಟದ ಅಗತ್ಯವಿದೆ. ಬಾವುಟ ಪಡೆಯಲು ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ಬಾಲಕನ ಸೊಂಟಕ್ಕೆ ಇಂಜೆಕ್ಷನ್ ನೀಡುವಾಗ ಮುರಿದ ಸೂಜಿ: ಹೊರ ತೆಗೆಯದೇ ಹಾಗೆ ಬಿಟ್ಟ ನರ್ಸ್

ಸದಾನಂದಗೌಡರು ಮುಖ್ಯ ಮಂತ್ರಿಗಳಾಗಿದ್ದಾಗ ಶಾಲೆ, ಸರ್ಕಾ ರಿ ಕಚೇರಿಗಳಲ್ಲಿ ಕನ್ನಡ ಬಾವುಟ ಹಾರಿಸಲು ಅನುಮತಿ ನೀಡಿದ್ದರು. ಈಗ ಅವರದೇ ಬಿಜೆಪಿ ಸರ್ಕಾರ ಅದಕ್ಕೆ ಅಡ್ಡಿಪಡಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇತ್ತೀಚೆಗೆ ಸಚಿವ ಸುರೇಶ್ ಕುಮಾರ್ ಶಾಲೆಗಳಲ್ಲಿ ಕನ್ನಡ ಭಾಷೆ ಕಡ್ಡಾಯ ಕಲಿಕೆಗೆ ಸೂಚನೆ ನೀಡಿರು ವುದನ್ನು ಸ್ವಾಗತಿಸಿ, ಶಾಲೆಗಳಲ್ಲಿ ಕನ್ನಡ ಬಾವುಟ ಹಾರಿ ಸಲು ಅನುಮತಿ ನೀಡಬೇಕು ಎಂದು ಕೋರಿದ್ಕೆದಾರೆ.

ನಿವೃತ್ತ ಜಿಲ್ಲಾಧಿಕಾರಿ ಸೈಯದ್ ಜಮೀರ್ ಪಾಷ, ತಾವು ಅವಿಭಜಿತ ಜಿಲ್ಲೆಯಲ್ಲಿ ಡಿಸಿಯಾಗಿ ಕೆಲಸ ಮಾಡಿದ್ದು, ಇಲ್ಲಿ ತೆಲುಗು ಇದ್ದರೂ ಕನ್ನಡಪರ ಹೋರಾಟಗಳು ಇಲ್ಲಿಂದಲೇ ಆರಂಭವಾಗುತ್ತವೆ. ಕಲಿಕೆಗೆ ಇಲ್ಲಿ ಕನ್ನಡ ಆಯ್ಕೆ ಮಾಡಿಕೊಳ್ಳುವುದು ಸ್ವಾಗತಾರ್ಹ ಎಂದರು. ವೇಮಗಲ್ ಠಾಣೆ ಪಿಎಸ್‌ಐ ಕೇಶವಮೂರ್ತಿ, ಜಿಪಂ ಸದಸ್ಯ ಸಿ.ಎಸ್. ವೆಂಕಟೇಶ್ ಮಾತನಾಡಿದರು.

ಎರಡು ವರ್ಷಗಳ ನಂತರ ತುಂಬಿದ ಡ್ಯಾಂ, ಕುರಿ ಬಲಿ ನೀಡಿದ ಜನ

ಕನ್ನಡ ರಥ ನಗರ ಪ್ರವೇಶಿಸಿ ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಕನ್ನಡಕ್ಕಾಗಿ ನಾವು, ಕನ್ನಡ ನೆಲ, ಜಲ, ಭಾಷೆ ರಕ್ಷಣೆಗೆ ನಾವು ಸೈನಿಕರು ಎಂದು ಕರವೇ ಕಾರ್ಯಕರ್ತರು ಘೋಷಣೆ ಮೊಳಗಿಸಿ ಜನತೆಯಲ್ಲಿ ಅರಿವು ಮೂಡಿಸಿದರು. ಕನ್ನಡ ರಥದ ಚಾಲನಾ ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿರಾಜು, ಜಿಲ್ಲಾ ಮುಖಂಡರಾದ ಡಿ.ಕೆ.ಪ್ರಭಾಕರಗೌಡ, ಸುರೇಶ್, ಮೆಹಬೂಬ್, ನವೀನ್, ಶ್ರೀನಿವಾಸ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಲತಾಬಾಯಿ ಮಾಡಿಕ್, ನರಸಾಪುರ ಹೋಬಳಿ ಅಧ್ಯಕ್ಷ ನಟೇಶ್‌ಬಾಬು, ಮುರಳಿ, ವೆಂಕಟೇಶ್, ಲೋಕೇಶ್, ಸ್ವಸ್ತಿಕ್ ಶಿವು, ಮಾಲೂರು ತಾಲೂಕು ಅಧ್ಯಕ್ಷ ಶ್ರೀನಿವಾಸ್ ಬೈಕ್ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು.