ಚಾಮರಾಜನಗರ(ನ.02): ಮಲೆ ಮಹದೇಶ್ವರ ಬೆಟ್ಟ ಸುತ್ತಮುತ್ತ ಭಾರೀ ಮಳೆ ತುಂಬಿದ ಗೋಪಿನಾಥಂ ಡ್ಯಾಂಗೆ ಗ್ರಾಮಸ್ಥರಿಂದ ಕುರಿ ಬಲಿ ನೀಡಿರುವ ಘಟನೆ ಗುರುವಾರ ಜರುಗಿದೆ. ಜಿಲ್ಲೆಯ ಹನೂರು ತಾಲೂಕಿನ ಗಡಿಯಂಚಿನ ಗ್ರಾಮ ಹಾಗೂ ದಂತಚೋರ, ಕಾಡುಗಳ್ಳ, ನರ ಹಂತಕ ವೀರಪ್ಪನ್ ಸ್ವಗ್ರಾಮವೂ ಆಗಿರುವ ಗೋಪಿನಾಥಂನ ಗ್ರಾಮದ ಮೇಲ್ಭಾಗದಲ್ಲಿ ಬರುವ ಡ್ಯಾಂ ತುಂಬಿದ್ದು, ಕಳೆದ ಎರಡು ವರ್ಷಗಳಿಂದ ಮಳೆ ಇಲ್ಲದೆ ತುಂಬಿರಲಿಲ್ಲ.

ಬುಧವಾರ ಸಂಜೆ ಮಲೆ ಮಹದೇಶ್ವರ ಬೆಟ್ಟ ತಪ್ಪ ಲ್ಲಿನಲ್ಲಿ ಸುರಿದ ಭಾರೀ ಮಳೆಯಿಂದ ಗೋಪಿ ನಾಥಂ ಡ್ಯಾಂ ಭರ್ತಿಯಾಗಿದೆ. ಈ ಹಿನ್ನೆಲೆ ಗ್ರಾಮಸ್ಥರು ಮೂಢನಂಬಿಕೆಯಿಂದ ಜಲಾಶಯಕ್ಕೆ ಕುರಿ ಬಲಿ ಕೊಟ್ಟಿರುವುದು ವಿವಾದಕ್ಕೂ ಸಹ ಎಡೆ ಮಾಡಿಕೊಟ್ಟಿದೆ.

ಗ್ರಾಮಸ್ಥರು ಮರೆಯದ ಕರಾಳ ದಿನ: ವೀರಪ್ಪನ್ ಉಪಟಳದಿಂದ ಗೋಪಿನಾಥಂ ಜನತೆ ಅಕ್ಷರಶಃ ತತ್ತರಿಸಿ ಹೋಗಿದ್ದರು. ಈ ನಡುವೆ 80ರ ದಶಕದಲ್ಲಿ 39 ವರ್ಷಗಳ ಹಿಂದೆ ಜೋರು ಮಳೆಯಿಂದ ಬೆಳಗಿನ ಜಾವವೇ ಗೋಪಿನಾಥಂ ಡ್ಯಾಂ ತುಂಬಿ ಕಟ್ಟೆ ಹೊಡೆದ ಪರಿಣಾಮ ೪೭ ಜನರು ಹಾಗೂ ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗಿ ಸಾವು ನೋವಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇಂತಹ ದುರ್ಘಟನೆ ಮರುಕಳುಹಿಸದೆ ಇರಲಿ ಎಂಬ ಮೂಢನಂಬಿಕೆಯಿಂದ ಕುರಿ ಬಲಿಯನ್ನು ನೀಡಿದ್ದಾರೆ ಎನ್ನಲಾಗಿದೆ.

ವನ್ಯ ಜೀವಿಗಳಿಗೆ ಆಧಾರ: ಅಪರೂಪದ ವನ ಸಂಪತ್ತು ಮತ್ತು ವನ್ಯ ಜೀವಿಗಳನ್ನು ಹೊಂದಿರುವ ಈ ಭಾಗದಲ್ಲಿ ಜೀವರಾಶಿಗಳು ನೀರಿಗಾಗಿ ಹಾಹಾಕಾರವನ್ನು ಎದುರಿಸುತ್ತಾ ಬಂದಿದ್ದವು. ನೀರು, ಆಹಾರ ಸಿಗದೆ ಅನೇಕ ಪ್ರಾಣಿ ಪಕ್ಷಿಗಳು ಮೃತಪಟ್ಟ ಉದಾಹರಣೆಗಳು ಇದೆ. ಆದರೆ ಇತ್ತೀಚೆಗೆ ಮಲೆ ಮಹದೇಶ್ವರ ಬೆಟ್ಟ ಸೇರಿದಂತೆ ಗೋಪಿನಾಥಂ ಭಾಗದಲ್ಲಿ ಉತ್ತಮ ಮಳೆಯಾದ್ದರಿಂದ ಬಹಳ ವರ್ಷಗಳ ನಂತರ ನೀರು ಗೋಪಿನಾಥಂ ಡ್ಯಾಂನಲ್ಲಿ ಶೇಖರಣೆ ಯಾಗಿ ಹೆಚ್ಚುರಿಯಾಗಿ ಕಾವೇರಿ ನದಿಗೆ ಹೋಗುತ್ತಿದೆ. ಮುಂಬರುವ ಬೇಸಿಗೆಗೆ ಅನುಕೂಲವಾಗಲಿದೆ.

ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು; ಡೆಂಗ್ಯೂ ಶಂಕೆ?

ಗೋಪಿನಾಥಂ ಡ್ಯಾಂನ ಹಿನ್ನೆ ಲೆ ದಂತಚೋರ, ಕಾಡುಗಳ್ಳ, ನರಹಂತಕ ಎಂಬೆಲ್ಲಾ ಕುಖ್ಯಾತಿ ಹೆಸರುಗಳನ್ನು ಗಳಿಸಿದ್ದ ವೀರಪ್ಪನ್ ಹುಟ್ಟೂರಿನಲ್ಲಿರುವ ಯಾವುದೇ ಪ್ರಸಿದ್ಧಿ ಸ್ಥಳಗಳು ಆತನ ಹೆಸರಿನಿಂದಲೇ ಮುನ್ನಲೆಗೆ ಬರುತ್ತಿರುವುದು ವಿಪರ್ಯಸವೇ ಸರಿ. ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗ ವ್ಯಾಪ್ತಿಯ ಗೋಪಿನಾಥಂ ಮಿಸ್ತ್ರಿ ಕ್ಯಾಂಪ್ ಬಳಿ ಇರುವ ಜಲಾಶಯವನ್ನು ಹಾಲಿ ಶಾಸಕ ಆರ್.ನರೇಂದ್ರರವರ ದೊಡ್ಡಪ್ಪ ಜಿ.ವೆಂಕಟೇಗೌಡರ ಕಾಲದಲ್ಲಿ ಶಂಕು ಸ್ಥಾಪನೆಯಾಗಿ ನಂತರ ಮಾಜಿ ಶಾಸಕ ದಿ.ಜಿ.ರಾಜುಗೌಡರ ಅಧಿಕಾರವ ಧಿಯಲ್ಲಿ ಉದ್ಘಾಟನೆಗೊಂಡಿತು.