ಮಡಿಕೇರಿ ಮಹಿಳಾ ದಸರಾ : ಸಾಂಪ್ರದಾಯಿಕ ಉಡುಪಲ್ಲಿ ಮಿಂಚಿದ DC, CEO, SP

ಮಡಿಕೇರಿ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಮೂವರು ಮಹಿಳಾ ಅಧಿಕಾರಿಗಳು ಎಲ್ಲರ ಗಮನ ಸೆಳೆದರು. ಮಡಿಕೇರಿ ಸಾಂಪ್ರದಾಯಿಕ ಉಡುಪಲ್ಲಿ ಇಲ್ಲಿನ DC, CEO, CFO ಮಿಂಚಿದರು. 

Madikeri Dasara Women Officers in Traditional Wears

ಕೊಡಗು [ಅ.06]:   ಮಂಜಿನ ನಗರಿ ಮಡಿಕೇರಿಯಲ್ಲಿ ಮಹಿಳಾ ದಸರಾ ಸಂಭ್ರಮ ಕಳೆಗಟ್ಟಿತ್ತು. ಈ ವೇಳೆ ಇಲ್ಲಿನ ಮೂವರು ಅಧಿಕಾರಿಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.

ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್, ಎಸ್ಪಿ ಡಾ. ಸುಮನ್ ಡಿ ಪನ್ನೇಕರ್, ಸಿಇಓ ಲಕ್ಷ್ಮಿಪ್ರಿಯಾ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಕೊಡಗು ಡಿಸಿ ದಕ್ಷ ಅಧಿಕಾರಿಣಿ ಶ್ರೀ ವಿದ್ಯಾ ವರ್ಗಾವಣೆ : ಜನರಿಂದ ವಿರೋಧ...

ಕೊಡಗಿನ 3 ಮಹಿಳಾ ಉನ್ನತಾಧಿಕಾರಿಗಳು ಕೊಡವ ಸಾಂಪ್ರದಾಯಿಕ ಉಡುಪು ಧರಿಸಿದ್ದು,  ಮಹಿಳಾ ದಸರಾ ಕಾರ್ಯಕ್ರಮದ ಹೈಲೈಟ್ ಆಗಿತ್ತು. ಸಾಂಪ್ರದಾಯಿಕ ಉಡುಪಿನ ಅಧಿಕಾರಿಗಳ ಫೋಟೊಗೆ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಯಿತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಹಿಳಾ ದಸರಾ ಪ್ರಯುಕ್ತ ಮಡಿಕೇರಿಯಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಒಟ್ಟಿನಲ್ಲಿ ಸಂಭ್ರಮದಿಂದ ಮಡಿಕೇರಿಯಲ್ಲಿ ಮಹಿಳಾ ದಸರಾ ಕಾರ್ಯಕ್ರಮ ನಡೆಯಿತು. 

Latest Videos
Follow Us:
Download App:
  • android
  • ios