ಯಾದಗಿರಿ(ಡಿ.10): ಚಲಿಸುತ್ತಿದ್ದ ರೈಲಿನಲ್ಲೇ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ಆಂಧ್ರದ ಅನಂತಪುರ ಬಳಿ ನಡೆದಿದೆ. ಯಾದಗಿರಿ ತಾಲೂಕಿನ ಸೈದಾಪುರ ಗ್ರಾಮದ ಗೀತಾ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಹೆರಿಗೆಯಾಗಿದೆ.

ಚಲಿಸುತ್ತಿರುವ ಬಸ್, ಆಂಬ್ಯುಲೆನ್ಸ್‌ಗಳಲ್ಲಿ ಹೆರಿಗೆ ನಡೆಯುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಚಲಿಸುತ್ತಿರುವ ರೈಲಿನಲ್ಲಿ, ಅದೂ ಬೆಳಗಿನ ಮೂರು ಗಂಟೆಗೆ ಹೆರಿಗೆಯಾಗಿರುವ ಘಟನರ ನಡೆದಿದೆ.

ಯಾದಗಿರಿ: ಚಲಿಸುತ್ತಿರುವ ಬಸ್‌ನಲ್ಲಿಯೇ ನಡೆಯಿತು ಹೆರಿಗೆ..!

ರೈಲು ಚಲಿಸುತ್ತಿದ್ದಂತೆ ಗೀತಾಗೆ ಹೆರಿಗೆ ನೋವು ಗುಣಿಸಿ ಕೊಂಡಿತ್ತು. ಇದೇ ರೈಲಿನಲ್ಲಿದ್ದ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ನಾಲ್ವಾರ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಕೂಡಲೇ ಗೀತಾ ಸಹಾಯಕ್ಕೆ ಧಾವಿಸಿದ್ದಾರೆ.

ಬೆಳಗಿನ ಜಾವ ಮೂರು ಗಂಟೆಗೆ ಗೀತಾಗೆ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಿ, ಮಗು ಆರೋಗ್ಯವಾಗಿದ್ದು ಬೆಂಗಳೂರಿನ ಯಲಹಂಕದಲ್ಲಿರೋ ಗೀತಾ ತಾಯಿಮನೆಯಲ್ಲಿ ಇದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತರು ತಿಳಿಸಿದ್ದಾರೆ‌.

ಚಿಕ್ಕಬಳ್ಳಾಪುರ: ಆಂಬ್ಯುಲೆನ್ಸ್ 108ರಲ್ಲಿ ದಾರಿ ಮಧ್ಯೆಯೇ ಹೆರಿಗೆ