Asianet Suvarna News Asianet Suvarna News

ಝೂಸ್‌ ಆಫ್‌ ಕರ್ನಾಟಕ ಮೊಬೈಲ್‌ ಆ್ಯಪ್‌ ಬಿಡುಗಡೆ

ಪ್ರಾಣಿಗಳನ್ನು ದತ್ತು ಪಡೆದು ಪ್ರೋತ್ಸಾಹ ನೀಡುವ ಪ್ರಾಣಿ ಪ್ರಿಯರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಶ್ರೀ ಚಾಮರಾಜೇಂದ್ರ ಮೃಗಾಲಯವು ಝೂಸ್‌ ಆಫ್‌ ಕರ್ನಾಟಕ ಎಂಬ ಮೊಬೈಲ್‌ ಆ್ಯಪ್‌ ಅನ್ನು ಬುಧವಾರ ಅನಾವರಣ ಮಾಡಿತು.

Zoos of karnataka app launched in mysore
Author
Bangalore, First Published Jul 30, 2020, 11:10 AM IST

ಮೈಸೂರು(ಜು.30): ಪ್ರಾಣಿಗಳನ್ನು ದತ್ತು ಪಡೆದು ಪ್ರೋತ್ಸಾಹ ನೀಡುವ ಪ್ರಾಣಿ ಪ್ರಿಯರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಶ್ರೀ ಚಾಮರಾಜೇಂದ್ರ ಮೃಗಾಲಯವು ಝೂಸ್‌ ಆಫ್‌ ಕರ್ನಾಟಕ ಎಂಬ ಮೊಬೈಲ್‌ ಆ್ಯಪ್‌ ಅನ್ನು ಬುಧವಾರ ಅನಾವರಣ ಮಾಡಿತು.

ಅರಣ್ಯ ಸಚಿವ ಆನಂದ್‌ ಸಿಂಗ್‌, ವಿಶ್ವ ಹುಲಿ ದಿನದ ಅಂಗವಾಗಿ ನಡೆದ ಕಾರ್ಯಕ್ರಮಕ್ಕೆ ವಿಡಿಯೋ ಮೂಲಕ ಶುಭ ಕೋರಿದರೆ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಆ್ಯಪ್‌ಗೆ ಚಾಲನೆ ನೀಡಿದರು.

ವರ್ಕ್ ಫ್ರಂ ಹೋಂನಲ್ಲೇ ಶಿಕ್ಷಕರ ಪ್ರತಿಭಟನೆ

ಆ್ಯಪ್‌ ಮೂಲಕ ಸಾರ್ವಜನಿಕರು ಕನಿಷ್ಠ .50 ಮೇಲ್ಪಟ್ಟು ಎಷ್ಟುಬೇಕಾದರೂ ಹಣವನ್ನು ಪಾವತಿಸಿ, ಆನ್‌ಲೈನ್‌ನಲ್ಲಿ ಮೃಗಾಲಯದ ಪ್ರಮಾಣ ಪತ್ರ ಪಡೆಯಬಹುದಾಗಿದೆ. ಸಚಿವ ಆನಂದ್‌ ಸಿಂಗ್‌ ಹಂಪೆ ಮೃಗಾಲಯದಲ್ಲಿನ ಸಿಂಧು ಎಂಬ ಹೆಣ್ಣು ಹುಲಿಯನ್ನು ದತ್ತು ಪಡೆದರು.

ಲಾಕ್‌ಡೌನ್‌ ಸಂದರ್ಭದಲ್ಲಿ ಪ್ರವಾಸಿಗರ ಮೃಗಾಲಯಕ್ಕೆ ಭೇಟಿ ನೀಡದಿದ್ದಾಗ ಸಂಕಷ್ಟದಲ್ಲಿದ್ದ ಮೃಗಾಲಯಕ್ಕೆ ಅನೇಕರು ನೆರವಾಗಿದ್ದರು. ಈ ಸಂದರ್ಭದಲ್ಲಿ ಪ್ರಾಣಿಗಳ ಆಹಾರ ಮತ್ತು ಸಿಬ್ಬಂದಿ ವೇತನ ನೀಡಲು ತೊಂದರೆಯಾಗಿತ್ತು. ಆ್ಯಪ್‌ ಮೂಲಕ ಸಾರ್ವಜನಿಕರು ಕನಿಷ್ಠ .50 ಮೇಲ್ಪಟ್ಟು ಎಷ್ಟುಬೇಕಾದರೂ ಹಣವನ್ನು ಪಾವತಿಸಿ, ಆನ್‌ಲೈನ್‌ನಲ್ಲಿ ಮೃಗಾಲಯದ ಪ್ರಮಾಣ ಪತ್ರ ಪಡೆಯಬಹುದಾಗಿದೆ. ಸಚಿವ ಆನಂದ್‌ ಸಿಂಗ್‌ ಹಂಪೆ ಮೃಗಾಲಯದಲ್ಲಿನ ಸಿಂಧು ಎಂಬ ಹೆಣ್ಣು ಹುಲಿಯನ್ನು ದತ್ತು ಪಡೆದರು.

'ಕೊರೋನಾ ಸಂದರ್ಭದಲ್ಲೂ ಸಚಿವರು, ಶಾಸಕರು ಸಿಎಂ ಆಗಲು ಹವಣಿಸುತ್ತಿದ್ದಾರೆ'

ಮೃಗಾಲಯ ತಂತ್ರಜ್ಞಾನದ ಮೂಲಕ ಜನರನ್ನು ತಲುಪುತ್ತಿದೆ. ಮುಂದಿನ ದಿನಗಳಲ್ಲಿ ಮೃಗಾಲಯಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡಲು ಸಿದ್ಧರಿರುವುದಾಗಿ ಯದುವೀರ ಹೇಳಿದರು.

Follow Us:
Download App:
  • android
  • ios