ಫ್ರಿಜ್‌ನಲ್ಲಿ ಇಟ್ರೂ ತರಕಾರಿ ಕೆಡುತಿದ್ರೆ ಈ ರೀತಿ ಇಡಿ, ವಾರವಾದ್ರೂ ಫ್ರೆಶ್‌ನೆಸ್ ಹಾಗೇ ಇರುತ್ತೆ
Vegetable Storage Tips: ಒಂದು ವೇಳೆ ತರಕಾರಿಗಳನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಅವು ಬೇಗನೆ ಹಾಳಾಗುತ್ತವೆ ಮತ್ತು ಕೊಳೆಯುತ್ತವೆ. ಈ ಲೇಖನದಲ್ಲಿ ಹಸಿರು ತರಕಾರಿಗಳನ್ನು ಫ್ರಿಜ್‌ನಲ್ಲಿ ಸರಿಯಾಗಿ ಸಂಗ್ರಹಿಸುವುದು ಹೇಗೆಂದು ಕೆಲವು ಸುಲಭ ಮಾರ್ಗ ಶೇರ್ ಮಾಡಿದ್ದೇವೆ ನೋಡಿ..

ಸುಲಭ ಮಾರ್ಗ
Refrigerator Tips: ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಪ್ರತಿದಿನ ತಾಜಾ ತರಕಾರಿಗಳನ್ನು ಖರೀದಿಸಲು ಅಥವಾ ಮಾರುಕಟ್ಟೆಗೆ ಹೋಗಲು ಸಮಯವಿರುವುದಿಲ್ಲ. ಆದ್ದರಿಂದ ತರಕಾರಿಗಳನ್ನು ಫ್ರಿಜ್‌ನಲ್ಲಿ ಸಂಗ್ರಹಿಸಿಡುತ್ತಾರೆ. ಆದರೆ ಹೀಗೆ ಇಡುವಾಗ ಸರಿಯಾಗಿ ಸಂಗ್ರಹಿಸುವುದು ಅತ್ಯಗತ್ಯ. ಇದರಿಂದ ಅವು ದೀರ್ಘಕಾಲದವರೆಗೆ ಫ್ರೆಶ್ ಆಗಿ ಉಳಿಯುತ್ತವೆ. ಒಂದು ವೇಳೆ ತರಕಾರಿಗಳನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಅವು ಬೇಗನೆ ಹಾಳಾಗುತ್ತವೆ ಮತ್ತು ಕೊಳೆಯುತ್ತವೆ. ಈ ಲೇಖನದಲ್ಲಿ ಹಸಿರು ತರಕಾರಿಗಳನ್ನು ಫ್ರಿಜ್‌ನಲ್ಲಿ ಸರಿಯಾಗಿ ಸಂಗ್ರಹಿಸುವುದು ಹೇಗೆಂದು ಕೆಲವು ಸುಲಭ ಮಾರ್ಗ ಶೇರ್ ಮಾಡಿದ್ದೇವೆ ನೋಡಿ..
ಹಸಿರು ಎಲೆಗಳ ತರಕಾರಿಗಳು (ಪಾಲಕ್, ಕೊತ್ತಂಬರಿ, ಮೆಂತ್ಯ)
ಈ ತರಕಾರಿಗಳು ಬಹಳಷ್ಟು ತೇವಾಂಶವನ್ನು ಹೊಂದಿರುತ್ತವೆ. ಆದ್ದರಿಂದ ಅವು ಬೇಗನೆ ಹಾಳಾಗುತ್ತವೆ. ಅವುಗಳನ್ನು ಸಂಗ್ರಹಿಸಿಡಲು ಮೊದಲು ಚೆನ್ನಾಗಿ ತೊಳೆದು ಬಟ್ಟೆ ಅಥವಾ ಜರಡಿಯಲ್ಲಿ ಹರಡಿ. ಸಂಪೂರ್ಣವಾಗಿ ಒಣಗಲು ಬಿಡಿ. ಒಣಗಿದ ನಂತರ, ಅವುಗಳನ್ನು ವೃತ್ತಪತ್ರಿಕೆ, ಟಿಶ್ಯೂ ಪೇಪರ್ ಅಥವಾ ಒಣ ಬಟ್ಟೆಯಲ್ಲಿ ಸುತ್ತಿ. ನಂತರ ಅವುಗಳನ್ನು ಜಿಪ್‌ಲಾಕ್ ಬ್ಯಾಗ್ ಅಥವಾ ಗುಣಮಟ್ಟದ ಪ್ಲಾಸ್ಟಿಕ್ ಪೌಚ್‌ನಲ್ಲಿ ಇರಿಸಿ. ಫ್ರಿಜ್‌ನಲ್ಲಿ ಎತ್ತಿಡಿ.
ಟೊಮೆಟೊ
ಹಸಿ ಟೊಮೆಟೊಗಳನ್ನು ಎಂದಿಗೂ ಫ್ರಿಜ್‌ನಲ್ಲಿ ಇಡಬೇಡಿ. ಬೆಂದ ಟೊಮೆಟೊಗಳನ್ನು ಗಾಳಿಯಾಡದ ಕಂಟೇನರ್‌ಬಾಕ್ಸ್‌ನಲ್ಲಿ ಫ್ರಿಜ್‌ನಲ್ಲಿ ಸಂಗ್ರಹಿಸಬಹುದು. ಟೊಮೆಟೊ ಸಂಗ್ರಹಿಸುವ ಮೊದಲು ತೊಳೆದು ಚೆನ್ನಾಗಿ ಒಣಗಿಸಬೇಕು.
ಸೌತೆಕಾಯಿ, ಬೆಲ್ ಪೆಪ್ಪರ್, ಕ್ಯಾರೆಟ್, ಬೀನ್ಸ್
ಈ ಎಲ್ಲಾ ತರಕಾರಿಗಳನ್ನು ಯಾವಾಗಲೂ ಚೆನ್ನಾಗಿ ತೊಳೆದು ಚೆನ್ನಾಗಿ ಒಣಗಿಸಿ. ಒಣಗಿದ ನಂತರ, ಗಾಳಿಯಾಡದ ಡಬ್ಬಿ ಅಥವಾ ಪ್ಲಾಸ್ಟಿಕ್ ಪೌಚ್‌ನಲ್ಲಿ ಹಾಕಿ ಫ್ರಿಜ್‌ನಲ್ಲಿ ಸಂಗ್ರಹಿಸಿ. ಈ ರೀತಿ ಮಾಡಿದರೆ 6-7 ದಿನಗಳವರೆಗೆ ತಾಜಾವಾಗಿರುತ್ತವೆ.
ಎಲೆಕೋಸು, ಹೂಕೋಸು ಮತ್ತು ಬ್ರೊಕೊಲಿ
ತೊಳೆದು ಒಣಗಿಸಿದ ನಂತರ ಗುಣಮಟ್ಟದ ಪ್ಲಾಸ್ಟಿಕ್ ಪೌಚ್ ಅಥವಾ ಕಂಟೇನರ್‌ನಲ್ಲಿ ಹಾಕಿ ಫ್ರಿಜ್‌ನಲ್ಲಿ ಇರಿಸಿ.
ನಿಂಬೆ ಮತ್ತು ಹಸಿರು ಮೆಣಸಿನಕಾಯಿ
ನಿಂಬೆಹಣ್ಣು ದೀರ್ಘಕಾಲದವರೆಗೆ ತೇವಾಂಶವನ್ನು ಉಳಿಸಿಕೊಳ್ಳಲು ಯಾವಾಗಲೂ ಫ್ರಿಜ್‌ನಲ್ಲಿ ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ. ಹಸಿರು ಮೆಣಸಿನಕಾಯಿಗಳನ್ನು ತೊಳೆದು ಒಣಗಿಸಿ, ನಂತರ ಅವುಗಳನ್ನು ಟಿಶ್ಯೂ ಪೇಪರ್‌ನಲ್ಲಿ ಸುತ್ತಿ ಡಬ್ಬಿಯಲ್ಲಿ ಸಂಗ್ರಹಿಸಿ.
ಶುಂಠಿ
ಶುಂಠಿಯನ್ನು ಫ್ರಿಜ್‌ನಲ್ಲಿ ಇಡುವುದರಿಂದ ಅದು ಹೆಚ್ಚು ಕಾಲ ತಾಜಾವಾಗಿರುತ್ತದೆ. ಯಾವಾಗಲೂ ಗಾಳಿಯಾಡದ ಡಬ್ಬಿಯಲ್ಲಿ ಅಥವಾ ಕ್ಲೋಸ್ ಕವರ್‌ನಲ್ಲಿ ಸಂಗ್ರಹಿಸಿ.