Asianet Suvarna News Asianet Suvarna News

ನೆರೆ ವೇಳೆ ಉತ್ತಮ ಕೆಲಸ: ಅಧಿಕಾರಿಗಳಿಗೆ ಸನ್ಮಾನ

ಮಡಿಕೇರಿ ಪ್ರವಾಹ ಸಂದರ್ಭ ಕೆಲಸ ಮಾಡಿದ ಅಧಿಕಾರಿಗಳಿಗೆ ಸನ್ಮಾನ ಮಾಡಲಾಗಿದೆ. ಪ್ರವಾಹದ ಸಂದರ್ಭ, ಮನೆ, ಜಮೀನು ಕಳೆದುಕೊಂಡ ಜನರಿಗೆ ತುರ್ತಾಗಿ ಸ್ಪಂದಿಸಿದ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Officers worked during flood are honored in Kodagu
Author
Bangalore, First Published Oct 11, 2019, 1:37 PM IST

ಮಡಿಕೇರಿ(ಅ.11): ನಾಪೋಕ್ಲು ಹೊದ್ದೂರು ಗ್ರಾಮ ಪಂಚಾಯಿತಿ ಗ್ರಾಮಸಭೆಯು ಕಬ್ಬಡಗೇರಿ ದವಸಭಂಡಾರ ಸಭಾಂಗಣದಲ್ಲಿ ನಡೆಯಿತು. ವಿವಿಧ ಅಭಿವೃಧ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಲಾಯಿತು.

ಪ್ರಕೃತಿ ವಿಕೋಪದಿಂದ ರಸ್ತೆಗಳು ಹಾಳಾಗಿದ್ದು ಸಾರ್ವಜನಿಕರು ಈ ಕುರಿತು ಮಾಡಿದ ಪ್ರಸ್ತಾವನೆಗೆ ಉತ್ತರಿಸಿದ ಜಿ.ಪಂ. ಸದಸ್ಯಮುರಳಿ ಕರುಂಬಯ್ಯ ಮಾತನಾಡಿ, ವಿಶೇಷ ಪ್ರಕೃತಿ ವಿಕೋಪ ಅನುದಾನದಲ್ಲಿ ರಸ್ತೆಗಳು ಹಾನಿಯಾಗಿರುವುದು ಸರಿಪಡಿಸಲು ಕ್ರಿಯಾಯೋಜನೆ ರೂಪಿಸಲಾಗುತ್ತಿದೆ.

ಸುಂಟಿಕೊಪ್ಪ: ವಿದೇಶಿ ಆಟಗಾರನಿಂದ ಮಕ್ಕಳಿಗೆ ಫುಟ್ಬಾಲ್‌ ತರಬೇತಿ

ತನ್ನ ಜಿ.ಪಂ ಅನುದಾನದಲ್ಲಿ ಹಾಗೂ ಸರ್ಕಾರದ ವಿಶೇಷ ಅನುದಾನಲ್ಲಿ ಕಾಮಗಾರಿಗಳು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು. ಮುಖ್ಯಮಂತ್ರಿ ಗ್ರಾಮ ವಿಕಾಸಯೋಜನೆ ಹೊದ್ದೂರು ಗ್ರಾಮಕ್ಕೆ ಮಂಜೂರಾಗಿದ್ದು ಸದರಿ ಅನುದಾನದಲ್ಲಿ ಟೆಂಟರ್‌ ಪ್ರಕ್ರಿಯೆ ಮುಗಿದಿದ್ದು ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಾ.ಪಂ. ಅಧ್ಯಕ್ಷೆ ತೆಕ್ಕಡ ಶೋಭಾ ಮೋಹನ್‌ ಮಾಹಿತಿ ನೀಡಿದರು. ಹೊದವಾಡ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಕುರಿತು ಗ್ರಾ.ಪಂ. ಮಾಜಿ ಅಧ್ಯಕ್ಷ ಹಂಸ ಮಾಹಿತಿ ನೀಡಿದರೆ ಗ್ರಾಮಸ್ಥರಾದ ಮೊಣ್ಣಪ್ಪರವರು ವಿವಿಧ ವಿಷಯಗಳ ಕುರಿತು ಸಭೆಯ ಗಮನ ಸೆಳೆದರು. ಗ್ರಾ.ಪಂ. ಅಧ್ಯಕ್ಷ ಕೆ.ಪಿ. ದಿನೇಶ್‌ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಮಡಿಕೇರಿ: ಡಿಜೆ ಹಾಡು, ಕುಣಿತಕ್ಕೆ ಪ್ರೇಕ್ಷಕರು ಫಿದಾ

ದಿನೇಶ್‌ ಮಾತನಾಡಿ, ತೀವ್ರ ಪ್ರಕೃತಿ ವಿಕೋಪ ಸಂಧರ್ಭ ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿದ ಜಿಲ್ಲಾಡಳಿತಕ್ಕೆ ಸ್ಥಳೀಯ ಆರೋಗ್ಯ ಇಲಾಖೆ, ಚೆಸ್ಕಾಂ, ಪೋಲೀಸ್‌ ಇಲಾಖೆ, ಗಂಜಿಕೇಂದ್ರದ ಉಸ್ತುವಾರಿ ನೋಡಲ್‌ ಅಧಿಕಾರಿಗಳಿಗೆ ಶಿಕ್ಷಣ ಇಲಾಖೆಗೆ ಸ್ವಯಂಸೇವಾ ಸಂಸ್ಥೆಗಳು ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು. ಎಲ್ಲ ಇಲಾಖೆಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಗ್ರಾಮ ಸಭೆಯಲ್ಲಿ ನೋಡಲ್‌ ಅಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಕುಸುಮಾವತಿ, ಸರ್ವ ಸದಸ್ಯರು ಗ್ರಾಮಸ್ಥರು ಹಾಜರಿದ್ದರು. ಕಾರ್ಯದರ್ಶಿ ಚಂದ್ರಶೇಖರ್‌ ವರದಿ ಮಂಡಿಸಿದರು. ಪಿಡಿಒ ಅಬ್ದುಲ್ಲಾ ಸ್ವಾಗತಿಸಿದರು. ಅಧ್ಯಕ್ಷ ದಿನೇಶ್‌ ವಂದಿಸಿದರು.

ಪಿಡಿಒ, ಗ್ರಾಮ ಲೆಕ್ಕಿಗರಿಗೆ ಸನ್ಮಾನ:

ಆಗಸ್ಟ್‌ 8 ರಿಂದ 17ರ ವರೆಗೆ ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹ ಸಂದರ್ಭದಲ್ಲಿ ದಿನದ 24 ತಾಸು ಗ್ರಾಮದಲ್ಲಿದ್ದು ನಿರಾಶ್ರಿತರ ಶಿಬಿರಗಳು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸಿ ಎಲ್ಲ ಅರ್ಹ ನಿರಾಶ್ರಿತರಿಗೂ ಶೀಘ್ರದಲ್ಲಿ ಪರಿಹಾರ ಒದಗಿಸಿಕೊಟ್ಟಪಿಡಿಒ ಎ.ಎ. ಅಬ್ದುಲ್ಲ ಹಾಗೂ ಗ್ರಾಮ ಲೆಕ್ಕಿಗರಾದ ಸಂತೋಷ್‌ ಪಾಟೀಲ್‌ ಅವರಿಗೆ ಸಭೆಯಲ್ಲಿ ಸನ್ಮಾನಿಸಲಾಯಿತು.

Follow Us:
Download App:
  • android
  • ios