ACB ದಾಳಿ: ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಾಖಲೆ ಇಲ್ಲದ ಲಕ್ಷ ಲಕ್ಷ ಹಣ..!

ಮಾಲೂರು ಸಾರ್ವಜನಿಕರ ದೂರಿನ ಅನ್ವಯ ಕೋಲಾರ ಎಸಿ ಬಿಯ ಡಿವೈಎಸ್‌ಪಿ ಪುರುಷೋತ್ತಮ್ ನೇತೃತ್ವದ ತಂಡ ಗುರುವಾರ ಇಲ್ಲಿನ ಉಪನೋಂದಣಾಧಿಕಾರಿ ಕಚೇರಿ, ಇಸಿ ವಿತರಣಾ ಕೇಂದ್ರದ ಮೇಲೆ ದಾಳಿ ನಡೆಸಿ, 13 ಲಕ್ಷ ನಗದು ಹಾಗೂ 300 ಕ್ಕೂ ಹೆಚ್ಚು ದಾಖಲೆಗಳನ್ನು ವಶ ಪಡಿಸಿಕೊಂಡಿದೆ.

acb raid in malur sub register office money documents seized

ಕೋಲಾರ(ನ.08): ಮಾಲೂರು ಸಾರ್ವಜನಿಕರ ದೂರಿನ ಅನ್ವಯ ಕೋಲಾರ ಎಸಿ ಬಿಯ ಡಿವೈಎಸ್‌ಪಿ ಪುರುಷೋತ್ತಮ್ ನೇತೃತ್ವದ ತಂಡ ಗುರುವಾರ ಇಲ್ಲಿನ ಉಪನೋಂದಣಾಧಿಕಾರಿ ಕಚೇರಿ, ಇಸಿ ವಿತರಣಾ ಕೇಂದ್ರದ ಮೇಲೆ ದಾಳಿ ನಡೆಸಿ, 13 ಲಕ್ಷ ನಗದು ಹಾಗೂ 300 ಕ್ಕೂ ಹೆಚ್ಚು ದಾಖಲೆಗಳನ್ನು ವಶ ಪಡಿಸಿಕೊಂಡಿದೆ.

ಗುರುವಾರ ಮಧ್ಯಾಹ್ನ 2 ರ ಸುಮಾರಿಗೆ ಎಸಿಬಿ ನಡೆಸಿದ ದಾಳಿಯಲ್ಲಿ ಕಚೇರಿ ಸಮೀಪ ಇದ್ದ ಡಿಟಿಪಿ ಕಚೇರಿಯಲ್ಲಿದ್ದ ಮಧ್ಯವರ್ತಿಗಳನ್ನು ವಶಕ್ಕೆ ಪಡೆದು ವಿಚಾರಣಗೆ ಒಳಪಡಿಸಿದರು. ಈ ಸಂದರ್ಭದಲ್ಲಿ ಬಹುತೇಕ ಡಿಟಿಪಿ ಕೇಂದ್ರಗಳು ಬಾಗಿಲು ಮುಚ್ಚಿಕೊಂಡು ಪರಾರಿಯಾಗಿದ್ದಾರೆ.

ಕೋಲಾರ: ಚುನಾವಣೆ ಪ್ರಚಾರದಲ್ಲಿ ಮಕ್ಕಳ ಬಳಕೆ

ಕಚೇರಿಯಲ್ಲಿ ಸಿಕ್ಕ ಮಾಹಿತಿ ಅನ್ವಯ ಕಚೇರಿ ಬಳಿ ಇದ್ದ ಡಿಟಿಪಿ ಕೇಂದ್ರಗಳ ಮೇಲೆ ಧಾಳಿ ನಡೆಸಿದಾಗ 300 ಕ್ಕೂ ಹೆಚ್ಚು ಕ್ರಯ ಪತ್ರಗಳ ದಾಖಲೆಗಳು ಪತ್ತೆಯಾಗಿವೆ. ಉಪನೋಂದಣಿ ಅಧಿಕಾರಿಗೆ ನೀಡಲು ಸಂಗ್ರಹಿಸಿಟ್ಟಿದ್ದ 13 ಲಕ್ಷ ರು.ಗಳನ್ನು ವಶಕ್ಕೆ ಪಡೆದಿದ್ದಾರೆ.

ಅಧಿಕಾರಿಗಳ ವಿಚಾರಣೆ:

ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಸ್‌ಪಿ ಪುರುಷೋತ್ತಮ್, ಸಾರ್ವಜನಿಕರಿಂದ ಇಲ್ಲಿನ ಭ್ರಷ್ಟಾಚಾರ ಬಗ್ಗೆ ದೂರುಗಳು ಸತತವಾಗಿ ಬರುತ್ತಿದ್ದವು. ಕಳೆದ ಒಂದು ವಾರದಿಂದ ಇಲ್ಲಿನ ಕಚೇರಿ ಹಾಗೂ ಡಿಟಿಪಿ ಕೇಂದ್ರಗಳ ಮೇಲೆ ಕಣ್ಗಾವಲು ಇಡ ಲಾಗಿತ್ತು. ಇಲ್ಲಿನ ಉಪನೋಂದಣಾಧಿಕಾರಿ ಪದ್ಮಾ ವತಿ ಬಳಿ ಇದ್ದ ೬ ಸಾವಿರ ಹೆಚ್ಚುವರಿ ಹಣ ವಶ ಪಡಿಸಿಕೊಳ್ಳಲಾಗಿದೆ. ಇಸಿ ವಿತರಣೆ ಕೇಂದ್ರದಲ್ಲಿ ಸಾರ್ವಜನಿಕರಿಂದ ವಸೂಲಿ ಮಾಡಿದ್ದ 14 ಸಾವಿರ ರು.ಗಳನ್ನು ವಶ ಪಡಿಸಿಕೊಂಡು ಎಲ್ಲ ಅಧಿಕಾರಿ ಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದಿದ್ದಾರೆ.

ಜೈಲಿನಲ್ಲಿದ್ದಾಗ ಮಣ್ಣನ್ನು ತೆಗೆದು ತಲೆ ಮೇಲೆ ಹಾಕ್ತಿದ್ರು ಡಿಕೆಶಿ..!

ಹಣದ ವ್ಯವಹಾರವು ಇಲ್ಲಿನ ಕಚೇರಿಗಳಿಕ್ಕಿಂತ ಹೊರಗಡೆ ಇರುವ ಡಿಟಿಪಿ ಕೇಂದ್ರದಲ್ಲಿ ನಡೆಯುತ್ತಿದ್ದು, ಅವೆಲ್ಲವೂ ಮಧ್ಯವರ್ತಿಗಳ ಅಡ್ಡೆಯಾಗಿದೆ. ಕಳೆದ ತಿಂಗಳು ಇಲ್ಲಿ ನಡೆಸಿದ ಅಧಿಕಾರಿಗಳ ಸಭೆ ಯಲ್ಲಿ ಇಲ್ಲಿನ ಉಪನೋಂದಣಾ ಧಿಕಾರಿ ಪದ್ಮಾ ವತಿ ಅವರಿಗೆ ಅವರ ಮೇಲೆ ಬರುತ್ತಿರುವ ದೂರಿನ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಅವರು ವರ್ತನೆಯನ್ನು ಸರಿಪಡಿಸಿಕೊಳ್ಳಲಿಲ್ಲ ಎಂದರು. ರಾತ್ರಿಯೂ ಮುಂದುವರಿದ ದಾಳಿ: ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾದ ಕಾರ‌್ಯಚರಣೆ ಸಂಜೆ 7 ಗಂಟೆಯಾದರೂ ಮುಂದುವರೆದಿತ್ತು. ಧಾಳಿಯಲ್ಲಿ ತುಮಕೂರಿನ ಎಸಿಬಿ ಡಿವೈಎಸ್‌ಪಿ ಉಮಾಶಂಕರ್, ಚಿಕ್ಕಬಳ್ಳಾಪುರ ಡಿವೈಎಸ್‌ಪಿ ನಾಯ್ದು ಸೇರಿದಂತೆ 4 ಇನ್ಸ್‌ಪೆಕ್ಟರ್ ಗಳು, 22 ಮಂದಿ ಸಿಬ್ಬಂದಿ ಭಾಗವಹಿಸಿದ್ದರು.

ಬಾಡೂಟ, ಸೀರೆ ಕೊಟ್ಟು ಜನ್ರನ್ನ ಮರುಳು ಮಾಡೋಕಾಗಲ್ಲ: ಪುಟ್ಟರಾಜು ಟಾಂಗ್

Latest Videos
Follow Us:
Download App:
  • android
  • ios