ಮಹಿಳೆಯರಂತೆ ಉಚಿತ ಪ್ರಯಾಣ ಬೇಡ, ಬಸ್‌ನಲ್ಲಿ ಮದ್ಯದ ಬಾಟಲಿ ಸಾಗಾಟಕ್ಕೆ ಅವಕಾಶ ಕೊಡಿ
ರಾಜ್ಯದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಮಾಡಲು ಅವಕಾಶವಿದೆ. ಆದರೆ, ನಮಗೆ ಮದ್ಯದ ಬಾಟಲಿಗಳನ್ನಾದರೂ ಸಾಗಾಟಕ್ಕೆ ಅವಕಾಶ ಮಾಡಿಕೊಡಿ.
ಗದಗ (ಜೂ.26): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ಗಳಲ್ಲಿ ಆರ್ಮಿ (ಭಾರತೀಯ ಸೇನಾಪಡೆ) ಲಿಕ್ಕರ್ ಸಾಗಾಟಕ್ಕೆ ಅವಕಾಶ ನೀಡಬೇಕು ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಒತ್ತಾಯಿಸಿದೆ.
ಈ ಕುರಿತು ಗದಗ ಜಿಲ್ಲಾಧಿಕಾರಿಗಳಿಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಮನವಿ ಸಲ್ಲಿಸಿದರು. ದೇಶದಲ್ಲಿ ಸೈನಿಕರಿಗೆ, ಮಾಜಿ ಸೈನಿಕರಿಗೆ ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್ಮೆಂಟ್ ನೀಡುವ ಲಿಕ್ಕರನ್ನ (ಮದ್ಯದ ಬಾಟಲಿ) ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಾಗಾಟ ಮಾಡಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ದೇಶದ ವಿವಿಧ ಕೇಂದ್ರಗಳಲ್ಲಿ ಮಾತ್ರ ರಿಯಾಯಿತಿ ದರದಲ್ಲಿ ಸೈನಿಕರಿಗೆ ಲಿಕ್ಕರ್ ಬಾಟಲ್‌ಗಳನ್ನ ನೀಡಲಾಗುತ್ತಿದೆ. ಹೀಗೆ ನೀಡಲಾದ ಬಾಟಲಿಗಳನ್ನು ಹಿಂದಿನಿಂದಲೂ ಸಾರಿಗೆ ಬಸ್‌ನಲ್ಲೇ ಸಾಗಿಸಲಾಗುತ್ತಿದೆ. ಆದರೆ, ಇತ್ತೀಚೆಗೆ ಕೆಲವು ನಿರ್ವಾಹಕರು ಬಾಟಲ್ ಗಳನ್ನ ಒಯ್ಯಲು ಬಿಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಕನಕಪುರದ ಗಂಡು ಯಾವುದಕ್ಕೂ ಹೆದರಿ ಕೂರಬಾರದು: ಡಿಕೆ ಬ್ರದರ್ಸ್‌ಗೆ ಸಿ.ಟಿ. ರವಿ ಸಲಹೆ
ಸೈನಿಕರು ಕಾನೂನು ಉಲ್ಲಂಘಟನೆ ಮಾಡಿಲ್ಲ: ದೇಶದ ಕಾಶ್ಮೀರ, ಕನ್ಯಾಕುಮಾರಿಯಿಂದ ಆಗಮಿಸುವಾಗಲೂ ಲಿಕ್ಕರ್ ಬಾಟಲ್ ಕ್ಯಾರಿ ಮಾಡಿದ್ದೇವೆ. ಕ್ಯಾಂಟೀನ್ ನಲ್ಲಿ ನೀಡುವ ಅಧಿಕೃತ ಬಿಲ್ ತೆಗೆದುಕೊಂಡು ಬಸ್, ರೈಲು, ವಿಮಾನದಲ್ಲೂ ಪ್ರಯಾಣ ಮಾಡಿದ್ದೇವೆ. ಆದರೆ, ಇತ್ತೀಚೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಿಲಿಟರಿಯ ಮದ್ಯದ ಬಾಟಲ್ ಸಾಗಟಕ್ಕೆ ಅವಕಾಶ ನೀಡುತ್ತಿಲ್ಲ. ಯಾವುದೇ ಸೈನಿಕರು ಕಾನೂನು ಉಲ್ಲಂಘನೆ ಮಾಡಿಲ್ಲ. ಸರ್ಕಾರವೇ ನೀಡುವ ಬಾಟಲಿಗಳನ್ನ ಸರ್ಕಾರಿ ಬಸ್‌ನಲ್ಲಿ ಸಾಗಾಟ ಮಾಡೋದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಸೈನಿಕರ ಆಗ್ರಹ ಮಾಡಿದ್ದಾರೆ.
ಬಸ್‌ನಿಂದ ಸೈನಿಕರ ಕುಟುಂಬವನ್ನು ಕೆಳಗಿಳಿಸಿದ್ದ ಕಂಡಕ್ಟರ್: ಇತ್ತೀಚೆಗೆ ಹುಬ್ಬಳ್ಳಿಯ ಸಿಎಸ್‌ಡಿ ಕ್ಯಾಂಟೀನ್‌ನಲ್ಲಿ ಖರೀದಿ ಮಾಡಿದ ಮಿಲಿಟರಿಯ ಮದ್ಯದ ಬಾಟಲಿಗಳನ್ನು ಹುಬ್ಬಳ್ಳಿಯಿಂದ ಗದಗ ನಗರಕ್ಕೆ ಬಸ್‌ನಲ್ಲಿ ತೆಗೆದುಕೊಂಡು ಬರುವ ವೇಳೆ ಸೈನಿಕರ ಕುಟುಂಬದವರನ್ನ ತಡೆದು ಬ್ಯಾಗ್ ಚೆಕ್ ಮಾಡಿದ್ದರು. ಅಲ್ಲದೇ ಮದ್ಯದ ಬಾಟಲಿ ಸಾಗಾಟಕ್ಕೆ ಅವಕಾಶ ಇಲ್ಲವೆಂದು ಹೇಳಿ ರಸ್ತೆ ಮಧ್ಯದಲ್ಲಿಯೇ ಸೈನಿಕ ಕುಟುಂಬದ ಸದಸ್ಯರನ್ನು ಬಾಟಲಿಗಳ ಸಮೇತವಾಗಿ ಬಸ್‌ನಿಂದ ಕೆಳಗಿಳಿಸಲಾಗಿತ್ತು. ಇದರಿಂದಾಗಿ ಎಲ್ಲ ಸೈನಿಕರು ಒಟ್ಟುಗೂಡಿ ನ್ಯಾಯ ಕೇಳಲು ಬಂದಿದ್ದೇವೆ ಎಂದು ಮಾಜಿ ಸೈನಿಕರು ಪ್ರತಿಭಟನೆಯನ್ನೂ ನಡೆಸಿದರು. ಈಗ ಮನವಿ ಸಲ್ಲಿಸಿ ಮದ್ಯದ ಬಾಟಲಿ ಸಾಗಾಟಕ್ಕೆ ಅವಕಾಶ ಮಾಡಿಕೊಡಿ ಅಂತಾ ಆಗ್ರಹಿಸಿದ್ದಾರೆ.
ಬೆಳಗಾವಿ: ವೈನ್ ಶಾಪ್ ಮಾಲೀಕನ ಬೆವರಿಳಿಸಿ, ಅಂಗಡಿ ಬಂದ್ ಮಾಡಿಸಿದ ನಾರಿಮಣಿಯರು..!
ಸರ್ಕಾರದ ಸುತ್ತೋಲೆ ತಿದ್ದುಪಡಿ ಮಾಡಿ: ಸರ್ಕಾರದ ಸುತ್ತೋಲೆಯ ಅನ್ವಯ ಮದ್ಯಪಾನ ಸಾಗಣೆ ಹಾಗೂ ಮದ್ಯಪಾನ ಮಾಡಿದವರಿಗೆ ಸಾರಿಗೆ ಬಸ್ ನಲ್ಲಿ ಅವಕಾಶ ಇಲ್ಲ ಎಂಬ ನಿಯಮವಿದೆ. ಒಂದು ವೇಳೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮದ್ಯಪಾನ ಸಾಗಾಟ ಮಾಡಿದರೆ ನಿರ್ವಾಹಕನ ಮೇಲೆಯೆ ಪ್ರಕರಣ ದಾಖಲು ಮಾಡಲಾಗುತ್ತದೆ. ಆದ್ದರಿಂದ ಮಾಜಿ ಸೈನಿಕರ ಕುಟುಂಬಗಳಿಗೆ ಮದ್ಯದ ಬಾಟಲಿ ಸಾಗಣೆ ಮಾಡಲು ಅವಕಾಶ ನೀಡುತ್ತಿಲ್ಲ. ಇನ್ನು ಸರ್ಕಾರದ ಕೆಎಸ್‌ಆರ್‌ಟಿಸಿ ನಿಗಮದಲ್ಲಿ ಸೈನಿಕರಿಗೆ ಮದ್ಯದ ಬಾಟಲಿ ರವಾನೆ ಮಾಡಲು ಅವಕಾಶ ನೀಡುವಂತೆ ತಿದ್ದುಪಡಿ ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ