ಧಾರವಾಡ(ಜು.30): ಕೊರೋನಾ ನಿಯಂತ್ರಿಸುವುದನ್ನು ಬಿಟ್ಟು ರಾಜ್ಯ ಸರ್ಕಾರದ ಸಚಿವರು, ಶಾಸಕರು ಮುಖ್ಯಮಂತ್ರಿಗಳಾಗಲು ಹವಣಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಹೇಳಿದ್ದಾರೆ. 

ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಬ್ರಮಣಿರತ ಶಾಸಕರು, ಮಂತ್ರಿಗಳಿದ್ದಾರೆ. ಮಂತ್ರಿಯಾಗಲು ಲಕ್ಷ್ಮಣ ಸವದಿ, ಪ್ರಹ್ಲಾದ ಜೋಶಿ, ಯತ್ನಾಳ ತುದಿಗಾಲಿನ ಮೇಲಿದ್ದಾರೆ. ಯಡಿಯೂರಪ್ಪ ಅವರ ಖುರ್ಚಿ ಖಾಲಿ ಆದ ಮೇಲೆ ಇವರ ಪಾಳಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಲಿ ಎಂದು ತಿಳಿಸಿದ್ದಾರೆ. 

ಕೊರೋನಾ ರಣಕೇಕೆ: ಆಸ್ಪತ್ರೆಯಲ್ಲಿ ಬೆಡ್‌ ಇಲ್ಲ... ಮನೆಯಲ್ಲಿ ಇರಿ ಅಂತಿದೆ ಧಾರವಾಡ ಜಿಲ್ಲಾಡಳಿತ..!

ಒಟ್ಟಾರೆ ಬಿಜೆಪಿಯಲ್ಲಿ ಗೊಂದಲದ ವಾತಾವರಣವಿದೆ. ಈ ಗೊಂದಲ ಬಗೆಹರಿಸಿ ಕೊರೋನಾ ನಿಯಂತ್ರಿಸಲಿ, ಸಮಸ್ಯೆಗಳಿಗೆ ಸ್ಪಂದಿಸಲಿ. ಮೈತ್ರಿ ಸರ್ಕಾರವನ್ನು ಅಸ್ತಿರಗೊಳಿಸಿದ ಬಿಜೆಪಿಯಲ್ಲಿ ಇದೀಗ ಅಸಮಧಾನ ಭುಗಿಲೆದ್ದಿದೆ ಎಂದು ಕೋನರಡ್ಡಿ ಹೇಳಿದ್ದಾರೆ.