Recipe: ಚಳಿಗಾಲದಲ್ಲಿ ದೋಸೆ ಹಿಟ್ಟು ಬೇಗ ಹುದುಗಲು ಮ್ಯಾಜಿಕ್ ನೀರು ಸೇರಿಸಿಕೊಳ್ಳಿ
ಚಳಿಗಾಲದಲ್ಲಿ ಇಡ್ಲಿ ಅಥವಾ ದೋಸೆ ಹಿಟ್ಟು ಬೇಗನೆ ಹುದುಗಲು ಕೆಲವೊಂದು ವಿಧಾನಗಳನ್ನು ಫಾಲೋ ಮಾಡಬೇಕಾಗುತ್ತದೆ. ಹಿಟ್ಟಿಗೆ Magic ನೀರನ್ನು ಸೇರಿಸುವುದರಿಂದ ಅದು ಮಲ್ಲಿಗೆಯಂತೆ ಮೃದುವಾಗಿ ಅರಳುತ್ತದೆ.

ಹಿಟ್ಟು ಹುದುಗುವಿಕೆ
ಚಳಿಗಾಲದಲ್ಲಿ ದೋಸೆ/ಇಡ್ಲಿ ಹಿಟ್ಟು ಹುದುಗಲು ಕನಿಷ್ಠ 8 ರಿಂದ 10 ಗಂಟೆ ಸಮಯ ಬೇಕಾಗುತ್ತದೆ. ಕೆಲವೊಮ್ಮೆ ಶೀತಮಯ ಪ್ರದೇಶದಲ್ಲಿ 10-12 ಗಂಟೆಗಳಾದ್ರೂ ಹಿಟ್ಟು ಹುದುಗುವಿಕೆ ಬಂದಿರಲ್ಲ. ಈ ಸಂದರ್ಭದಲ್ಲಿ ಇಂದು ನಾವು ಹೇಳೋ ಒಂದು ಟಿಪ್ಸ್ ಫಾಲೋ ಮಾಡಿ. ಇದರಿಂದ ಇಡ್ಲಿ/ದೋಸೆ ಹಿಟ್ಟು ಕಡಿಮೆ ಸಮಯದಲ್ಲಿಯೇ ಮಲ್ಲಿಗೆ ಹೂವಿನಂತೆ ಅರಳಿರುತ್ತದೆ.
ಅಕ್ಕಿ ಮತ್ತು ಉದ್ದಿನಬೇಳೆ
ಬಹುತೇಕರು ಅಕ್ಕಿ ಮತ್ತು ಉದ್ದಿನಬೇಳೆಯನ್ನು ಜೊತೆಯಾಗಿ ನೆನೆಸಿಟ್ಟುಕೊಳ್ಳುತ್ತಾರೆ. ಆದ್ರೆ ಈ ವಿಧಾನ ತಪ್ಪು ಅನ್ನೋದು ಕೆಲವರ ಅಭಿಪ್ರಾಯವಾಗಿದೆ. ಅಕ್ಕಿ ನೆನೆಯಲು ಹೆಚ್ಚು ಸಮಯ ಬೇಕಾಗುತ್ತದೆ. ಆದ್ರೆ ಉದ್ದಿನಬೇಳೆ 30 ರಿಂದ 40 ನಿಮಿಷದಲ್ಲಿಯೇ ನೆನೆಯುತ್ತದೆ. ಹಾಗಾಗಿ ಅಕ್ಕಿಯನ್ನು ಕನಿಷ್ಠ 4 ರಿಂದ 5 ಗಂಟೆ ನೆನೆಸಿಕೊಳ್ಳಬೇಳು. ಹಾಗೆಯೇ ಅಕ್ಕಿ ರುಬ್ಬಿಕೊಳ್ಳುವ ಮುನ್ನ 30 ರಿಂದ 40 ನಿಮಿಷ ಮುಂಚೆ ಉದ್ದಿನಬೇಳೆ ನೆನೆಸಿಕೊಳ್ಳಿ. ನಂತರ ಎರಡನ್ನೂ ಪ್ರತ್ಯೇಕವಾಗಿ ರುಬ್ಬಿದ ಬಳಿಕ ಸೇರಿಸಿಕೊಳ್ಳಿ. ಇದರಿಂದ ಹುದುಗುವಿಕೆ ಪ್ರಕ್ರಿಯೆ ವೇಗವಾಗುತ್ತದೆ.
ಮ್ಯಾಜಿಕ್ ನೀರು
ದೋಸೆ-ಇಡ್ಲಿ ಹಿಟ್ಟು ರುಬ್ಬಿಕೊಳ್ಳುವ ಮುನ್ನ ಮನೆಯಲ್ಲಿರುವ 4 ರಿಂದ 5 ಟೀ ಸ್ಪೂನ್ ಹುಳಿಮೊಸರನ್ನು ದೊಡ್ಡ ಬೌಲ್ನಲ್ಲಿ ಹಾಕಿಕೊಂಡ ಇದಕ್ಕೆ ಒಂದು ಗ್ಲಾಸ್ ನೀರು ಸೇರಿಸಿ ಚೆನ್ನಾಗಿ ಕಲಿಸಿಕೊಳ್ಳಿ.ನ ನಂತರ ಮುಚ್ಚಳ ಮುಚ್ಚಿಟ್ಟು ಅರ್ಧ ಗಂಟೆ ಎತ್ತಿಟ್ಟುಕೊಳ್ಳಿ. ಮುಚ್ಚಳ ತೆಗೆದಾಗ ಮೊಸರಿನಲ್ಲಿರುವ ಹುಳಿಅಂಶವೆಲ್ಲವೂ ಮೇಳೆ ನೀರಿನಲ್ಲಿ ತೇಲುತ್ತಿರುತ್ತದೆ. ಮೊಸರು ಕೆಳಭಾಗದಲ್ಲಿರುತ್ತದೆ. ಮೇಲಿನ ಹುಳಿಅಂಶದ ನೀರನ್ನು ದೋಸೆ/ಇಡ್ಲಿ ಹಿಟ್ಟಿಗೆ ಸೇರಿಸಿಕೊಳ್ಳಿ.
ಮೊಸರಿನ ಹುಳಿ ನೀರು
ಈ ಹುಳಿಯಾಗಿರುವ ನೀರು ದೋಸೆಹಿಟ್ಟು ಹುದುಗಲು ಸಹಾಯ ಮಾಡುತ್ತದೆ. ವಿನೇಗರ್, ಬೇಕಿಂಗ್ ಸೋಡಾ ಅಥವಾ ಯೀಸ್ಟ್ ಸೇರಿಸುವ ಬದಲು ಈ ರೀತಿಯಲ್ಲಿ ಹುಳಿ ನೀರನ್ನು ಸೇರಿಸಿಕೊಳ್ಳೋದು ಆರೋಗ್ಯಕರ ಜೀವನಶೈಲಿಗೆ ಒಳ್ಳೆಯದು. ಹುಳಿನೀರು ನಿಮ್ಮ ದೋಸೆ ಹಿಟ್ಟನ್ನು ಕೇವಲ 6 ರಿಂದ 7 ಗಂಟೆಯಲ್ಲಿ ಪರ್ಫೆಕ್ಟ್ ಹದಕ್ಕೆ ತೆಗೆದುಕೊಂಡು ಬರುತ್ತದೆ.
ಅನ್ನ ಅಥವಾ ಅವಲಕ್ಕಿ ಅಥವಾ ಮಂಡಕ್ಕಿ
ಹಿಟ್ಟು ರೊಬ್ಬಿಕೊಳ್ಳುವಾವ ಅನ್ನ ಅಥವಾ ಅವಲಕ್ಕಿ ಅಥವಾ ಮಂಡಕ್ಕಿಯನ್ನು ಸೇರಿಸಿಕೊಳ್ಳುತ್ತಾರೆ. ಈ ಮೂರು ಪದಾರ್ಥಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ. ಈ ಪದಾರ್ಥ ದೋಸೆಗೆ ಮೃದುತ್ವ ನೀಡುತ್ತದೆ. ಹಾಗೆಯೇ ಹಿಟ್ಟು ರುಬ್ಬಿದ ಕೂಡಲೇ ಹೆಚ್ಚು ನೀರು ಸೇರಿಸಿಕೊಳ್ಳಬೇಡಿ. ಹುದುಗಿದ ಬಳಿಕವಷ್ಟೇ ದೋಸೆ ಮಾಡಿಕೊಳ್ಳುವಾಗ ಹದಕ್ಕೆ ಅನುಕೂಲವಾಗುವಂತೆ ಹಿಟ್ಟು ಸೇರಿಸಿಕೊಳ್ಳೋದು ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.











