Asianet Suvarna News Asianet Suvarna News

ವರ್ಕ್ ಫ್ರಂ ಹೋಂನಲ್ಲೇ ಶಿಕ್ಷಕರ ಪ್ರತಿಭಟನೆ

ಸರ್ಕಾರಗಳಿಗೆ ಬೇಡಿಕೆ ಮುಂದುರಿಸಿ ಕಳೆದ 10 ವರ್ಷಗಳಿಂದ ಅನುದಾನಿತ ಶಾಲಾ, ಕಾಲೇಜು ನೌಕರರು ಪ್ರತಿಭಟನೆ ನಡೆಸಿವೆ| ಸಾವಿರಾರು ಅನುದಾನಿತ ನೌಕರರು ಬರಗೈಲಿ ನಿವೃತ್ತಿಯಾಗಿದ್ದಾರೆ, ಅವರು 60 ವರ್ಷ ನಂತರ ಅವರಿಗೆ ಯಾರು ಉದ್ಯೋಗ ಕೊಡುವುದಿಲ್ಲ, ಅವರ ಸ್ಥಿತಿ ತುಂಬ ತೊಂದರೆಯಾಗಿದೆ| ನಿವೃತ್ತಿ ನಂತರ ಆರೋಗ್ಯ ಸಮಸ್ಯಗಳಿಗೆ ಒಳಪಡುತ್ತಿದ್ದಾರೆ|

Teachers Protest at Work From Home
Author
Bengaluru, First Published Jul 30, 2020, 9:40 AM IST

ಹುಬ್ಬಳ್ಳಿ(ಜು.30): 2006 ಏಪ್ರಿಲ್‌ 1ರ ಪೂರ್ವದಲ್ಲಿ ನೇಮಕವಾಗಿ ಅದರ ನಂತರ ಅನುದಾನಕ್ಕೆ ಒಳಪಟ್ಟು ವೇತನ ಪಡೆಯುತ್ತಿರುವ ಅನುದಾನಿತ ವಿದ್ಯಾಸಂಸ್ಥೆಗಳ ನೌಕರರಿಗೂ ಹಳೆಯ ಪಿಂಚಣಿ ಅಥವಾ ವಂತಿಗೆ ಆಧಾರಿತ ನೂತನ ಪಿಂಚಣಿ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿ ನೊಂದ ಶಿಕ್ಷಕ ಬಸವರಾಜ ದಳವಾಯಿ ನೇತೃತ್ವದಲ್ಲಿ ಶಿಕ್ಷಕರು ವರ್ಕ್ ಫ್ರಂ ಹೋಂ ಪ್ರತಿಭಟನೆ ನಡೆಸಿದ್ದಾರೆ.

2006ಕ್ಕಿಂತ ಮೊದಲು ಈ ಸಮಸ್ಯೆ ಇರಲಿಲ್ಲ. ಬೇರೆ ರಾಜ್ಯಗಳಲ್ಲಿ ವೇತನದ ಜತೆಗೆ ಪಿಂಚಣಿ ನೀಡುತ್ತಿವೆ. 6ನೇ ವೇತನ ಆಯೋಗವು ಪಿಂಚಣಿ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆದರೆ ಸರ್ಕಾರವು ನಮ್ಮ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಶಿಕ್ಷಕ ಬಸವರಾಜ ದಳವಾಯಿ ಆರೋಪಿಸಿದರು.

'ಕೊರೋನಾ ಸಂದರ್ಭದಲ್ಲೂ ಸಚಿವರು, ಶಾಸಕರು ಸಿಎಂ ಆಗಲು ಹವಣಿಸುತ್ತಿದ್ದಾರೆ'

ಕಳೆದ 10 ವರ್ಷಗಳಿಂದ ಅನುದಾನಿತ ಶಾಲಾ, ಕಾಲೇಜು ನೌಕರರು ಸರ್ಕಾರಗಳಿಗೆ ಬೇಡಿಕೆ ಮುಂದುರಿಸಿ ಪ್ರತಿಭಟನೆ ನಡೆಸಿವೆ. ಸಾವಿರಾರು ಅನುದಾನಿತ ನೌಕರರು ಬರಗೈಲಿ ನಿವೃತ್ತಿಯಾಗಿದ್ದಾರೆ. ಅವರು 60 ವರ್ಷ ನಂತರ ಅವರಿಗೆ ಯಾರು ಉದ್ಯೋಗ ಕೊಡುವುದಿಲ್ಲ, ಅವರ ಸ್ಥಿತಿ ತುಂಬ ತೊಂದರೆಯಾಗಿದೆ. ನಿವೃತ್ತಿ ನಂತರ ಆರೋಗ್ಯ ಸಮಸ್ಯಗಳಿಗೆ ಒಳಪಡುತ್ತಿದ್ದಾರೆ. ಅನುದಾನಿತ ನೌಕರರಿಗೆ ಆರೋಗ್ಯ ಸಂಜಿವಿನಿ ವೈದ್ಯಕೀಯ ಸೌಲಬ್ಯ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹಿರಿಯ ಉಪನ್ಯಾಸಕರಾದ ಚನ್ನಪ್ಪ ಹೊಸಮನಿ, ಅಶೋಕ ಗಡಾದ, ನಜೀರಅಹ್ಮದ್‌ ಕೋಲಕಾರ, ಬಸವರಾಜ ದೇವರಮನಿ, ಕರಿಯಪ್ಪ ಕುರಿ, ಸುಭಾಸ ಮಾಸ್ಗೋನಿ, ಆರ್‌. ವೈಘಿ. ಪಾಟೀಲ, ರಮೇಶ ಬಡಪ್ಪನವರ, ಚಂದ್ರು ಗಾವರವಾಡ, ಕವಿತಾ ಬೇಲೇರಿ, ನಾಗವೇಣಿ ಹಾದಿಮನಿ, ಎಲ್‌.ಆರ್‌. ಜಿರಗಾಳ, ಎ.ಆರ್‌. ಸಜ್ಜನಶೆಟ್ಟಿ. ಜ್ಯೋತಿ ಕದಂ. ನಿಂಬಿಕಾಯಿ. ಬಸವರಾಜ ಮಾದರ ಮತ್ತಿತರರು ಪಾಲ್ಗೊಂಡಿದ್ದರು.
 

Follow Us:
Download App:
  • android
  • ios