ಮೋದಿ ಬರೀ ಭಾಷಣ ಮಾಡುವುದಾದರೇ ಏಕೆ ಬರಬೇಕಿತ್ತು?: ವಾಟಾಳ್ ನಾಗರಾಜ್
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬರೀ ಭಾಷಣ ಮಾಡಿ ಹೋಗುವುದಾದರೇ ಕರ್ನಾಟಕಕ್ಕೆ ಯಾಕೆ ಬರಬೇಕಾಗಿತ್ತು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರಶ್ನಿಸಿದರು.
ಚಾಮರಾಜನಗರ (ಸೆ.06): ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬರೀ ಭಾಷಣ ಮಾಡಿ ಹೋಗುವುದಾದರೇ ಕರ್ನಾಟಕಕ್ಕೆ ಯಾಕೆ ಬರಬೇಕಾಗಿತ್ತು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರಶ್ನಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿಯವರು ಮಂಗಳೂರಿನ ಕನ್ನಡ ನೆಲದಲ್ಲಿ ಭಾಷಣ ಮಾಡಿದ್ದಾರೆ. ರಾಜ್ಯದಲ್ಲಿ ನೆರೆಯಿಂದ ಕನ್ನಡಿಗರಿಗೆ ಆಗಿರುವ ಅನ್ಯಾಯ, ನಷ್ಟ, ನೋವುಗಳನ್ನು ಒಂದು ಪದದಲ್ಲೂ ಹೇಳಲಿಲ್ಲ.
ಎಡಬಲ ಪಕ್ಷದ ಮುಖಂಡರುಗಳನ್ನು ಕೂರಿಸಿಕೊಂಡು ಜನರತ್ತ ಕೈ ಬೀಸೋದು, ವಿಮಾನ ನಿಲ್ದಾಣಕ್ಕೆ ಹೋಗಿ ದೆಹಲಿಗೆ ಓಡುವುದು ಇದು ಪ್ರಧಾನಿಗಳ ಕಾರ್ಯಕ್ರಮವಾಗಿದೆ ಎಂದು ಪ್ರಧಾನಿ ವಿರುದ್ಧ ಕಿಡಿಕಾರಿದರು. ಹಿಂದೆಯೋ ಕೂಡ ಪ್ರಧಾನಿಯವರು ರಾಜ್ಯಕ್ಕೆ ಬಂದು ಮೈಸೂರಿನಲ್ಲಿ ವ್ಯಾಯಾಮ, ಧ್ಯಾನ ಮಾಡಿದರು. ಮಠಗಳಿಗೆ ಹೋಗಿದ್ದರು. ರಾಜ್ಯದ ಅಭಿವೃದ್ಧಿ ಬಗ್ಗೆ, ಅನುದಾನ ಬಿಡುಗಡೆ ಬಗ್ಗೆ ಚಕಾರ ಎತ್ತುತ್ತಿಲ್ಲ. ನಿರಂತರ ಪ್ರವಾಹದಿಂದ ಇಡಿ ರಾಜ್ಯವೇ ಮುಳುಗಿ ಹೋಗಿದೆ. ನೋಡೋಕೆ ಬರಲಿಲ್ಲ ಸುಮ್ಮನೆ ಮಾತನಾಡುತ್ತಾರೆ. ಕರ್ನಾಟಕಕ್ಕೆ ತಿಂಗಳಿಗೊಮ್ಮೆ ಬರುವುದಾಗಿ ಹೇಳಿದ್ದಾರೆ. ಕರ್ನಾಟಕಕ್ಕೆ ನಿಮ್ಮ ಕೊಡುಗೇನು ಎಂದು ವಾಟಾಳ್ ಪ್ರಶ್ನಿಸಿದರು.
ಭಾರೀ ವಾಹನಗಳ ರಾತ್ರಿ ಸಂಚಾರಕ್ಕೆ ನಿರ್ಬಂಧ: ಡಿಸಿ ಚಾರುಲತಾ ಸೋಮಲ್
ನಿರ್ಮಲಾ ಸೀತಾರಾಮನ್, ಲಿಂಬಾವಳಿ ರಾಜೀನಾಮೆಗೆ ಆಗ್ರಹ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ಗೆದ್ದು ರಾಜ್ಯಸಭೆಗೆ ಹೋಗಿ , ಸಚಿವರಾಗಿದ್ದೀರಾ, ಕರ್ನಾಟಕಕ್ಕೆ ನಯಾಪೈಸೆ ಕೊಟ್ಟಿಲ್ಲ ಅಂದ ಮೇಲೆ ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಾಟಾಳ್ ಆಗ್ರಹಿಸಿದರು. ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಅರ್ಜಿ ಕೊಡಲು ಬಂದ ಮಹಿಳೆಯಿಂದ ಬಲವಂತ ದಾಖಲೆಗಳನ್ನು ಕಿತ್ತುಕೊಳ್ಳುವುದು ಒಂದು ದೌರ್ಜನ್ಯ ಮೆರೆದಿದ್ದು, ಅವರು ರಾಜೀನಾಮೆ ಕೊಡಬೇಕು ಇಲ್ಲದ್ದಿದ್ದರೆ ಬಿಜೆಪಿಯವರೇ ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ, ಚಾ.ರಂ.ಶ್ರೀನಿವಾಸಗೌಡ, ಅಜಯ್, ಮಹೇಶ್, ಶಿವಲಿಂಗಮೂರ್ತಿ, ಚಾ.ರಾ.ಕುಮಾರ್, ಸ್ಠೀಪನ್, ವರದರಾಜು, ಗೋಪಾಲಯ್ಯ ಹಾಜರಿದ್ದರು.
ಮೊಟ್ಟೆ ಎಸೆತ ಖಂಡಿಸಿ ವಾಟಾಳ್ ಪ್ರತಿಭಟನೆ: ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂದೆ ತಮ್ಮ ಬೆಂಬಲಿಗರೊಂದಿಗೆ ಮೊಟ್ಟೆಎಸೆತ ಸಂಸ್ಕೃತಿ ಬೇಡಬೇಡ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ವಾಟಾಳ್ ನಾಗರಾಜ್ ಮಾತನಾಡಿ, 75ನೇ ಸ್ವಾತಂತ್ರ್ಯಅಮೃತ ಮಹೋತ್ಸವ ವೆಳೆ ಮೊಟ್ಟೆಎಸೆತ ರಾಜಕಾರಣ ಅಪಾಯಕಾರಿ, ಇದು ನಿಲ್ಲಬೇಕು ಎಂದು ಆಗ್ರಹಿಸಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒಬ್ಬ ಪ್ರಬುದ್ಧ ರಾಜಕಾರಣಿ. ಸಿದ್ದರಾಮಯ್ಯನವರ ಮೇಲೆ ಚಿಕ್ಕಮಗಳೂರು, ಕೊಡುಗಿನಲ್ಲಿ ಕೋಳಿಮೊಟ್ಟೆಎಸೆಸಿದ್ದು ಸರಿಯಲ್ಲ.
ಮಳೆ ಪರಿಹಾರ ಸಮರೋಪಾದಿಯಲ್ಲಿ ನಿರ್ವಹಿಸಿ: ಸಚಿವ ಸೋಮಣ್ಣ
ಇಂದು ಸಿದ್ದರಾಮಯ್ಯನವರ ಮೇಲೆ ನಾಳೆ ಇನ್ನೊಬ್ಬರ ಮೇಲೆ, ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು. ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ, ರಾಜ್ಯದ ಕಾನೂನು ಶಾಂತಿ ಕಾಪಾಡಬೇಕಾಗಿದೆ. ಪ್ರಜಾಪ್ರಭುತ್ವದಲ್ಲಿ ಮಾತನಾಡಲು ಎಲ್ಲರಿಗೂ ಅಧಿಕಾರ ಇದೆ. ನೀವು ಮಾತನಾಡಿ. ನೀವು ಬೀದಿಬೀದಿಯಲ್ಲಿ ಕೋಳಿಮೊಟ್ಟೆಎಸೆದ್ರೆ ಗೂಂಡಾ ರಾಜ್ಯ ಆಗುತ್ತೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3 ಜನರ ಕೊಲೆ, ಧಾರವಾಡದಲ್ಲಿ ಡಾ. ಕಲ್ಬುರ್ಗಿ, ಗೌರಿ ಲಂಕೇಶ್ ಕೊಲೆ ಬಗ್ಗೆ ಚಿಂತನೆ ನಡೆದಿಲ್ಲ. ಇದು ಪೊಲೀಸರಿಗೆ ಸವಾಲು ಆಗಿದೆ. ಕರ್ನಾಟಕ ಕೊಲೆ ರಾಜ್ಯವಾಗಿದೆ ಎಂದರು.