ಮಂಡ್ಯ(ನ.08): ಕೆ.ಆರ್.ಪೇಟೆ ಅನರ್ಹ ಶಾಸಕ ನಾರಾಯಣಗೌಡ ಜನರಿಗೆ ಬಾಡೂಟ, ಸೀರೆ ಕೊಟ್ಟು ಮರಳು ಮಾಡಬಹುದು ಅಂದುಕೊಂಡಿದ್ದರೇ ಅದು ಮೂರ್ಖತನ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಕಿಡಿಕಾರಿದ್ದಾರೆ.

ತಾಲೂಕಿನ ಶೀಳನೆರೆ ಹೋಬಳಿಯ ನೀತಿಮಂಗಲದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಾರಾಯಣಗೌಡರ ಸ್ಥಿತಿ ಚಿನ್ನದಂತ ಗಂಡನನ್ನು ಕಳೆದುಕೊಂಡು ಇಲ್ಲೂ ಇಲ್ಲ, ಅಲ್ಲೂ ಇಲ್ಲದಂತಾಗಿದೆ ಎಂದಿದ್ದಾರೆ. ನಾರಾಯಣಗೌಡರಿಗೆ ಕಳೆದ ಚುನಾವಣೆಯಲ್ಲಿ ಟಿಕೆಟ್ ಕೊಡಲು ಪಕ್ಷದ ವಿರೋಧ ಇತ್ತು. ಆದರೆ ಸ್ಥಳೀಯ ಜೆಡಿಎಸ್ ಮುಖಂಡರ ಒತ್ತಾಯದ ಮೇರೆಗೆ ಟಿಕೆಟ್ ಕೊಡಲಾಯಿತು. ದೇವೇಗೌಡರ ಬೆಂಬಲದಿಂದ ಚುನಾವಣೆ ಗೆದ್ದಿದ್ದ ನಾರಾಯಣಗೌಡರು ಈ ಉಪಚುನಾವಣೆಯಲ್ಲಿ ನಿಂತರೇ ತಾಲೂಕಿನ ಮತದಾರರು ತಕ್ಕಶಾಸ್ತಿಯನ್ನು ಮಾಡಲಿದ್ದಾರೆ ಎಂದಿದ್ದಾರೆ.

ಮುಂಬೈನಲ್ಲಿ ನಾಟಕ ಮಾಡಿ ಆಸ್ಪತ್ರೆ ಸೇರಿದ್ರಂತೆ ನಾರಾಯಣ ಗೌಡ..!

ಜಿಪಂ ಸದಸ್ಯ ಬಿ.ಎಲ್ .ದೇವರಾಜು ಮಾತ ನಾಡಿ, ಕುಮಾರಸ್ವಾಮಿ ರಾಜ್ಯದ ರೈತರ ಕಣ್ಣೊರೆಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಸಿಎಂ ಆಗಿದ್ದಾಗ ಕೊಟ್ಟ ಮಾತಿನಂತೆ ರೈತರ ಸಾಲಮನ್ನಾ ಮಾಡಿದ್ದಾರೆ. ಜಿಲ್ಲೆಯ 92 ಸಾವಿರ ರೈತ ಕುಟುಂಬ ಗಳಿಗೆ ಸಾಲ ಮನ್ನಾವಾಗಿದೆ. ಕುಮಾರಸ್ವಾಮಿ ಸಿಎಂ ಆಗಿದ್ದರೆ ಮಂಡ್ಯ ಸಕ್ಕರೆ ಕಾರ್ಖಾನೆಗಳು ಆರಂಭವಾಗು ತ್ತಿದ್ದವು ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡ ಎ.ಆರ್.ರಘು, ಬಸ್ ಕೃಷ್ಣೇಗೌಡ, ತಾಲೂ ಕು ಅಧ್ಯಕ್ಷ ಜಾನಕೀರಾಮ್, ತಾಪಂ ಸದಸ್ಯ ವಿಜಯಕುಮಾರ್, ಮೋಹನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್, ಟಿಎಪಿ ಸಿಎಂಎಸ್ ನಿರ್ದೇಶಕ ಎಚ್.ಟಿ. ಲೋಕೇಶ್, ಹರಳಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಹರೀಶ್, ಎಪಿಎಂಸಿ ಅಧ್ಯಕ್ಷ ಮಲ್ಲೇಶ್ ಇತರರಿದ್ದರು.

ಮಂಡ್ಯ: ಅನರ್ಹ ಶಾಸಕ ನಾರಾಯಣಗೌಡ ಹತ್ಯೆಗೆ ಸುಪಾರಿ..?