ಎಣ್ಣೆ ಏಟಲ್ಲಿ ದಾರಿಯಲ್ಲಿ ಹೋಗೋನಿಗೆ ಸ್ವಂತ ಕಾರು ಕೊಟ್ಟು ಮೆಟ್ರೋ ಏರಿದ, ಇದರಲ್ಲಿದೆ ಟ್ವಿಸ್ಟು!

ದಾರಿಯಲ್ಲಿ ಸುಮ್ಮನೆ ಹೋಗ್ತಿದ್ದ ವ್ಯಕ್ತಿಗೆ ಗುರುಗ್ರಾಮದ ವ್ಯಕ್ತಿಯೊಬ್ಬ ಮದ್ಯದ ಆಫರ್‌ ನೀಡಿದ್ದ. ಆದರೆ, ಕೊನೆಯಲ್ಲಿ ತನ್ನ ಕಾರು, ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌ ಹಾಗೂ ಹಣ ಎಲ್ಲವನ್ನೂ ಕಳೆದುಕೊಂಡಿದ್ದಾರೆ.
 

Man Gets Drunk With Stranger Gets Lift to Metro Station Then Realises it Was His Own Car in Gurugram san

ನವದೆಹಲಿ (ಜೂ.12): ವೀಕೆಂಡ್‌ ಸಂಭ್ರಮದಲ್ಲಿ ಗುರುಗ್ರಾಮದ 30 ವರ್ಷದ ವ್ಯಕ್ತಿ ಶುಕ್ರವಾರ ರಾತ್ರಿ ಕಂಠಪೂರ್ತಿ ಕುಡಿದುಕೊಂಡು ಮನೆಗೆ ಹೋಗಿದ್ದ. ಮನೆಗೆ ಹೋದ ನಂತರವೇ ಆತನಿಗೆ ತನ್ನ ಕಾರು, ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌ ಹಾಗೂ 18 ಸಾವಿರ ರೂಪಾಯಿ ಹಣ ಕಳೆದುಹೋಗಿದೆ ಅನ್ನೋದು ಎನ್ನುವುದು ಗೊತ್ತಾಗಿದೆ. ಆದರೆ, ಇಲ್ಲಿರೋ ಟ್ವಿಸ್ಟ್‌ ಏನಂದ್ರೆ, ಈತನ ಕಾರು ಸೇರಿದಂತೆ ಉಳಿದ ವಸ್ತುಗಳನ್ನು ಯಾರೋ ಕದ್ದುಕೊಂಡು ಹೋಗಿಲ್ಲ. ಸ್ವತಃ ಈತನೇ ಕಳ್ಳರ ಕೈಗೆ ಕೊಟ್ಟಿದ್ದಾನೆ..! ಇಲ್ಲಿನ ಗಾಲ್ಫ್‌ ಕೋರ್ಸ್‌ ರಸ್ತೆಯಲ್ಲಿರುವ ಕಂಪನಿಯೊಂದರ ಉದ್ಯೋಗಿಯಾಗಿರುವ ಅಮಿತ್‌ ಪ್ರಕಾಶ್‌ಗೆ ಎಣ್ಣೆ ಕುಡಿಯಬೇಕು ಎಂದು ಮನಸ್ಸಾಗಿದೆ. ಕಾರಿನಲ್ಲಿ ಕುಳಿತು ಎಣ್ಣೆ ಹೊಡಿಯೋಕೆ ಒಬ್ಬನೇ ಅಂದುಕೊಂಡು ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ಮದ್ಯದ ಆಫರ್‌ ನೀಡಿದ್ದಾನೆ. ಆ ನಂತರದ ನಡೆದ ಘಟನೆಗಳಲ್ಲಿ ದೆಹಲಿಯ ಸುಭಾಷ್‌ ಚೌಕ್‌ ಮೆಟ್ರೋಗೆ ಸ್ವತಃ ಈತನೇ ಡ್ರಾಪ್‌ ಪಡೆದುಕೊಂಡಿದ್ದಾನೆ. ಇನ್ನು ಅಪರಿಚಿತ ವ್ಯಕ್ತಿ ಕಾರನ್ನು ಓಡಿಸಿಕೊಂಡು ಹೋಗಿದ್ದಾನೆ. ಮನೆಗೆ ಹೋದ ನಂತರ ತಾನು ಡ್ರಾಪ್‌ ತೆಗೆದುಕೊಂಡಿದ್ದು ತನ್ನದೇ ಕಾರ್‌ನಲ್ಲಿ ಎನ್ನುವುದು ಅರಿವಾದಾಗ, ಕಾರಿನ ಜೊತೆ ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌ ಹಾಗೂ 18 ಸಾವಿರ ರೂಪಾಯಿ ಹಣ ಕೂಡ ಹೋಗಿದೆ ಎನ್ನುವುದು ಗೊತ್ತಾಗಿದೆ.

ಮೆಟ್ರೋ ಸ್ಟೇಷನ್‌ಗೆ ಡ್ರಾಪ್‌ ತೆಗೆದುಕೊಂಡು ಮನೆ ಸೇರಿದ್ದ ಅಮಿತ್‌ ಪ್ರಕಾಶ್‌ಗೆ ಮರುದಿನ ಹ್ಯಾಂಗ್ಓವರ್‌ ಇಳಿಯವವರೆಗೂ ಶುಕ್ರವಾರ ರಾತ್ರಿ ಏನಾಗಿದೆ ಅನ್ನೋದೇ ಗೊತ್ತಾಗಿಲ್ಲ. ಒಮ್ಮೆ ಇದೆಲ್ಲ ತಿಳಿದ ಬಳಿಕ ಸೆಪ್ಟರ್‌ 65 ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾರೆ.

ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್‌ 379ರ ಅನ್ವಯ ಕಳ್ಳತನದ ದೂರು ದಾಖಲು ಮಾಡಿದ್ದಾರೆ.  ಅಮಿತ್ ಅವರ ದೂರಿನ ಪ್ರಕಾರ, ಕೆಲಸ ಮುಗಿದ ಬಳಿಕ, ಗಾಲ್ಫ್ ಕೋರ್ಸ್ ರಸ್ತೆಯಲ್ಲಿರುವ ಲೇಕ್‌ಫಾರೆಸ್ಟ್ ವೈನ್ ಶಾಪ್‌ನಲ್ಲಿರುವ ಬ್ರಿಂಗ್‌ ಯುವರ್‌ ಓವ್ನ್‌ ಬಾಟಲ್‌ (ಬಿಐಓಬಿ) ಕಿಯೋಸ್ಕ್‌ಗೆ ಭೇಟಿ ನೀಡಿದ್ದರು ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಕುಡಿದ ಮತ್ತಿನಲ್ಲಿ ನಾನು ಒಂದು ವೈನ್‌ ಬಾಟಲ್‌ಗೆ 20 ಸಾವಿರ ರೂಪಾಯಿ ನೀಡಿದ್ದೆ. ಆದರೆ, ಬಾಟಲ್‌ನ ಎಂಆರ್‌ಪಿ 2 ಸಾವಿರ ಆಗಿದ್ದರಿಂದ ಶಾಪ್‌ ಮಾಲೀಕ 18 ಸಾವಿರ ರೂಪಾಯಿಯನ್ನು ನನಗೆ ನಗದು ರೂಪದಲ್ಲಿ ಹಿಂತಿರುಗಿಸಿದ್ದ' ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅದಾದ ಬಳಿಕ ನಾನು ಮತ್ತೆ ನನ್ನ ಕಾರಿಗೆ ಹೋಗಿ ಕುಡಿಯಲು ಆರಂಭ ಮಾಡಿದೆ. ಆಗ ಇದ್ದಕ್ಕಿದ್ದಂತೆ ಅಪರಿಚಿತ ವ್ಯಕ್ತಿಯೊಬ್ಬ ಬಂದು, ನಾನೂ ಕೂಡ ಮದ್ಯ ಸೇವಿಸಲು ನಿಮ್ಮೊಂದಿಗೆ ಕೂರಬಹುದೇ ಎಂದು ಕೇಳಿದ್ದ. ಅದಕ್ಕೆ ಒಪ್ಪಿದ್ದ ನಾನು ಆತನಿಗೂ ಮದ್ಯ ನೀಡಿದ್ದೆ ಎಂದು ಆ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಮದ್ಯ ಸೇವಿಸಿದ ಬಳಿಕ, ಅಪರಿಚಿತ ವ್ಯಕ್ತಿಯೇ ಕನ್ನ ಕಾರ್‌ಅನ್ನು ಚಲಾಯಿಸಿದ್ದ ಹಾಗೂ ನನ್ನನ್ನು ಸುಭಾಷ್‌ ಚೌಕ್‌ನಲ್ಲಿ ಬಿಟ್ಟು ಹೋಗಿದ್ದ. ಅಚ್ಚರಿ ಎನ್ನುವಂತೆ ಮೆಟ್ರೋ ಸ್ಟೇಷನ್‌ಗೆ ತಲುಪಿದ ಬಳಿಕವೂ, ಆತ ಡ್ರಾಪ್‌ ನೀಡಿದ್ದು ತನ್ನದೇ ಕಾರ್‌ ಎನ್ನುವುದು ನನಗೆ ಮರೆತು ಹೋಗಿತ್ತು ಎಂದು ತಿಳಿಸಿದ್ದಾರೆ.

ಸೊಸೆ ತಂದ ಸೌಭಾಗ್ಯ, ಗಂಡನ ಇಡೀ ಕುಟುಂಬಕ್ಕೆ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಎಸ್ಕೇಪ್‌!

ಸುಭಾಷ್‌ ಚೌಕ್‌ಗೆ ಬಂದಾಗ, ಅಪರಿಚಿತ ವ್ಯಕ್ತಿ ನನಗೆ ಕಾರ್‌ನಿಂದ ಇಳಿಯುವಂತೆ ಹೇಳಿದ್ದ, ನಾನು ಇಳಿದ ಬಳಿಕ ಆತ ಕಾರು ಓಡಿಸಿಕೊಂಡು ಹೋದ. ಬಳಿಕ ನಾನು ಆಟೋರಿಕ್ಷಾದಲ್ಲಿ ಹುಡಾ ಸಿಟಿ ಮೆಟ್ರೋ ಸ್ಟೇಷನ್‌ ತಲುಪಿ ಅಲ್ಲಿಂದ ಮನೆಗೆ ಹಿಂತಿರುಗಿದ್ದೆ ಎಂದಿದ್ದಾರೆ. ಆದರೆ, ಅಪರಿಚತ ವ್ಯಕ್ತಿಯ ಬಗ್ಗೆ ನನಗೆ ಯಾವುದೇ ನೆನಪು ಉಳಿದಲ್ಲ ಎಂದು ತಿಳಿಸಿದ್ದಾರೆ.

ಹನಿಮೂನ್‌ ಮೂಡ್‌ನಲ್ಲಿದ್ದ ಹುಡುಗ ರಾತ್ರಿ ಬೆಳಗಾಗುವಷ್ಟರಲ್ಲಿ ಅಣ್ಣನಾಗಿ ಹೋದ!

ಇನ್ನು ಈ ಸುದ್ದಿ ವರದಿಯಾಗುತ್ತಿದ್ದಂತೆ ಟ್ವಿಟರ್‌ನಲ್ಲಿ ಅಮಿತ್‌ ಪ್ರಕಾಶ್‌ ಅವರ ನ್ಯೂಸ್‌ ವೈರಲ್‌ ಆಗಿದೆ. ಇದು ಗೋವಿಂದ ಹಾಗೂ ಕೇದಾರ್‌ ಖಾನ್‌ ಅವರ ಯಾವುದೋ ಹಾಸ್ಯದ ಸೀನ್‌ ರೀತಿ ಕಾಣುತ್ತಿದೆ ಎಂದು ಹೇಳಿದ್ದರೆ, ಮುಂದಿನ ರೋಹಿತ್‌ ಶೆಟ್ಟಿ ಗೋಲ್‌ಮಾಲ್‌ ಚಿತ್ರದ ಸಿರೀಸ್‌ನಲ್ಲಿ ಈ ಸೀಲ್‌ ಇರುವುದು ಗ್ಯಾರಂಟಿ. ಹಾಗೇನಾದರೂ ಇದ್ದರೆ ಈ ಸೀನ್‌ಗೆ ಅಮಿತ್‌ ಪ್ರಕಾಶ್‌ಗೆ ಹಣ ನೀಡಬೇಕು ಎಂದು ಹಾಸ್ಯ ಮಾಡಿದ್ದಾರೆ. ತನಿಖೆಯ ಮೇಲೆ ಮಾಹಿತಿ ನೀಡಿರುವ ಗುರುಗ್ರಾಮ್ ಪೊಲೀಸ್ ವಕ್ತಾರ ಸುಭಾಷ್ ಬೋಕೆನ್, ಘಟನೆಗೆ ಕಾರಣವಾದ ವ್ಯಕ್ತಿಯನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios