ರೈಲಿಗೆ ಒಡೆಯರ್‌ ಹೆಸರು: ಯದುವೀರ್‌ ಸಂತಸ

 

 ಮೈಸೂರು- ಬೆಂಗಳೂರು  ನಡುವೆ ಸಂಚರಿಸುವ ಎಕ್ಸ್‌ಪ್ರೆಸ್‌ ರೈಲಿಗೆ ಒಡೆಯರ್‌ ಹೆಸರನ್ನು ನಾಮಕರಣ ಮಾಡಿರುವದನ್ನು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಸ್ವಾಗತಿಸಿದ್ದಾರೆ.ಚಾಮರಾಜ ಒಡೆಯರ್‌ ಕಾಲದಲ್ಲಿ ಮೈಸೂರಿಗೆ ರೈಲ್ವೆ  ಮಾರ್ಗ ಆಯಿತು ಎಂಬುದು ದಾಖಲಾಗಿದೆ. ಹೀಗಾಗಿ ಒಡೆಯರ್‌ ಅವರು ಹೆಸರು ಇಟ್ಟಿರುವುದರಿಂದ ಸಂತೋಷವಾಗಿದೆ ಎಂದರು.

Yaduveer wadiyar happy  over Wadiyar  name Of Tipu express snr

 ಮೈಸೂರು (ಅ.10):  ಮೈಸೂರು- ಬೆಂಗಳೂರು (Mysuru)  ನಡುವೆ ಸಂಚರಿಸುವ ಎಕ್ಸ್‌ಪ್ರೆಸ್‌ ರೈಲಿಗೆ ಒಡೆಯರ್‌ ಹೆಸರನ್ನು ನಾಮಕರಣ ಮಾಡಿರುವದನ್ನು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಸ್ವಾಗತಿಸಿದ್ದಾರೆ.ಚಾಮರಾಜ ಒಡೆಯರ್‌ ಕಾಲದಲ್ಲಿ ಮೈಸೂರಿಗೆ ರೈಲ್ವೆ (Train)  ಮಾರ್ಗ ಆಯಿತು ಎಂಬುದು ದಾಖಲಾಗಿದೆ. ಹೀಗಾಗಿ ಒಡೆಯರ್‌ ಅವರು ಹೆಸರು ಇಟ್ಟಿರುವುದರಿಂದ ಸಂತೋಷವಾಗಿದೆ ಎಂದರು.

ವಾಟಾಳ್ ಅಸಮಾಧಾನ : 

 

ಬೆಂಗಳೂರು - ಮೈಸೂರು (Mysuru)  ನಡುವೆ ಸಂಚರಿಸುವ ಟಿಪ್ಪು ಎಕ್ಸ್‌ಪ್ರೆಸ್‌ ರೈಲಿಗೆ ಟಿಪ್ಪು ಎಕ್ಸ್‌ಪ್ರೆಸ್‌ ಹೆಸರು ಮುಂದುವರಿಸಬೇಕು. ಒಬ್ಬ ಮಹಾನ್‌ ವ್ಯಕ್ತಿಯಾದಂತಹ ಟಿಪ್ಪು ಹೆಸರು ತೆಗೆದು ಮತ್ತೊಂದು ಹೆಸರಿಡುವುದು ಸರಿಯಲ್ಲ ಎಂದು ಕನ್ನಡ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಆಗ್ರಹಿಸಿದರು.

ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಒಡೆಯರ ಹೆಸರಿಡಬೇಕು ಎಂದರೆ ಬೇರೆಯವಕ್ಕೆ ಇಟ್ಟುಕೊಳ್ಳಿ ಯಾರು ಬೇಡ ಅಂತಾರೆ. ಟಿಪ್ಪು ಹೆಸರನ್ನು ತೆಗೆದು ಇನ್ನೊಂದು ಹೆಸರಿಡುವುದು ಅಗೌರವ ಬೇರೊಂದಿಲ್ಲ. ರೈಲ್ವೆ ಇಲಾಖೆ ಇದರ ಬಗ್ಗೆ ಯೋಚಿಸಬೇಕು. ಟಿಪ್ಪು ಸುಲ್ತಾನ್‌ ದೇಶಕ್ಕೆ ಮಾಡಿರುವ ಕೆಲಸವನ್ನು ಯಾರು ಮಾಡಲಿಕ್ಕೆ ಸಾಧ್ಯವಿಲ್ಲ. ನಂಜನಗೂಡು ದೇವಸ್ಥಾನದಲ್ಲಿ ಟಿಪ್ಪು ಕೊಟ್ಟಿರುವ ಪಂಚಲಿಂಗವನ್ನು ಏಕೆ ಇಟ್ಟಿದ್ದೀರಿ ನೀವು? ಟಿಪ್ಪು ಕೊಟ್ಟಿರುವುದನ್ನು ನಂಜುಂಡೇಶ್ವರ ಸನ್ನಿಧಿಯಲ್ಲಿಟ್ಟಿರಬೇಕಾದರೆ ಇನ್ನೇನು ಬೇಕು. ಇದರ ಬಗ್ಗೆ ವಿರೋಧಪಕ್ಷಗಳು ಬೀದಿಗಿಳಿದು ಹೋರಾಟ ಮಾಡಿ, ಟಿಪ್ಪು ಎಕ್ಸ್‌ಪ್ರೆಸ್‌ ಹೆಸರು ಉಳಿಸುವಂತೆ ಹೋರಾಟ ಮಾಡಬೇಕು. ನಾನೂ ಸಹ ಟಿಪುತ್ರ್ಪ ಎಕ್ಸ್‌ ಪ್ರೆಸ್‌ ಹೆಸರು ಮುಂದುವರಿಸುವಂತೆ ಒತ್ತಾಯ ಮಾಡುತ್ತೇನೆ ಎಂದರು.

ಟಿಪ್ಪು ಎಕ್ಸ್‌ಪ್ರೆಸ್ ಇನ್ಮುಂದೆ ಒಡೆಯರ್ ಎಕ್ಸ್‌ಪ್ರೆಸ್ ರೈಲು, ಹೆಸರು ಬದಲಿಸಿ ಕೇಂದ್ರದ ಆದೇಶ!

ಗಣಿಗಾರಿಕೆ ತನಿಖೆಗೆ ಆಗ್ರಹ: 

ಜಿಲೆಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ಕುರಿತು ಸರ್ಕಾರ ಉನ್ನತ ಮಟ್ಟದ ತನಖೆ ನಡೆಸಬೇಕು. ಚಾಮರಾಜನಗರ ಜಿಲ್ಲೆಯಾಗಿ 25 ವರ್ಷ ಆಗಿದೆ. ಜಿಲ್ಲೆ ಅಭಿವೃದ್ದಿ ಬಗ್ಗೆ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಯಾರು ಕೂಡ ಚಾಮರಾಜನಗರ ಅಭಿವೃದ್ದಿ ಬಗ್ಗೆ ಗಮನಕೊಡುತ್ತಿಲ್ಲ, ಗಂಭೀರವಾದ ಪರಿಸ್ಥಿತಿ ಇದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ನೋಡಿದರೆ ಬಹಳ ನೋವಾಗುತ್ತದೆ. ಇದೊಂದು ಲೂಟಿ, ದರೋಡೆಯಾಗಿದೆ. ಈ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ವಾಟಾಳ್‌ನಾಗರಾಜ್‌ ಒತ್ತಾಯಿಸಿದರು.

ಚಾಮರಾಜನಗರ ಸುತ್ತಮುತ್ತ ಕ್ವಾರೆಗಳನ್ನು ತೆಗೆದಿದ್ದಾರೆ. ಸುಮಾರು 100ರಿಂದ 300 ಅಡಿ ಅಳ ತೆಗೆದಿದ್ದಾರೆ. ಕ್ವಾರೆ ಪಕ್ಕದಲ್ಲಿ ಎತ್ತರವಾದ ಗುಡ್ಡೆ ನಿರ್ಮಾಣ ಮಾಡಿದ್ದಾರೆ. ಇದನ್ನು ಯಾರು ಕೇಳುವವರಿಲ್ಲ. ಮುನ್ನೆಚ್ಚರಿಕೆ ಇಲ್ಲವೇ ಇಲ್ಲ. ಭೂ ವಿಜ್ಞಾನ ಇಲಾಖೆ ಸತ್ತು ಹೋಗಿದೆ. ಇದರ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಗಮನ ಕೊಡಬೇಕಿದೆ. ಒಂದು ಕಡೆ ಕ್ವಾರೆಗಳು, ಜಲ್ಲಿಕಲ್ಲು ಕ್ರಸರ್‌ ನಿಂದ ಬೆಳೆ, ರಸ್ತೆಗಳು ಹಾಳಾಗಿದೆ. ಕೆರೆಗಳು ಮಲೀನವಾಗುತ್ತದೆ. ಪ್ರಾಣಿ ಸಂಕುಲ ದಿಕ್ಕೆಟ್ಟು ಗ್ರಾಮಗಳತ್ತ ಬರುತ್ತಿದೆ. ಇದರಿಂದ ಜನತೆಗೆ ತೊಂದರೆಯಾಗಿದೆ. ಜಿಲ್ಲೆ ದಿವಾಳಿಯಾಗಿದೆ. ಈ ಸಂಬಂಧ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಅಜಯ್‌, ಹುಂಡಿ ಬಸವಣ್ಣ, ಶಿವಲಿಂಗಮೂರ್ತಿ, ಗೋಪಾಲಯ್ಯ, ಕುಮಾರ್‌, ಬಿ.ವಿ.ರೇವಣ್ಣಸ್ವಾಮಿ, ಚೆನ್ನನಂಜಪ್ಪ, ನಾಗರಾಜು, ಪಾರ್ಥಸಾರಥಿ ಇತರರು ಹಾಜರಿದ್ದರು.

ಗೌರವಕ್ಕೆ ಧಕ್ಕೆ :  

ಮೈಸೂರು ಒಡೆಯರ ಕುಟುಂಬ ರಾಜ್ಯ ಮತ್ತು ದೇಶಕ್ಕೆ ದೊಡ್ಡ ಕೊಡುಗೆ ನೀಡಿದೆ. ಆದರೆ ಹೊಸ ರೈಲು ತರಲು ಯೋಗ್ಯತೆ ಇಲ್ಲದ ಬಿಜೆಪಿ ಸರ್ಕಾರ ಹಳೆ ರೈಲಿಗೆ ಪೈಂಟ್‌ ಹೊಡೆದು ಒಡೆಯರ್‌ ಹೆಸರು ಹಾಕುವ ಬದಲು ಹೊಸ ರೈಲು ತಂದು ಅವರ ಹೆಸರು ಹಾಕಿದರೆ ಒಡೆಯರ್‌ ಕುಟುಂಬಕ್ಕೆ ಗೌರವ ಕೊಟ್ಟಂತಾಗುತ್ತದೆ. ಬಿಜೆಪಿಯವರೇ, ನಿಮ್ಮ ರಾಜಕೀಯಕ್ಕಾಗಿ ಒಡೆಯರ್‌ ಕುಟುಂಬದ ಗೌರವಕ್ಕೆ ಧಕ್ಕೆ ತರಬೇಡಿ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್‌ ಹೇಳಿದ್ದಾರೆ.

ಬೆಂಗಳೂರು- ಮೈಸೂರು ನಡುವೆ ಸಂಚರಿಸುವ ‘ಟಿಪ್ಪು ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌’ಗೆ ಒಡೆಯರ್‌ ಹೆಸರಿಟ್ಟಿರುವ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಟಿಪ್ಪು ಹೆಸರು ಈಗಾಗಲೇ ಲಂಡನ್‌ ಮ್ಯೂಸಿಯಂ ಮತ್ತು ಫ್ರಾನ್ಸ್‌ ದೇಶಗಳ ಸಹಿತ ವಿಶ್ವಾದ್ಯಂತ ಇದೆ. ಆದರೆ ಹಳೆ ರೈಲಿಗೆ ಹೊಸ ಹೆಸರಿಡುವ ಬದಲು ಕನಿಷ್ಠ ಹೊಸ ರೈಲು ತಂದು ಒಡೆಯರ್‌ ಹೆಸರಿಡಬೇಕಿತ್ತು. ಆದರೆ ಬಿಜೆಪಿ ತನ್ನ ಅಗ್ಗದ ರಾಜಕಾರಣಕ್ಕಾಗಿ ಹಳೆ ರೈಲಿಗೆ ಅವರ ಹೆಸರಿಟ್ಟಿದ್ದಾರೆ ಎಂದು ಆಕ್ಷೇಪಿಸಿದರು.

ಪುಲ್ವಾಮ ಚರ್ಚೆಯಾಗಲಿ: ರಾಹುಲ್‌ ಗಾಂಧಿ ಅವರ ‘ಭಾರತ್‌ ಜೋಡೊ’ ಯಾತ್ರೆಯ ಯಶಸ್ಸನ್ನು ಸಹಿಸದ ಬಿಜೆಪಿ ಅಪಪ್ರಚಾರದಲ್ಲಿ ತೊಡಗಿದ್ದಾರೆ. ರಾಹುಲ್‌ ಗಾಂಧಿಯ ಬಗ್ಗೆ ಇಲ್ಲಸಲ್ಲದ ಮಾತನಾಡುವವರು ಪುಲ್ವಾಮದಲ್ಲಿ 80ಕ್ಕೂ ಅಧಿಕ ಸೈನಿಕರು ಪಾಕಿಸ್ತಾನದ ಭಯೋತ್ಪಾದಕರಿಂದ ಹತ್ಯೆಗೀಡಾದಾಗ ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಎಲ್ಲಿದ್ದರು ಎನ್ನುವುದನ್ನು ಬಹಿರಂಗಪಡಿಸಲಿ. 250 ಕೆಜಿ ಆರ್‌ಡಿಎP್ಸ… ತುಂಬಿದ್ದ ವಾಹನ ಎಲ್ಲ ಭದ್ರತೆಗಳನ್ನೂ ದಾಟಿ ಸೈನಿಕರ ಬಸ್‌ ಬರುವಾಗಲೇ ಅಲ್ಲಿಗೆ ಬಂದು ತಲುಪಿದ್ದು ಹೇಗೆ? ಈ ಬಗ್ಗೆ ಇನ್ನೂ ತನಿಖೆ ಆಗದಿರುವುದೇಕೆ? ಯಾರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎನ್ನುವ ತನಿಖಾ ವರದಿಯನ್ನು ಬಹಿರಂಗಪಡಿಸಲಿ ಎಂದು ಖಾದರ್‌ ಆಗ್ರಹಿಸಿದರು.

ಗ್ರಾಮ ಪಂಚಾಯ್ತಿಗಳು ತಮ್ಮ ಅನುದಾನದಿಂದ ಧ್ವಜಸ್ತಂಭ ಕಟ್ಟಲು 3.5 ಲಕ್ಷ ರು. ಕಾಯ್ದಿರಿಸುವಂತೆ ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ನಿರ್ದೇಶನ ನೀಡಿದೆ. ಅದರ ನಿರ್ಮಾಣವನ್ನೂ ಒಂದೇ ಕಂಪೆನಿಗೆ ಕೊಡಬೇಕೆನ್ನುವ ಫರ್ಮಾನು ಹೊರಡಿಸಿದೆ. ಧ್ವಜಸ್ತಂಭದಲ್ಲೂ 40 ಪರ್ಸೆಂಟ್‌ ಕಮಿಷನ್‌ ಮಾಡುವ ಉದ್ದೇಶವಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಮುಖಂಡರಾದ ಸದಾಶಿವ ಉಳ್ಳಾಲ…, ಕಳ್ಳಿಗೆ ತಾರಾನಾಥ ಶೆಟ್ಟಿ, ಉಸ್ಮಾನ್‌ ಕಲ್ಲಾಪು, ಝಕರಿಯಾ ಮಲಾರ್‌, ಪಿಯುಸ್‌ ಮೊಂತೆರೊ ಮತ್ತಿತರರಿದ್ದರು.

Latest Videos
Follow Us:
Download App:
  • android
  • ios