Lpg gas saving tips : ರುಚಿಯಾಗಿ ಅಡುಗೆ ಮಾಡೋದ್ರ ಜೊತೆ ಆಹಾರ, ಗ್ಯಾಸ್ ಉಳಿಸೋದನ್ನೂ ಕಲಿತಿರಬೇಕು. ಸ್ಮಾಟ್ ಆಗಿ ಗ್ಯಾಸ್ ಬಳಸಿದ್ರೆ 25 ದಿನಕ್ಕೇ ಖಾಲಿಯಾಗೋ ಗ್ಯಾಸ್ ಮತ್ತೊಂದು ಹತ್ತು ದಿನ ಹೆಚ್ಚಿಗೆ ಬರುತ್ತೆ. ಅದು ಹೇಗೆ ಗೊತ್ತಾ? 

ದಿನ ಬಳಕೆ ವಸ್ತುಗಳಲ್ಲಿ ಮುಖ್ಯವಾಗಿದ್ದು ಗ್ಯಾಸ್ ಸಿಲಿಂಡರ್ (Gas cylinder). ಅಡುಗೆ ಮಾಡ್ವಾಗ ಸಿಲಿಂಡರ್ ಖಾಲಿ ಆದ್ರೆ ಕೈಕಾಲು ಆಡೋದಿಲ್ಲ. ಹೊಸ ಸಿಲಿಂಡರ್ ತಂದು 1 ತಿಂಗಳಾಗಿಲ್ಲ ಆಗ್ಲೇ ಖಾಲಿಯಾಯ್ತು ಅಂತ ಗೊಣಗಿಕೊಳ್ತೇವೆ. ಸಿಲಿಂಡರ್ ಅತಿ ಕಡಿಮೆ ದಿನ ಬರ್ತಾ ಇದೆ ಅಂದ್ರೆ ಅದ್ರಲ್ಲಿ ಅಡುಗೆ ಮಾಡೋರ ತಪ್ಪಿದೆ. ನೀವು ರುಚಿಯಾಗಿ ಅಡುಗೆ ಮಾಡೋದು ಮಾತ್ರವಲ್ಲ, ಗ್ಯಾಸ್ ಸಿಲಿಂಡರ್ ಹೇಗೆ ಸೇವ್ ಮಾಡ್ಬೇಕು ಅನ್ನೋದನ್ನು ತಿಳಿದಿರಬೇಕು. ಕೆಲವೊಂದು ಟಿಪ್ಸ್ ಫಾಲೋ ಮಾಡುವ ಮೂಲಕ ನೀವು ಸಿಲಿಂಡರ್ ಸೇವ್ ಮಾಡ್ಬಹುದು.

ಅಡುಗೆ ಸಿಲಿಂಡರ್ ಉಳಿಸೋದು ಹೇಗೆ? : 

ಪ್ರಸ್ತುತ ಬೆಂಗಳೂರಿನಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 855 ರೂಪಾಯಿ ಗಡಿ ದಾಟಿದೆ. ತಿಂಗಳಿಗೆ ಎರಡು ಬಾರಿ ಇಷ್ಟೊಂದು ಹಣ ಖರ್ಚು ಮಾಡೋದು ಸಾಮಾನ್ಯವಲ್ಲ. ನಿಮ್ಮ ಮನೆ ಅಡುಗೆ ಸಿಲಿಂಡರ್ ತಿಂಗಳಿಗಿಂತ ಹೆಚ್ಚು ಟೈಂ ಬರಬೇಕು ಅಂದ್ರೆ ಸ್ವಲ್ಪ ಬುದ್ಧಿ ಉಪಯೋಗಿಸಿ.

ಫ್ರಿಜ್‌ನಲ್ಲಿ ಇಟ್ರೂ ತರಕಾರಿ ಕೆಡುತಿದ್ರೆ ಈ ರೀತಿ ಇಡಿ, ವಾರವಾದ್ರೂ ಫ್ರೆಶ್‌ನೆಸ್‌ ಹಾಗೇ ಇರುತ್ತೆ

ಫ್ರಿಡ್ಜ್ (fridge) ನಲ್ಲಿರುವ ಆಹಾರವನ್ನು ಗ್ಯಾಸ್ ಮೇಲೆ ಇಡಬೇಡಿ : ಫ್ರಿಡ್ಜ್ ನಲ್ಲಿರುವ ತಣ್ಣನೆಯ ಆಹಾರವನ್ನು ಫ್ರಿಡ್ಜ್ ನಿಂದ ತೆಗೆದು ನೇರವಾಗಿ ಗ್ಯಾಸ್ ಮೇಲೆ ಇಡಬೇಡಿ. ಹಾಲು ಅಥವಾ ಸಾಂಬಾರ್ ರೆಫ್ರಿಜರೇಟರ್ನಲ್ಲಿ ಇಟ್ಟಿದ್ದರೆ, ಅದನ್ನು ನೇರವಾಗಿ ಗ್ಯಾಸ್ ಮೇಲೆ ಇಟ್ಟಾಗ ಅದು ಬಿಸಿಯಾಗಲು ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಹೆಚ್ಚು ಗ್ಯಾಸ್ ಖಾಲಿಯಾಗುತ್ತದೆ. ಅದರ ಬದಲು ನೀವು ಹಾಲು ಅಥವಾ ಸಾಂಬಾರನ್ನು ಸ್ವಲ್ಪ ಸಮಯ ಹೊರಗೆ ತೆಗೆದಿಡಿ. ಕೋಣೆಯ ಉಷ್ಣಾಂಶಕ್ಕೆ ಬರಲು ಬಿಡಿ. ನಂತ್ರ ಗ್ಯಾಸ್ ಮೇಲೆ ಇಟ್ಟರೆ, ಕಡಿಮೆ ಉರಿಯಲ್ಲಿ ಬೇಗ ಹಾಲನ್ನು ನೀವು ಬಿಸಿ ಮಾಡಬಹುದು.

ಪ್ರೆಶರ್ ಕುಕ್ಕರ್ ಬಳಸಿ : ಅಡುಗೆಗಾಗಿ ಪ್ರೆಶರ್ ಕುಕ್ಕರ್ಗಳನ್ನು ಹೆಚ್ಚಾಗಿ ಬಳಸಿ. ಪಾತ್ರೆಗಳನ್ನು ಬಳಸುವುದಕ್ಕಿಂತ ಪ್ರೆಶರ್ ಕುಕ್ಕರ್ನಲ್ಲಿ ಅಕ್ಕಿ ಬೇಯಿಸುವುದರಿಂದ ಶೇಕಡಾ 20ರಷ್ಟು ಗ್ಯಾಸ್ ಉಳಿಸಬಹುದು.

ನೆನೆಸಿಟ್ಟು ಅಡುಗೆ ಮಾಡಿ : ನೀವು ಅಕ್ಕಿ ಹಾಗೂ ಬೇಳೆಗಳನ್ನು ಸ್ವಲ್ಪ ಸಮಯ ನೆನೆಹಾಕಿ. ನಂತ್ರ ಅದನ್ನು ಗ್ಯಾಸ್ ಮೇಲಿಡಿ. ಬೇಳೆಯನ್ನು ನೀವು ತೊಳೆದ ತಕ್ಷಣ ಗ್ಯಾಸ್ ಮೇಲಿಟ್ಟರೆ ಅದು ಬೇಯಲು ಹೆಚ್ಚಿನ ಸಮಯ ಬೇಕು. ಅದೇ ನೀವು ಸ್ವಲ್ಪ ಸಮಯ ನೆನೆಸಿಟ್ಟು ಬೇಯಿಸಿದ್ರೆ ಕಡಿಮೆ ಸಮಯ ಸಾಕು. ಕಡಲೆ ಬೇಳೆಯನ್ನು ನೆನೆಹಾಕಿ ಬೇಯಿಸಿದ್ರೆ ಶೇಕಡಾ 46ರಷ್ಟು ಗ್ಯಾಸ್ ಉಳಿಯುತ್ತದೆ.

ಗೋಧಿ ಇದ್ರೆ ಸಾಕು..ಮನೆಯಲ್ಲೇ ಮಿಕ್ಸಿಯಲ್ಲಿ ಹಿಟ್ಟು ಮಾಡ್ಬೋದು, ಸಖತ್ ಟೇಸ್ಟಿ, ಹೆಲ್ತ್‌ಗೂ ಒಳ್ಳೇದು

ಗ್ಯಾಸ್ ಪೈಪ್ ಪರೀಕ್ಷೆ : ಅಡುಗೆ ಸಿಲಿಂಡರ್ ಅಪಾಯಕಾರಿ. ಅಪಘಾತದಿಂದ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಗ್ಯಾಸ್ ಉಳಿಸುವ ಜೊತೆಗೆ ಸುರಕ್ಷತೆ ಬಗ್ಗೆಯೂ ನಾವು ಆಲೋಚನೆ ಮಾಡ್ಬೇಕು. ಗ್ಯಾಸ್ ಸಿಲಿಂಡರ್ ನಿಯಂತ್ರಕ ಮತ್ತು ಪೈಪ್ಗಳನ್ನು ನಿಯಮಿತವಾಗಿ ಪರಿಶೀಲಿಸಿ. ಗ್ಯಾಸ್ ಸೋರಿಕೆ ಆಗ್ತಿದೆ ಅನ್ನಿಸಿದ್ರೆ ತಕ್ಷಣ ದುರಸ್ತಿ ಮಾಡಿಸಿ. ಸಣ್ಣ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗ್ತಿದ್ದರು ಗ್ಯಾಸ್ ತುಂಬಾ ದಿನ ಬರೋದಿಲ್ಲ. ಸಣ್ಣ ರಿಪೇರಿ ನಿಮ್ಮ ಸುರಕ್ಷತೆ ಹಾಗೂ ಉಳಿತಾಯ ಎರಡನ್ನೂ ಮಾಡುತ್ತದೆ.

ಯಾವಾಗಲೂ ಬರ್ನರ್ ಸ್ವಚ್ಛವಾಗಿಡಿ : ಗ್ಯಾಸ್ ಸ್ಟೌವ್ ಬರ್ನರ್ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಕೊಳಕು ಅಥವಾ ಆಹಾರ ಅದ್ರಲ್ಲಿ ಸಿಕ್ಕಿ ಬಿದ್ದಿದ್ದರೆ ಗ್ಯಾಸ್ ಸರಿಯಾಗಿ ಉರಿಯೋದಿಲ್ಲ. ಇದು ಗ್ಯಾಸ್ ವ್ಯರ್ಥವಾಗಲು ಕಾರಣವಾಗುತ್ತದೆ. ಸ್ಟೌವ್ನ ಜ್ವಾಲೆ ನೀಲಿ ಬಣ್ಣದಲ್ಲಿದೆಯೇ ಎಂಬುದನ್ನು ಗಮನಿಸಿ. ಅದು ಹಳದಿ ಅಥವಾ ಕಿತ್ತಳೆ ಬಣ್ಣದಲ್ಲಿದ್ರೆ ಬರ್ನರ್ ಅನ್ನು ಸ್ವಚ್ಛಗೊಳಿಸುವ ಅಗತ್ಯವಿದೆ ಎಂದರ್ಥ. ಏಕೆಂದರೆ ಹಳದಿ ಜ್ವಾಲೆ, ಗ್ಯಾಸ್ ವ್ಯರ್ಥವಾಗ್ತಿದೆ ಎಂಬುದನ್ನು ಸೂಚಿಸುತ್ತದೆ.

ಸೂಕ್ತ ಪಾತ್ರೆ ಆಯ್ಕೆ : ರೌಂಡ್ ಆಗಿರುವ ಅಥವಾ ಬಾಗಿದ ತಳ ಹೊಂದಿರುವ ಪಾತ್ರೆಗಳು ಹೆಚ್ಚು ಗ್ಯಾಸ್ ಹಾಳು ಮಾಡುತ್ವೆ. ಯಾವಾಗ್ಲೂ ಸಮತಟ್ಟಾದ ತಳವಿರುವ ಪಾತ್ರೆ ಬಳಸಿ. ಏಕೆಂದರೆ ಸಮತಟ್ಟಾದ ಪಾತ್ರೆಯಲ್ಲಿ ಶಾಖ ಎಲ್ಲ ಕಡೆ ಹರಡೋದ್ರಿಂದ ಆಹಾರ ಬೇಗ ಬೇಯೋದಲ್ದೆ, ಎಲ್ಲ ಕಡೆ ಸರಿಯಾಗಿ ಬೆಂದಿರುತ್ತದೆ. ಇದಕ್ಕೆ ಗ್ಯಾಸ್ ಕಡಿಮೆ ಸಾಕು.

ಗ್ಯಾಸ್ ಉಳಿಸಲು ಮುಚ್ಚಳವಿರುವ ಪಾತ್ರೆಗಳನ್ನು ಬಳಸಿ : ಗ್ಯಾಸ್ ಉಳಿಸಲು ಮುಚ್ಚಳವಿರುವ ಪಾತ್ರೆಗಳನ್ನು ಬಳಸಿ. ನೀವು ಅಡುಗೆ ಮಾಡುವಾಗ, ಪದಾರ್ಥಗಳನ್ನು ಬಿಸಿ ಮಾಡುವಾಗ ಪ್ಲೇಟ್ ಮುಚ್ಚಿ. ನೀವು ಪ್ಲೆಟ್ ಮುಚ್ಚಿದಾಗ ಉಗಿ ಸೃಷ್ಟಿಯಾಗಿ ಆಹಾರ ಬೇಗ ಬೇಯುತ್ತದೆ. ಇದ್ರಿಂದ ಗ್ಯಾಸ್ ಉಳಿಸಬಹುದು.