ನಮ್ಮ ಮೆಟ್ರೋದಲ್ಲೂ ಮದ್ಯ ಬಾಟಲಿ ಸಾಗಣೆಗೆ ಗ್ರೀನ್ ಸಿಗ್ನಲ್? ಪೀಕ್ ಅವರ್‌ನಲ್ಲೇ ಕೈಕೊಟ್ಟ ಮೆಟ್ರೋ; ಪ್ರಯಾಣಿಕರ ಪರದಾಟ
ಈಗಾಗಲೇ ದೆಹಲಿ ಮೆಟ್ರೋದಲ್ಲಿ ಒಬ್ಬ ಪ್ರಯಾಣಿಕನಿಗೆ ಎರಡು ಸೀಲ್ಡ್ ಮದ್ಯದ ಬಾಟಲಿ ಸಾಗಣಿಕೆಗೆ ಅವಕಾಶ ನೀಡಲಾಗಿದ್ದು, ಈ ಹಿನ್ನೆಲೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಬೆಂಗಳೂರಲ್ಲಿ ಅನುಮತಿ ನೀಡುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು (ಜುಲೈ 4, 2023): ಇತ್ತೀಚೆಗಷ್ಟೇ ದೆಹಲಿ ಮೆಟ್ರೋದಲ್ಲಿ ಮ್ಯ ಸಾಗಣೆಗೆ ಅವಕಾಶ ನೀಡಲಾಗಿತ್ತು. ಇದೇ ರೀತಿ, ಬೆಂಗಳೂರಿನ ನಮ್ಮ ಮೆಟ್ರೋದಲ್ಲೂ ಪ್ರಯಾಣಿಕರಿಗೆ ಮದ್ಯ ಸಾಗಣೆಗೆ ಅವಕಾಶ ನೀಡಲಾಗುತ್ತದೆಯೇ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆ ಪರಿಶೀಲನೆಗೆ ಬಿಎಂಆರ್‌ಸಿಎಲ್ ಮುಂದಾಗಿದೆ.
ಈಗಾಗಲೇ ದೆಹಲಿ ಮೆಟ್ರೋದಲ್ಲಿ ಒಬ್ಬ ಪ್ರಯಾಣಿಕನಿಗೆ ಎರಡು ಸೀಲ್ಡ್ ಮದ್ಯದ ಬಾಟಲಿ ಸಾಗಣಿಕೆಗೆ ಅವಕಾಶ ನೀಡಲಾಗಿದ್ದು, ಈ ಹಿನ್ನೆಲೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಬೆಂಗಳೂರಲ್ಲಿ ಅನುಮತಿ ನೀಡುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ಇದೊಂದ್ ಬಾಕಿ ಇತ್ತು... ಮೆಟ್ರೋದಲ್ಲಿ 2 ಬಾಟ್ಲಿ ಎಣ್ಣೆ ತೆಗೆದುಕೊಂಡು ಹೋಗಲು ಸಿಕ್ತು ಪರ್ಮೀಷನ್!
ಇನ್ನೊಂದೆಡೆ, ಈ ಹಿಂದೆಯೇ ನಮ್ಮ ಮೆಟ್ರೋದಲ್ಲಿ ಮದ್ಯ ಸಾಗಣಿಕೆಗೆ ಪ್ರಯಾಣಿಕರಿಗೆ ಅವಕಾಶ ನೀಡಲಾಗಿತ್ತು. ಆದರೆ, ಮೆಟ್ರೋ ಪ್ರಯಾಣಿಕರೊಬ್ರು ರೆಸ್ಟ್ ರೂಂನಲ್ಲಿ ಮದ್ಯ ಸೇವಿಸಿದ್ದ ಕಾರಣ 2019ರಲ್ಲಿ ನಿಷೇಧ ಮಾಡಲಾಗಿತ್ತು. ಮದ್ಯ ಶೀಘ್ರ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳ ಪಟ್ಟಿಯಲ್ಲಿರುವ ಕಾರಣ ಸದ್ಯ ಇದರ ಸಾಗಣೆಗೆ ಬಿಎಂಆರ್‌ಸಿಎಲ್ ನಿರ್ಬಂಧ ಹೇರಿದೆ ಎಂದು ತಿಳಿದುಬಂದಿದ್ದು, ಆದರೆ, ಸದ್ಯದಲ್ಲೇ ಮದ್ಯ ಬಾಟಲ್‌ಗಳ ಸಾಗಣೆಗೆ ಬಿಎಂಆರ್‌ಸಿಎಲ್ ಅವಕಾಶ ನೀಡಲಿದೆ ಎಂದು ತಿಳಿದುಬಂದಿದೆ.
ಕೆಂಗೇರಿ - ಬೈಯ್ಯಪ್ಪನಹಳ್ಳಿ ಮೆಟ್ರೋ ಸಂಚಾರ ಸ್ಥಗಿತ; ಜನರ ಪರದಾಟ
ನಮ್ಮ ಮೆಟ್ರೋ ಸಂಚಾರದಲ್ಲಿ ಜುಲೈ 4, ಮಂಗಳವಾರ ಬೆಳಗ್ಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ತಾಂತ್ರಿಕ ಕಾರಣಗಳಿಂದ ನೇರಳೆ ಮಾರ್ಗದ ಮೆಟ್ರೋ ಸಂಚಾರ ಸ್ಥಗಿತಗೊಂಡಿದ್ದು, ಈ ಕಾರಣಗಳಿಂದ ಮೆಟ್ರೋ ಟ್ರೈನ್ ಬರದ ಹಿನ್ನೆಲೆ ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಪೀಕ್ ಹವರ್‌ನಲ್ಲೇ ಮೆಟ್ರೋ ಕೈಕೊಟ್ಟ ಕಾರಣ ಕಚೇರಿಗೆ ಹೊರಟವರೆಲ್ಲಾ ನಿಲ್ದಾಣದಲ್ಲೇ ಮೆಟ್ರೋಗಾಗಿ ಕಾಯೋ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದನ್ನೂ ಓದಿ: ಮಹಿಳೆಯರಂತೆ ಉಚಿತ ಪ್ರಯಾಣ ಬೇಡ, ಬಸ್‌ನಲ್ಲಿ ಮದ್ಯದ ಬಾಟಲಿ ಸಾಗಾಟಕ್ಕೆ ಅವಕಾಶ ಕೊಡಿ
ಈ ಬಗ್ಗೆ ನಮ್ಮ ಮೆಟ್ರೋ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಸಿಗ್ನಲಿಂಗ್ ಸಮಸ್ಯೆಯಿಂದಾಗಿ ನೇರಳೆ ಮಾರ್ಗದ ಮೆಟ್ರೋ ರೈಲಿನಲ್ಲಿ ಸಂಚಾರ ವ್ಯತ್ಯಯ ಉಂಟಾಗಿದೆ. ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದಿದ್ದಾರೆ. ‘’ಸಿಗ್ನಲಿಂಗ್ ಸಮಸ್ಯೆಗಳಿಂದಾಗಿ ನೇರಳೆ ರೇಖೆಯಲ್ಲಿ ವಿಳಂಬವನ್ನು ನಿರೀಕ್ಷಿಸಿ. ಸಿಬ್ಬಂದಿ (ಮೆಟ್ರೋ ಸೇವೆ) ಸಾಮಾನ್ಯಗೊಳಿಸಲು ಕೆಲಸ ಮಾಡುತ್ತಿದ್ದಾರೆ. ಇದು ನಿಮ್ಮ ಮಾಹಿತಿಗಾಗಿ ಮತ್ತು ಅನಾನುಕೂಲತೆಗಾಗಿ ವಿಷಾದಿಸುತ್ತೇವೆ’’ ಎಂದು ನಮ್ಮ ಮೆಟ್ರೋ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಎಣ್ಣೆ ಏಟಲ್ಲಿ ದಾರಿಯಲ್ಲಿ ಹೋಗೋನಿಗೆ ಸ್ವಂತ ಕಾರು ಕೊಟ್ಟು ಮೆಟ್ರೋ ಏರಿದ, ಇದರಲ್ಲಿದೆ ಟ್ವಿಸ್ಟು!