ಕುಕ್ಕರ್ ಅಥವಾ ಪಾತ್ರೆಯಲ್ಲಿ ಅನ್ನ ಸರಿಯಾಗಿ ಬೇಯದೆ ಗಟ್ಟಿಯಾಗಿದ್ದರೆ ಅದನ್ನು ಎಸೆಯುವ ಅಗತ್ಯವಿಲ್ಲ. ಸ್ವಲ್ಪ ನೀರು ಸೇರಿಸಿ, ಕಡಿಮೆ ಉರಿಯಲ್ಲಿ ಮುಚ್ಚಳ ಮುಚ್ಚಿ ಬೇಯಿಸುವ ಮೂಲಕ ಸುಲಭವಾಗಿ ಮೃದು ಮಾಡಬಹುದು. ಮೈಕ್ರೋವೇವ್‌ನಲ್ಲೂ ಈ ವಿಧಾನ ಅನುಸರಿಸಿ ಅನ್ನವನ್ನು ಸರಿಪಡಿಸಬಹುದು.
ಪ್ರತಿಯೊಬ್ಬ ಮಹಿಳೆಗೂ ಇದರ ಅನುಭವ ಆಗಿರುತ್ತೆ. ಕೆಲವೊಮ್ಮೆ ಕುಕ್ಕರ್‌ನಲ್ಲಿ ಅನ್ನ ಸರಿಯಾಗಿ ಬೇಯದೆ ಅಕ್ಕಿಕಾಳುಗಳು ಗಟ್ಟಿಯಾಗಿ ಹಾಗೆ ಉಳಿದಿರುತ್ತದೆ. ಗೊತ್ತಿಲ್ಲದೆ ತಿಂದಾಗ ಹಲ್ಲಿನ ಕೆಳಗೆ ಸಿಲುಕಿಕೊಂಡಾಗ ಇದು ಅನುಭವಕ್ಕೆ ಬರುತ್ತದೆ. ಹೀಗೆ ಸರಿಯಾಗಿ ಬೇಯದ ಅನ್ನವನ್ನ ಅನೇಕರು ವೇಸ್ಟ್ ಎಂದು ಎಸೆದುಬಿಡ್ತಾರೆ. ಆದರೆ ಈ ಸುಲಭವಾದ ವಿಧಾನ ಅನುಸರಿಸಿದರೆ ಐದೇ ನಿಮಿಷದಲ್ಲಿ ಬೇಯದ ಅನ್ನ ಸರಿ ಮಾಡಬಹುದು. ಚೆಲ್ಲುವುದು ತಪ್ಪುತ್ತೆ. ನಿಮಗೆ ಈ ರೀತಿ ಸಮಸ್ಯೆ ಎದುರಾದರೆ ಚಿಂತಿಸಬೇಡಿ, ಬೇಯದ ಅನ್ನ ಎಸೆದು ಮತ್ತೊಮ್ಮೆ ಅನ್ನಕ್ಕೆ ಇಡುವುದು ಬೇಡ. ಸರಿಯಾಗಿ ಬೇಯದ ಅನ್ನ ಮೃದು ಮಾಡುವುದು ಹೇಗೆ ಎಂಬುದು ಇಲ್ಲಿ ತಿಳಿಸಲಾಗಿದೆ.
ಅನ್ನ ಸರಿಯಾಗಿ ಬೇಯದಿದ್ದರೆ ಏನು ಮಾಡಬೇಕು?
ಕುಕ್ಕರ್‌ನಲ್ಲಿಟ್ಟ ಅನ್ನ ಸರಿಯಾಗಿ ಬೆಂದಿರದಿದ್ದರೆ ಮೆತ್ತಗೆ ಆಗದೆ ಹಾಗೆಯೇ ಅಕ್ಕಿಕಾಳು ಗಟ್ಟಿಯಾಗಿದ್ದರೆ. ಆಗ ಅನ್ನಕ್ಕೆ ಸ್ವಲ್ಪ ನೀರು ಹಾಕಿ ಸ್ವಲ್ಪ ಸಮಯ ಮತ್ತೆ ಬೇಯಿಸಬಹುದು. ಆದರೆ ಅಕ್ಕಿ ಬೇಯಿಸುವ ಪಾತ್ರೆ ಯಾವುದು ಎಂಬುದರ ಮೇಲೆ ಅನ್ನ ಹೇಗೆ ಬೇಯುತ್ತದೆ ಎಂಬುದು ತಿಳಿದುಕೊಳ್ಳುವುದು ಮುಖ್ಯ.
ಎರಡು ಗ್ಲಾಸ್ ಅಕ್ಕಿಯನ್ನ ಕುಕ್ಕರ್ ನಲ್ಲಿ ಹಾಕುವಾಗ ಅದರಲ್ಲಿ ಸರಿಯಾದ ಪ್ರಮಾಣದಲ್ಲಿ ನೀರು ಸುರಿಯಬೇಕು ಅಂದರೆ ಮೂರುವರೆ ನಾಲ್ಕು ಗ್ಲಾಸ್ ನೀರು ಹಾಕಬೇಕು. ಇನ್ನು ಒಲೆಯ ಮೇಲೆ, ಕುಕ್ಕರ್ ಬಳಸದೆ ಅನ್ನ ಮಾಡುವಾಗ, ಆಗಾಗ ಅಕ್ಕಿ ಬೆಂದಿವೆಯೋ ಗಟ್ಟಿಯಾಗಿವೆಯೋ ಎಂದು ಸ್ವಲ್ಪ ಅನ್ನದ ಕಾಳು ಹಿಸುಕಿ ಪರೀಕ್ಷಿಸಿ ನೋಡಿದರೆ ತಿಳಿಯುತ್ತದೆ.
ಅಕ್ಕಿ ಕಾಳುಗಳನ್ನು ಒತ್ತಿದಾಗ ಗಟ್ಟಿಯಾಗಿವೆ ಅನಿಸಿದರೆ ಸರಿಯಾಗಿ ಬೆಂದಿಲ್ಲ ಎಂದರ್ಥ. ಕೆಲವು ಸಲ ಪಾತ್ರೆಯ ಮೇಲ್ಭಾಗದಲ್ಲಿರುವ ಅಕ್ಕಿ ಚೆನ್ನಾಗಿ ಬೆಂದಿದ್ದರೆ, ಕೆಳಭಾಗದಲ್ಲಿ ಅಥವಾ ಮಧ್ಯದಲ್ಲಿ ಹಾಗೆಯೇ ಗಟ್ಟಿಯಾಗಿರುತ್ತವೆ. ಇಂಥ ಸಮಸ್ಯೆ ಎದುರಾದಾಗ ಎಲ್ಲಾ ಅನ್ನ ಎಸೆಯಬೇಕಿಲ್ಲ. ಸ್ವಲ್ಪ ನೀರು ಸೇರಿಸಿ ಬೇಯಿಸಿದರೆ ಅನ್ನ ಮತ್ತೆ ಮೃದುವಾಗಿ ಬೇಯಿತ್ತದೆ.
ಒಲೆಯ ಮೇಲೆ ಬೇಯಿಸಿದ ಅಕ್ಕಿಯಿಂದ ನೀರು ಆವಿಯಾಗಿದ್ದರೆ, ಆದರೆ ಧಾನ್ಯಗಳು ಇನ್ನೂ ಗಟ್ಟಿಯಾಗಿದ್ದರೆ ಆಗ ಮಾಡಬೇಕಿರುವುದು ಮೊದಲು ಸ್ವಲ್ಪ ನೀರು ಸೇರಿಸಿ. ಅಕ್ಕಿ ತುಂಬಾ ಬೆಂದಿರದಿದ್ದರೆ ಅಗತ್ಯವಿರುವಂತೆ ನೀವು ಸ್ವಲ್ಪ ಹೆಚ್ಚು ನೀರನ್ನು ಸೇರಿಸಬೇಕು. ಆದರೆ ಒಂದೇ ಬಾರಿಗೆ ಹೆಚ್ಚು ನೀರು ಸೇರಿಸಬಾರದು. ಸೇರಿಸಿದರೆ ಅನ್ನ ಹಿಟ್ಟಿನಂತೆ ಜಿಗುಟ ಆಗಬಹುದು. ಸ್ವಲ್ಪ ನೀರು ಹಾಕಿದ ನಂತರ ಪಾತ್ರೆ ಮುಚ್ಚಿ.
ಗಟ್ಟಿಯಾದ ಅನ್ನ ಬೇಯಿಸುವಾಗ ಕಡಿಮೆ ಹುರಿ ಇರಲಿ:
ನೀರು ಸೇರಿಸಿದ ನಂತರ ಅಕ್ಕಿಯನ್ನು ಕಡಿಮೆ ಹುರಿಯಲ್ಲಿ ಕೆಲವು ನಿಮಿಷಗಳ ಕಾಲ ಬೇಯಿಸಿ. ಮುಚ್ಚಳವನ್ನು ಮುಚ್ಚಿಡುವುದರಿಂದ ಪಾತ್ರೆಯೊಳಗೆ ಉಗಿ ಹೆಚ್ಚಾಗುತ್ತೆ. ಇದರಿಂದ ಗಟ್ಟಿಯಾದ ಅಕ್ಕಿ ಕಾಳುಗಳನ್ನು ಮೃದುಗೊಳ್ಳುತ್ತದೆ.
ಈ ಸಮಯದಲ್ಲಿ ಮುಚ್ಚಳವನ್ನು ತೆಗೆಯುವುದು ತಪ್ಪಿಸಿ, ಮುಚ್ಚುಳ ತೆಗೆಯುವುದರಿಂದ ಉಗಿ ಎಲ್ಲ ಹೊರಹೋಗಿ ಅನ್ನ ಬೇಯುದು ತಡವಾಗಬಹುದು. ಅದರ ಬದಲು ಕೆಲವು ನಿಮಿಷಗಳ ನಂತರ ಮೇಲೆ ಹೇಳಿದ ಹಾಗೆ ಬೆಂದ ಅಕ್ಕಿಯನ್ನ ಹಿಸುಕಿ ನೋಡಬಹುದು.,
ಅಡುಗೆ ಮಾಡಿದ ನಂತರ ಮುಚ್ಚುಳ ಮುಚ್ಚಿರಲಿ:
ಬೇಯಿಸಿದ ತಕ್ಷಣ ಅನ್ನ ಬಡಿಸಲು ಆತುರಬೇಡ. ಉರಿಯನ್ನು ಆಫ್ ಮಾಡಿದ ನಂತರ, ಪಾತ್ರೆಯನ್ನು ಮುಚ್ಚಿ ಐದರಿಂದ ಹತ್ತು ನಿಮಿಷಗಳ ಕಾಲ ಹಾಗೆಯೇ ಬಿಡಿ. ಉಳಿದ ಉಗಿ ಅಕ್ಕಿ ಮೃದುವಾಗುತ್ತದೆ. ನಂತರ ಚಮಚದಿಂದ ಅನ್ನ ತೆಗೆದುಕೊಳ್ಳಬಹುದು.
ಮೈಕ್ರೋವೇವ್‌ನಲ್ಲಿ ಬೇಯಿಸುವುದು ಹೇಗೆ?
ನೀವು ಮೈಕ್ರೋವೇವ್‌ನಲ್ಲಿ ಅನ್ನ ಮಾಡಿದರೆ, ಅದು ಸರಿಯಾಗಿ ಬೆಂದಿರದಿದ್ದರೆ ಅದನ್ನು ಮೈಕ್ರೋವೇವ್-ಸುರಕ್ಷಿತ ಪಾತ್ರೆಯಲ್ಲಿ ಇರಿಸಿ. ಅದರ ಮೇಲೆ ಕೆಲವು ಚಮಚ ನೀರನ್ನು ಸಿಂಪಡಿಸಿ ಮತ್ತು ಮುಚ್ಚಳದಿಂದ ಮುಚ್ಚಿ. ಆಗಾಗ ಅನ್ನ ಹಿಸುಕಿ ನೋಡುತ್ತ ಅಕ್ಕಿ ಮೃದುವಾಗುವವರೆಗೆ ಮಾಡಿ. ಬಳಿಕ ಪಾತ್ರೆಯನ್ನು ಮೈಕ್ರೋವೇವ್-ಸುರಕ್ಷಿತ ಮುಚ್ಚಳ(Microwave-safe lid)ದಿಂದ ಮುಚ್ಚಿ

