ಚಿಕ್ಕಬಳ್ಳಾಪುರ: ಆಂಬ್ಯುಲೆನ್ಸ್ 108ರಲ್ಲಿ ದಾರಿ ಮಧ್ಯೆಯೇ ಹೆರಿಗೆ
ಆಂಬ್ಯುಲೆನ್ಸ್‌ಗಳಲ್ಲಿ ಹೆರಿಗೆಯಾಗುವ ಸಿನಿಮೀಯ ದೃಶ್ಯಗಳನ್ನು ಎಲ್ಲರೂ ನೋಡಿರುತ್ತಾರೆ. ಆದರೆ ಚಿಕ್ಕಬಳ್ಳಾಪುರದಲ್ಲಿ ವಾಸ್ತವದಲ್ಲಿ ಆಂಬ್ಯುಲೆನ್ಸ್‌ನಲ್ಲಿಯೇ ಹೆರಿಗೆಯಾಗಿರುವ ಘಟನೆ ಗುರುವಾರ ಬೆಳಗ್ಗೆ ನಡದಿದೆ. ದಾರಿ ಮಧ್ಯೆಯೇ ಹೆರಿಗೆಯಾಗಿದ್ದು, ಹೆಣ್ಣು ಮಗುವಿನ ಜನನವಾಗಿದೆ. ಈ ಸಂದರ್ಭ ಅಲ್ಲಿ ವೈದ್ಯರಾ್ಯಾರೂ ಇರಲಿಲ್ಲ. ಶುಶ್ರೂಷಕಾ ಮರುಳಿ, ಸಿಬ್ಬಂದಿ ಸೀನಪ್ಪ ಅವರೇ ಮಾನವೀಯತೆ ಮೆರೆದು ಹೆರಿಗೆಗೆ ನೆರವಾಗಿದ್ದಾರೆ.
ಚಿಕ್ಕಬಳ್ಳಾಪುರ(ಅ.31): ಆಂಬ್ಯುಲೆನ್ಸ್‌ಗಳಲ್ಲಿ ಹೆರಿಗೆಯಾಗುವ ಸಿನಿಮೀಯ ದೃಶ್ಯಗಳನ್ನು ಎಲ್ಲರೂ ನೋಡಿರುತ್ತಾರೆ. ಆದರೆ ಚಿಕ್ಕಬಳ್ಳಾಪುರದಲ್ಲಿ ವಾಸ್ತವದಲ್ಲಿ ಆಂಬ್ಯುಲೆನ್ಸ್‌ನಲ್ಲಿಯೇ ಹೆರಿಗೆಯಾಗಿರುವ ಘಟನೆ ಗುರುವಾರ ಬೆಳಗ್ಗೆ ನಡದಿದೆ. ದಾರಿ ಮಧ್ಯೆಯೇ ಹೆರಿಗೆಯಾಗಿದ್ದು, ಹೆಣ್ಣು ಮಗುವಿನ ಜನನವಾಗಿದೆ. ಈ ಸಂದರ್ಭ ಅಲ್ಲಿ ವೈದ್ಯರಾ್ಯಾರೂ ಇರಲಿಲ್ಲ. ಶುಶ್ರೂಷಕಾ ಮರುಳಿ, ಸಿಬ್ಬಂದಿ ಸೀನಪ್ಪ ಅವರೇ ಮಾನವೀಯತೆ ಮೆರೆದು ಹೆರಿಗೆಗೆ ನೆರವಾಗಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಚನ್ನರಾಯನಪಲ್ಲಿ ಗ್ರಾಮದ ಅರುಣಾ ಎಂಬವರಿಗೆ ಬೆಳಗ್ಗಿನ ಜಾವ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಅದರಂತೆ 108ಕ್ಕೆ ಕರೆ ಮಾಡಿ ಅರುಣಾ ಅವರನ್ನು ಆಸ್ಪತ್ರೆಗೆ ಸಾಗಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ ದಾರಿ ಮಧ್ಯೆಯೇ ಹೆರಿಗೆ ನೋವು ಹೆಚ್ಚಾಗಿತ್ತು. ನಂತರ ಅಂಬ್ಯುಲೆನ್ಸ್‌ನಲ್ಲಿಯೆ ಹೆರಿಗೆ ನಡೆಸಲಾಗಿದೆ.
ಪ್ರಸೂತಿ ತಜ್ಞರಿರಲಿಲ್ಲ:
ಆಂಬ್ಯುಲೆನ್ಸ್‌ನಲ್ಲಿ ಪ್ರಸೂತಿ ತಜ್ಞರು ಇರಲಿಲ್ಲ. ಆಂಬ್ಯುಲೆನ್ಸ್‌ನಲ್ಲಿದ್ದ ಶುಶ್ರೂಷಕಾ ಮರುಳಿ, ಸಿಬ್ಬಂದಿ ಸೀನಪ್ಪ ಎಂಬವರೇ ಸಹಾಯ ಮಾಡಿ ಹೆರಿಗೆ ನಡೆಸಿದ್ದಾರೆ. ಅಂತೂ ಯಾವುದೇ ತೊಂದರೆ ಇಲ್ಲದೆ ಅರುಣಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮುಂಜಾನೆ 5.26ಕ್ಕೆ ಆಂಬ್ಯುಲೆನ್ಸ್ನಲ್ಲಿ ಹೆರಿಗೆಯಾಗಿದೆ. ಇಬ್ಬರಿಗೂ ಕೂಡ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಮಗು ಹಾಗೂ ಅರುಣಾ ಆರೋಗ್ಯ ವಾಗಿದ್ದಾರೆ.
ಮಂಗಳೂರು: ‘ಕ್ಯಾರ್’ ಆಯ್ತು, ಈಗ ‘ಮಹಾ’ ಸೈಕ್ಲೋನ್ ಭೀತಿ!