ದೋಸೆ ಮಾಡುವುದು ಹಲವರಿಗೆ ಇಷ್ಟವಾದರೂ, ಕೆಲವೊಮ್ಮೆ ಅದು ಹೆಂಚಿಗೆ ಅಂಟಿಕೊಂಡು ಶ್ರಮವೆಲ್ಲಾ ವ್ಯರ್ಥವಾಗುತ್ತದೆ. ಕಾವಲಿ ಅಥವಾ ಎಣ್ಣೆ ಬದಲಾಯಿಸುವುದರಿಂದಲೂ ಈ ಸಮಸ್ಯೆ ಎದುರಾಗಬಹುದು. ಆದರೆ ಒಂದು ಸರಳವಾದ ಟ್ರಿಕ್ ಬಳಸುವ ಮೂಲಕ ದೋಸೆ ಅಂಟದಂತೆ ಸುಲಭವಾಗಿ ತೆಗೆಯಬಹುದು.
ದೋಸೆ ಎನ್ನೋದು ಹಲವರಿಗೆ ಸಿಕ್ಕಾಪಟ್ಟೆ ಇಷ್ಟದ ತಿನಿಸು. ನೂರಾರು ಬಗೆಯ ದೋಸೆಗಳಿವೆ. ಹೊಸ ಹೊಸ ವಿಧವಾದ ದೋಸೆಗಳನ್ನು ಟ್ರೈ ಮಾಡುವ ದೊಡ್ಡ ವರ್ಗವೇ ಇದೆ. ಅದನ್ನು, ಇದನ್ನು ಎಲ್ಲಾ ಮಿಕ್ಸ್ ಮಾಡಿ ಹೇಗೆಯೇ ದೋಸೆ ಮಾಡಿದ್ರೂ ಅದು ಸಕತ್ ಟೇಸ್ಟಿಯಾಗಿಯೇ ಇರುತ್ತವೆ. ಮಸಾಲೆ ದೋಸೆ, ನೀರ್ ದೋಸೆ, ಬೆಣ್ಣೆ ದೋಸೆ, ಸೆಟ್ ದೋಸೆ, ಮೈಸೂರು ದೋಸೆ, ರವಾ, ಈರುಳ್ಳಿ, ರಾಗಿ, ಅಕ್ಕಿ, ಉದ್ದು, ಜೋಳ, ಬೇಳೆ ಪನ್ನೀರ್.... ಅಬ್ಬಬ್ಬಾ ದೋಸೆಯ ಬಗೆ ಹೇಳುತ್ತಾ ಹೋದರೆ ಪುಟಗಳೇ ಸಾಲುವುದಿಲ್ಲ.
ಅಂಟಿಕೊಳ್ಳುವ ದೋಸೆ
ಆದರೆ ಅದೇ ವೇಳೆ, ದೋಸೆ ಹಿಟ್ಟೇನೋ ರೆಡಿಯಾಗಿ ಬಿಡುತ್ತದೆ. ಕೆಲವೊಂದು ದೋಸೆ ಕಾವಲಿಯಿಂದ ಏಳುವುದೇ ಕಷ್ಟವಾಗಿ ಮಾಡಿದ ಶ್ರಮವೆಲ್ಲಾ ವ್ಯರ್ಥ ಆಗುವುದು ಉಂಟು. ಕೆಲವೊಮ್ಮೆ ಹಳೆಯ ವಿಧಾನದಲ್ಲಿ ದೋಸೆ ಮಾಡಿದ್ರೂ, ಏನೋ ಸಣ್ಣ ಎಡವಟ್ಟಿನಿಂದಾಗಿ ಹೆಂಚಿನ ಮೇಲೆಯೇ ಅಂಟಿಕೊಳ್ಳುವುದು ಸಹಜ. ಅದರಲ್ಲಿಯೂ ದೋಸೆ ಕಾವಲಿ ಯಾವತ್ತೂ ಬದಲು ಮಾಡಬಾರದು. ಹೆಂಚಿನ ಬಂಡಿಯಾಗಿದ್ದರೆ ಎಣ್ಣೆಯನ್ನು ಬದಲಾಯಿಸುವುದು ಅರ್ಥಾತ್ ಒಮ್ಮೆ ಕೊಬ್ಬರಿ ಎಣ್ಣೆ, ಇನ್ನೊಮ್ಮೆ ಶೇಂಗಾ ಎಣ್ಣೆ... ಹೀಗೆ ಮಾಡುವುದರಿಂದಲೂ ಹೆಂಚಿನಿಂದ ದೋಸೆ ಏಳದೇ ಅಲ್ಲಿಯೇ ಅಂಟಿಕೊಳ್ಳುವುದು ಇದೆ.
ಎಲ್ಲರ ಮನೆ ಸಮಸ್ಯೆ
ಹೀಗೆಲ್ಲಾ ಸಮಸ್ಯೆ ಬಹುತೇಕ ಮಹಿಳೆಯರು ಅನುಭವಿಸಿಯೇ ಇರುತ್ತಾರೆ. ಕಾರಣ ಏನೇ ಇರಲಿ. ಒಂದು ವೇಳೆ ದೋಸೆ ಏಳದೇ ಹೆಂಚಿಗೆ ಅಂಟಿಕೊಂಡರೆ ಇನ್ನು ಚಿಂತೆ ಬಿಡಿ, ಈ ಟಿಪ್ಸ್ ಫಾಲೋ ಮಾಡಿದ್ರೆ, ದೋಸೆ ಅಂಟುವುದೇ ಇಲ್ಲ. ಅದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ.
ದೋಸೆ ಅಂಟಿಕೊಂಡಿದ್ದರೆ ಅದನ್ನು ಕ್ಲೀನ್ ಆಗಿ ತೆಗೆಯಿರಿ. ಬಳಿಕ ಹೆಂಚಿನ ಮೇಲೆ ಬಿಳಿ ಪುಡಿಯುಪ್ಪನ್ನು ಹಾಕಿ ಸವರಿ. ಒಂದು ನಿಮಿಷ ಅಲ್ಲಿಯೇ ಕೈಯಾಡಿಸಿ. ಬಳಿಕ ಒಂದು ಬಟ್ಟೆಯಿಂದ ಅದನ್ನು ತೆಗೆಯಿರಿ. ಬಳಿಕ ಅದರ ಮೇಲೆ ಸ್ವಲ್ಪ ಎಣ್ಣೆ ಹಾಕಿ. ಬಳಿಕ ನೀರು ಚಿಮುಕಿಸಿ, ಅದು ಚುಸ್ ಎಂದು ಸೌಂಡ್ ಬಂದ ನಂತರ ಹಿಟ್ಟನ್ನು ಹುಯ್ದರೆ ದೋಸೆ ಚೆನ್ನಾಗಿ ಏಳುತ್ತದೆ, ನೋಡಿ


