Hinduism: ಯಾರು ಏನೇ ಹೇಳಿದರೂ ಧರ್ಮ ದೊಡ್ಡದಾಗಿ ಬೆಳೆಸಿ: ಯದುವೀರ

*   ಹಿಂದೂ ಧರ್ಮ ರಕ್ಷಣೆ ರಾಜವಂಶಸ್ಥ ಕರೆ
*   ಚಾಮರಾಜನಗರದಲ್ಲಿ ಎಬಿವಿಪಿ 41ನೇ ರಾಜ್ಯ ಸಮ್ಮೇಳನ ಆರಂಭ
*   ಹಿಂದೂ ಧರ್ಮ ರಕ್ಷಣೆಗೆ ಮೈಸೂರು ಅರಮನೆಯು ಹಿಂದೆಯೂ ಸದಾ ಸಿದ್ಧವಾಗಿತ್ತು
 

Yaduveer Krishnadatta Wadiyar Talks Over Hinduism in Chamarajanagar grg

ಚಾಮರಾಜನಗರ(ಫೆ.16): ಯಾರು ಏನೇ ಹೇಳಿದರೂ ಧರ್ಮವನ್ನು ದೊಡ್ಡಮಟ್ಟದಲ್ಲಿ ಬೆಳೆಸಬೇಕು, ಧರ್ಮ ಉಳಿಸಲು ಎಲ್ಲರೂ ಒಂದಾಗಬೇಕು. ಹಿಂದೂ ಧರ್ಮ ರಕ್ಷಣೆಗೆ ಮೈಸೂರು ಅರಮನೆಯು(Mysuru Palace) ಹಿಂದೆಯೂ ಸದಾ ಸಿದ್ಧವಾಗಿತ್ತು, ಈಗಲೂ ಸಿದ್ಧವಾಗಿದ್ದೇವೆ ಎಂದು ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಒಡೆಯರ್‌(Yaduveer Krishnadatta Wadiyar) ಹೇಳಿದರು.

ಚಾಮರಾಜನಗರದ(Chamarajanagar) ನಂದಿ ಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಎಬಿವಿಪಿ(ABVP) 41ನೇ ರಾಜ್ಯ ಸಮ್ಮೇಳನದಲ್ಲಿ ಅವರು ಮಾತನಾಡಿ, ನಮ್ಮ ಸಮಾಜದಲ್ಲಿನ ಬಹುತೇಕ ಸಮಸ್ಯೆಗಳಿಗೆ ಹಿಂದೂ ಧರ್ಮದಲ್ಲೇ(Hinduism) ಪರಿಹಾರ-ಉತ್ತರವಿದೆ. ಆದ್ದರಿಂದ, ಧರ್ಮ ರಕ್ಷಣೆ ಇಂದಿತ ಅಗತ್ಯವಾಗಿದೆ. ಧರ್ಮ ರಕ್ಷಣೆಗೆ ಜಾತಿ-ಜಾತಿಗಳು ಒಗ್ಗಟ್ಟಾಗಬೇಕು ಎಂದು ಹೇಳಿದರು.

ಪ್ರವಾಸಿಗರನ್ನು ಹೂ ನೀಡಿ ಸ್ವಾಗತಿಸಿದ ಯದುವೀರ ಒಡೆಯರ್!

ಜಯಚಾಮರಾಜ ಒಡೆಯರ್‌ ಹಿಂದು ಪರಿಷತ್‌ನ ಅಧ್ಯಕ್ಷರಾಗಿದ್ದರು. ಜೊತೆಗೆ ಬೇಸಗೆ ಅರಮನೆಯಲ್ಲಿ ವಿಎಚ್ಪಿ ಸಮ್ಮೇಳನವೂ ನಡೆದಿತ್ತು ಎಂದು ನೆನಪಿಸಿಕೊಂಡರು. ಸಮ್ಮೇಳನಕ್ಕೆ ಚಾಲನೆ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ನೂತನ ರಾಷ್ಟಿ್ರೕಯ ಶಿಕ್ಷಣ ನೀತಿ ಸೇರಿದಂತೆ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳು ರೂಪಿಸಿರುವ ಹತ್ತಾರು ಚಾರಿತ್ರಿಕ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಹಾಗೂ ಈ ಬಗ್ಗೆ ಅರಿವು ಮೂಡಿಸುವ ಮಹತ್ವದ ಕೆಲಸವನ್ನು ಎಬಿವಿಪಿ ಮಾಡಬೇಕು. ಇದರಿಂದ ಸದೃಢ ಮತ್ತು ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸಬಹುದಾಗಿದೆ ಎಂದು ತಿಳಿಸಿದರು.

ಸಮ್ಮೇಳನಾಧ್ಯಕ್ಷೆ ಬಾಗೇಶ್ರೀ, ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷ ಛಗನ್ಭಾಯಿ ಪಟೇಲ್, ರಾಜ್ಯಾಧ್ಯಕ್ಷ ವೀರೇಶ್ಬಾಳೇಕಾಯಿ, ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ಕುಮಾರ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಸುಬ್ಬಯ್ಯ ಅಯ್ಯಪ್ಪನ್ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಎಪಿಬಿವಿ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ವಿವಾದದ ಕಿಚ್ಚಿ ಹೆಚ್ಚಾಗುತ್ತಿದ್ದಂತೆಯೇ ಹೇಳಿಕೆ ಹಿಂಪಡೆದ ತೇಜಸ್ವಿ ಸೂರ್ಯ

ಬೆಂಗಳೂರು: ಮುಸ್ಲಿಂ(Muslim), ಕ್ರೈಸ್ತರನ್ನು (Christian) ವಾಪಸ್ ಹಿಂದೂ ಧರ್ಮಕ್ಕೆ (Hindu Religion) ಕರೆತರದೆ ಬೇರೆ ದಾರಿಯೇ ಇಲ್ಲ ಎಂದಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಇದೀಗ ತಮ್ಮ ಹೇಳಿಕೆಯನ್ನು ವಾಪಸ್ ಪಡೆದುಕೊಂಡ ಘಟನೆ ಕಳೆದ ವರ್ಷದ ಡಿ.27 ರಂದು ನಡೆದಿತ್ತು.  

ಯದುವೀರ್‌ ಹೆಸರಿನಲ್ಲಿ ನಕಲಿ ಟ್ವಿಟರ್‌ ಖಾತೆ ತೆರೆದು ರೈತ ಹೋರಾಟಕ್ಕೆ ಬೆಂಬಲ!

ಎರಡು ದಿನಗಳ ಹಿಂದೆ ಉಡುಪಿ ಶ್ರೀಕೃಷ್ಣ ಮಠದಲ್ಲಿ (Udupi Shri Krishna Matha) ನಡೆದ ಕಾರ್ಯಕ್ರಮದಲ್ಲಿ 'ಭಾರತದಲ್ಲಿ ಹಿಂದೂ ಪುನರುತ್ಥಾನ' ಎಂಬ ವಿಷಯದ ಕುರಿತು ಮಾತನಾಡಿದ್ದ ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ (BJP national Yuva Morcha president) ತೇಜಸ್ವಿ ಸೂರ್ಯ ಹೇಳಿದ್ದರು. ನನ್ನ ಭಾಷಣದ ಕೆಲವು ಹೇಳಿಕೆಗಳು ವಿವಾದವನ್ನು ಸೃಷ್ಟಿಸಿವೆ. ಹಾಗಾಗಿ ಬೇಷರತ್ತಾಗಿ ಹೇಳಿಕೆಗಳನ್ನು ಹಿಂಪಡೆಯುತ್ತೇನೆ' ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸೋಮವಾರ ಟ್ವೀಟ್ (Tweet) ಮಾಡಿದ್ದರು.

ಏನಿದು ವಿವಾದ?

ಡಿಸೆಂಬರ್ 25, ಶನಿವಾರ ಉಡುಪಿ(Udupi) ಶ್ರೀಕೃಷ್ಣ ಮಠದ ವಿಶ್ವಾರ್ಪಣ ಕಾರ್ಯಕ್ರಮದಲ್ಲಿ ಮಾತನಾಡಿದ್ದ  ತೇಜಸ್ವಿ ಸೂರ್ಯ, ಹಿಂದೂ ಸಂಸ್ಕೃತಿ, ಸಮಾಜ, ಪರಂಪರೆ ಉಳಿಬೇಕಾದರೆ ಹಿಂದೂ ಧರ್ಮ ಉಳಿಯಬೇಕು. ಇದಕ್ಕಾಗಿ ಮತಾಂತರವಾಗಿ ಪಾಕಿಸ್ತಾನಕ್ಕೆ ಹೋದವರನ್ನು ಹಿಂದೂ ಧರ್ಮಕ್ಕೆ ಕರೆತರಬೇಕು. ಜೊತೆಗೆ ಚೀನಾ, ಜಪಾನಿಗೆ ಹೋಗಿ ಮತಾಂತರಗೊಂಡವರನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳಬೇಕು. ಮುಸ್ಲಿಮರು, ಕ್ರೈಸ್ತರನ್ನು ಘರ್ ವಾಪಸಿ ಮಾಡದೆ ಬೇರೆ ದಾರಿಯಿಲ್ಲ ಎಂದು ಹೇಳಿದ್ದರು. ಸಂಸದರ ಈ ಹೇಳಿಕೆಗಳು ವಿವಾದವನ್ನು ಸೃಷ್ಟಿಸಿತ್ತು. ಪ್ರತಿ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಇದರಿಂದ ಎಚ್ಚೆತ್ತ ತೇಜಸ್ವಿ ಸೂರ್ಯ ಬೇಷರತ್ ಆಗಿ ತಮ್ಮ ಹೇಳಿಕೆ ವಾಪಸ್ ಪಡೆದುಕೊಂಡಿದ್ದರು. 
 

Latest Videos
Follow Us:
Download App:
  • android
  • ios