ಕಾಡಾನೆಗಳಿಂದ ಉಪಟಳದಿಂದ ಕಂಗೆಟ್ಟಕೋಕೇರಿ, ಮರಂದೋಡ, ನರಿಯಂದಡ ಹಾಗೂ ಚೇಲಾವರ ಗ್ರಾಮಸ್ಥರು ಜುಲೈ 10ರಂದು ವಿರಾಜಪೇಟೆ- ನಾಪೋಕ್ಲು ಮುಖ್ಯರಸ್ತೆಯ ಚೆಯ್ಯಂಡಾಣೆಯ ಕೂಡು ರಸ್ತೆಯಲ್ಲಿ ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಲಿದ್ದಾರೆ.

ನಾಪೋಕ್ಲು (ಜು.9) : ಕಾಡಾನೆಗಳಿಂದ ಉಪಟಳದಿಂದ ಕಂಗೆಟ್ಟಕೋಕೇರಿ, ಮರಂದೋಡ, ನರಿಯಂದಡ ಹಾಗೂ ಚೇಲಾವರ ಗ್ರಾಮಸ್ಥರು ಜುಲೈ 10ರಂದು ವಿರಾಜಪೇಟೆ- ನಾಪೋಕ್ಲು ಮುಖ್ಯರಸ್ತೆಯ ಚೆಯ್ಯಂಡಾಣೆಯ ಕೂಡು ರಸ್ತೆಯಲ್ಲಿ ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಲಿದ್ದಾರೆ.

ಚೆಯ್ಯಂಡಾಣೆ ನರಿಯಂಡಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿ ಕಾಡಾನೆಗಳ ಉಪಟಳದಿಂದ ಗ್ರಾಮಸ್ಥರು ನಲುಗುವಂತಾಗಿದೆ. ಕಳೆದ ಕೆಲವು ದಿನಗಳಿಂದ ಗ್ರಾಮದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ತೋಟಗಳಿಗೆ ನುಗ್ಗಿ ಕಾಫಿ, ಅಡಕೆ, ತೆಂಗು, ಕರಿಮೆಣಸು, ಬಾಳೆ ಸೇರಿದಂತೆ ಕೃಷಿ ಉತ್ಪನ್ನ ಗಿಡಗಳನ್ನು ಧ್ವಂಸ ಪಡಿಸುತ್ತಿವೆ ಎಂದು ಗ್ರಾಮಸ್ಥರು ಅವಲತ್ತುಕೊಂಡಿದ್ದಾರೆ.

ಮೂಡುಬಿದಿರೆ: ಅಪಾಯಕಾರಿ ಕಾಲು ಸಂಕದಲ್ಲಿ ಕಾದಿದೆ ಅಪಾಯ!

ಇತ್ತೀಚೆಗೆ ಹಲವು ತೋಟಗಳಿಗೆ ನುಗ್ಗಿರುವ ಕಾಡಾನೆಗಳು ಬಾಳೆ ಗಿಡಗಳನ್ನು ಧ್ವಂಸಮಾಡಿ ರಸ್ತೆಗಳಲ್ಲಿ ಎಳೆದೊಯ್ದಿತ್ತು. ಭತ್ತದ ಬಿತ್ತನೆಗಾಗಿ ಗದ್ದೆಗಳನ್ನು ಸಿದ್ಧಪಡಿಸಲಾಗಿದ್ದು ಬಿತ್ತನೆಗೂ ಮುನ್ನವೇ ಆನೆಗಳು ಗದ್ದೆಗಳಲ್ಲಿ ಅಡ್ಡಾಡಿವೆ. ಬಿತ್ತನೆ ಮುಗಿದ ನಂತರ ಮತ್ತೆ ಕಾಡಾನೆಗಳು ಪೈರುಗಳನ್ನು ಧ್ವಂಸ ಮಾಡುವ ಆತಂಕವಿದ್ದು, ಭತ್ತದ ಕೃಷಿ ಮಾಡುವುದು ಅಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಯಾರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಸಮಾಧಾನ ವ್ಯಕ್ತಪಡಿಸಿ ರಸ್ತೆ ತಡೆದು ಪ್ರತಿಭಟನೆಗೆ ಮುಂದಾಗಿದ್ದಾರೆ.

ಕೋಕೇರಿ ಗ್ರಾಮದ ಪರವಾಗಿ ಮಚ್ಚಂಡ ರಂಜು, ಮರಂದೋಡ ಗ್ರಾಮದ ಪರವಾಗಿ ಚೋಯಮಾಡಂಡ ಹರೀಶ್‌ ಮೊಣ್ಣಪ್ಪ, ನರಿಯಂದಡ ಗ್ರಾಮದ ಪರವಾಗಿ ಪೊಕ್ಕುಳಂಡ್ರಾ ದಿವ್ಯ ಧನೋಜ್‌ ಹಾಗೂ ಚೇಲಾವರ ಗ್ರಾಮದ ಪರವಾಗಿ ಮುಂಡ್ಯೋಳಂಡ ಪ್ರವೀಣ್‌ ಪ್ರತಿಭಟನೆಯ ನೇತೃತ್ವ ವಹಿಸಲಿರುವುದಾಗಿ ಚೋಯಮಾಡಂಡ ಹರೀಶ್‌ ಮೊಣ್ಣಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎನ್‌.ಆರ್‌.ಪುರ ಸಮೀಪ ಓಡಾಡುತ್ತಿರುವ 15 ಕಾಡಾನೆಗಳ ಹಿಂಡು; ತೋಟಗಾರಿಕೆ ಬೆಳೆ ನಾಶ!