ಕೊಡಗು ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ್ ತಮ್ಮ ಮಗಳನ್ನು ಸರ್ಕಾರಿ ಅಂಗನವಾಡಿಗೆ ಕಳಿಸುವ ಮೂಲಕ ಮಾದರಿಯಾಗಿದ್ದಾರೆ.
ಕೊಡಗು [ಅ.15]: ಕೊಡಗು ಜಿಲ್ಲೆಯ ಮಹಿಳಾ ಎಸ್ ಪಿ ಡಾ.ಸುಮನ್ ಪನ್ನೇಕರ್ ಮಾದರಿಯಾಗುವಂತೆ ನಡೆದುಕೊಂಡಿದ್ದಾರೆ.
ತಮ್ಮ ಪುಟ್ಟ ಮಗಳನ್ನು ಸರ್ಕಾರಿ ಅಂಗನವಾಡಿಗೆ ಕಳಿಸಿ ಕನ್ನಡ ಕಲಿಗೆ ಒತ್ತು ನೀಡಿದ್ದಾರೆ. ಗ್ರಾಮೀಣ ಮಕ್ಕಳೊಂದಿಗೆ ಬೆರೆಯುವ ಉದ್ದೇಶದಿಂದ ಮಗುವನ್ನು ಅಂಗನವಾಡಿಗೆ ನಿತ್ಯವೂ ಕಳಿಸಿ ತಾವು ಕೆಲಸಕ್ಕೆ ತೆರಳುತ್ತಾರೆ ಸುಮನ್.

ಮಡಿಕೇರಿ ನಗರದ ಎಫ್ ಎಂ ಸಿ ಕಾಲೇಜು ಹಿಂದೆ ಸುಂದರ ಪರಿಸರದಲ್ಲಿ ಇರುವ ಅಂಗನವಾಡಿಗೆ ಜಿಲ್ಲಾ ಪೊಲೀಸ್ ಅಧಿಕಾರಿ ಸುಮನ್ ಅವರ ಮಗಳು ತೆರಳುತ್ತಿದ್ದಾಳೆ.
ಮಡಿಕೇರಿ ಮಹಿಳಾ ದಸರಾ : ಸಾಂಪ್ರದಾಯಿಕ ಉಡುಪಲ್ಲಿ ಮಿಂಚಿದ DC, CEO, SP...
ಆಟ, ಊಟದಲ್ಲಿ ಅಲ್ಲಿನ ಎಲ್ಲಾ ಮಕ್ಕಳೊಂದಿಗೆ ಸುಮನ್ ಅವರ ಪುಟ್ಟ ಮಗಳು ಪಾಲ್ಗೊಂಡು ಸರ್ಕಾರಿ ಅಂಗನವಾಡಿಯಲ್ಲಿ ಕಲಿಯುತ್ತಿದ್ದಾಳೆ.

ಕೆಲ ದಿನಗಳ ಹಿಂದಷ್ಟೇ ಮಡಿಕೇರಿಯಲ್ಲಿ ನಡೆದಿದ್ದ ದಸರಾ ಕಾರ್ಯಕ್ರಮದಲ್ಲಿ ಸ್ಥಳೀಯ ಸಾಂಪ್ರದಾಯಿಕ ಉಡುಗೆ ತೊಟ್ಟು ಸುದ್ದಿಯಾಗಿದ್ದರು. ಇದೀಗ ಎಲ್ಲರಿಗೂ ಮಾದರಿಯಾಗುವಂತೆ ನಡೆದುಕೊಂಡಿದ್ದಾರೆ.


