ಕೋಲಾರ(ನ.07): ಕೋಲಾರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಸಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಬಿಸಿಲಿನಲ್ಲಿಯೇ ಚಿಕ್ಕ, ಪುಟ್ಟ ಮಕ್ಕಳೂ ಪಕ್ಷದ ಚಿಹ್ನೆ ಹಿಡಿದು ಪ್ರಚಾರ ನಡೆಸಿದ್ದಾರೆ.

ಮುಳಬಾಗಿಲು ನಗರಸಭೆಯ ವಾರ್ಡ್​ ನಂ-3 ಗಣೇಶ ಪಾಳ್ಯದಲ್ಲಿ ಘಟನೆ ನಡೆದಿದೆ. ಸ್ಥಳೀಯ ನಗರಸಭೆ ಚುನಾವಣೆ ಪ್ರಚಾರದಲ್ಲಿ ಮಕ್ಕಳ ಬಳಕೆ ಮಾಡಿರುವ ಬಗ್ಗೆ ಆರೋಪ ವ್ಯಕ್ತಪಡಿಸಿದ್ದು, ಶಾಲೆ ತೊರೆದು ಮಕ್ಕಳು ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಕೋಲಾರದ ಮುಳಬಾಗಿಲು ನಗರಸಭೆ ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಳ್ಳಲಾಗಿದೆ.

ದಾರೀಲಿ ಹೋಗೋರಿಗೆಲ್ಲ ಪ್ರತಿಕ್ರಿಯೆ ಕೊಡ್ಬೇಕಾ..? ಮಾಧ್ಯಮದ ಮೇಲೆ ಶಾಸಕ ಗರಂ

ಚುನಾವಣೆ ಸಮೀಪಿಸಿದ್ದು, ಮಹಿಳೆಯರೂ ಸೇರಿದಂತೆ ಗ್ರಾಮಸ್ಥರು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಚಿಕ್ಕ ಮಕ್ಕಳನ್ನು ಎತ್ತಿಕೊಂಡು ಮಹಿಳೆಯರೂ ಪ್ರಚಾರ ಅಭಿಯಾನದಲ್ಲಿ ಭಾಗವಹಿಸಿದ್ದಾರೆ.

ಜೆಡಿಎಸ್​ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಆರೋಪ ಕೇಳಿ ಬಂದಿದ್ದು, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್​ ಹಾಗೂ ಜೆಡಿಎಸ್​ ಅಭ್ಯರ್ಥಿ ಡಿ.ಸೋಮಣ್ಣ ಪರ ಮಕ್ಕಳಿಂದ ಪ್ರಚಾರ ಮಾಡಿಸಿಕೊಳ್ಳಲಾಗಿದೆ ಎಂದು ಆರೋಪ ಕೇಳಿ ಬಂದಿದೆ.

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಬಾಂಗ್ಲಾ ಅಕ್ರಮ ವಲಸಿಗ ಮಹಿಳೆ ಅರೆಸ್ಟ್