ಮೈಸೂರು(ಫೆ.06): ​ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೆಸರಿನಲ್ಲಿ ನಕಲಿ ಟ್ವಿಟರ್‌ ಖಾತೆಯೊಂದನ್ನು ತೆರೆ​ಯ​ಲಾ​ಗಿದೆ. ಆ ಟ್ವಿಟರ್‌ ಖಾತೆ ಮೂಲಕ ಯದು​ವೀರ್‌ ಅವರು ರೈತರಿಗೆ ಬೆಂಬಲ ಸೂಚಿಸಿರುವಂತೆ ಬಿಂಬಿಸಲಾಗಿದೆ. 

‘ಆತ್ಮೀಯ ಪ್ರಧಾನಿ ಮೋದಿ ಅವರೇ ರೈತರ ಸಮಸ್ಯೆ ಬಗೆಹರಿಸಿ’ ಎಂದು ಅವರ ಟ್ವಿಟರ್‌ ಖಾತೆ​ಯಲ್ಲಿ ಟ್ವೀಟ್‌ ಮಾಡಲಾಗಿದೆ. 

ಯದುವೀರ್‌ ಇನ್ನೂ ಬಾಲಕ, ತಾಯಿ ಹೇಳಿದ್ದಕ್ಕೆ ತಲೆ ಅಲ್ಲಾಡಿಸ್ತಾನೆ: ಮಾಜಿ ಮೇಯರ್

ತಮ್ಮ ಹೆಸರಲ್ಲಿ ನಕಲಿ ಟ್ವಿಟರ್‌ ಖಾತೆ ತೆರೆದಿ​ರುವ ಬಗ್ಗೆ ಯದುವೀರ್‌ ಅವರೇ ಸ್ಪಷ್ಟನೆ ನೀಡಿದ್ದು, ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದ್ದಾ​ರೆ.