Asianet Suvarna News Asianet Suvarna News

ಮೂಡುಬಿದಿರೆ: ಅಪಾಯಕಾರಿ ಕಾಲು ಸಂಕದಲ್ಲಿ ಕಾದಿದೆ ಅಪಾಯ!

ಅಡಕೆ ಮರ ಬಳಸಿ ನಿರ್ಮಿಸಿರುವ ಅಪಾಯಕಾರಿ ಕಾಲು ಸಂಕದಲ್ಲಿ ಅಂಗನವಾಡಿ, ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳು ಸಹಿತ ಸಾರ್ವಜನಿಕರು ಜೀವ ಭಯದಿಂದ ಸಂಚರಿಸಬೇಕಾದ ಪರಿಸ್ಥಿತಿ ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾ.ಪಂ ವ್ಯಾಪ್ತಿಯ ತೋಡಾರು ಗ್ರಾಮದ ಪುದ್ದರಕೋಡಿ ಜಯ ಶೆಟ್ಟಿಅವರ ಮನೆ ಬಳಿ ಎದುರಾಗಿದೆ.

Karnataka monsoon Iruvailu village foot traffic is dangerous warning at mudubidire rav
Author
First Published Jul 9, 2023, 1:01 PM IST

ಮೂಡುಬಿದಿರೆ (ಜು.9) : ಅಡಕೆ ಮರ ಬಳಸಿ ನಿರ್ಮಿಸಿರುವ ಅಪಾಯಕಾರಿ ಕಾಲು ಸಂಕದಲ್ಲಿ ಅಂಗನವಾಡಿ, ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳು ಸಹಿತ ಸಾರ್ವಜನಿಕರು ಜೀವ ಭಯದಿಂದ ಸಂಚರಿಸಬೇಕಾದ ಪರಿಸ್ಥಿತಿ ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾ.ಪಂ ವ್ಯಾಪ್ತಿಯ ತೋಡಾರು ಗ್ರಾಮದ ಪುದ್ದರಕೋಡಿ ಜಯ ಶೆಟ್ಟಿಅವರ ಮನೆ ಬಳಿ ಎದುರಾಗಿದೆ.

ಹಲವು ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಿದ್ದ ಕಾಲು ಸಂಕ ಕಳೆದ ವರ್ಷ ಮಳೆಯ ರಭಸಕ್ಕೆ ಕುಸಿದು ಬಿದ್ದಿತ್ತು. ಆಗ ಅಡಕೆ ಮರಗಳನ್ನು ಬಳಸಿ ತಾತ್ಕಾಲಿಕ ಕಾಲು ಸಂಕವನ್ನು ನಿರ್ಮಿಸಲಾಗಿತ್ತು. ಪುದ್ದರಕೋಡಿಯಿಂದ ಬಾಲ್ದೊಟ್ಟು -ಕೊನ್ನೆಪದವು- ಕಲಸಂಕಕ್ಕೆ ಹೋಗುವ ಈ ದಾರಿಯಲ್ಲಿ ತೋಡಾರು ಪರಿಸರದ ಸುಮಾರು 100 ಜನರು ಪ್ರತಿದಿನ ಈ ಕಾಲು ಸಂಕವನ್ನೇ ಬಳಸಿ ತಮ್ಮ ದಿನನಿತ್ಯದ ಕೆಲಸಕ್ಕಾಗಿ ನಡೆದಾಡುತ್ತಿದ್ದಾರೆ. ಅಲ್ಲದೆ ಹಳ್ಳಿ ಪ್ರದೇಶದ ತೋಡಾರು ಶಾಲೆ, ಅಂಗನವಾಡಿ ಕೇಂದ್ರ, ಪ್ರಾಥಮಿಕ ಶಾಲೆಗೆ ಸುಮಾರು 15ರಷ್ಟುಪುಟ್ಟಪುಟ್ಟಮಕ್ಕಳು ಈ ಕಾಲುಸಂಕದಲ್ಲಿಯೇ ನಡೆದುಕೊಂಡು ಹೋಗಬೇಕಾಗಿದೆ.

ಸ್ವಾತಂತ್ರ್ಯ ಬಂದು 75 ವರ್ಷವಾದರೂ ರಸ್ತೆ ಕಾಣದ ಗ್ರಾಮಗಳು: ದೋಣಿಯೇ ದೇವರು- ಕಾಲುಸಂಕವೇ ದೈವ

ಮಕ್ಕಳನ್ನು ಒಬ್ಬೊಬ್ಬರನ್ನೇ ಕಳುಹಿಸಿದರೆ ಏನಾದರೂ ಅನಾಹುತವಾದೀತು ಎನ್ನುವ ಹೆದರಿಕೆಯಿಂದ ಹೆತ್ತವರೇ ಮಕ್ಕಳನ್ನು ಪ್ರತಿ ದಿನ ಶಾಲೆಗೆ ಕರೆದೊಯ್ದು ನಂತರ ತಾವೇ ಕರೆದು ತರುವಂತಹ ಸಾಹಸ ಮಾಡುತ್ತಿದ್ದಾರೆ. ಈ ಕುರಿತು ಗ್ರಾಮಸ್ಥರು ಪಂಚಾಯಿತಿ ಗಮನ ಸೆಳೆದರೂ ಪರಿಸ್ಥಿತಿ ಬದಲಾಗಿಲ್ಲ.

ಕಾಲುಸಂಕಕ್ಕೆ ಅನುದಾನ ಇಡಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೇಳಿದರೂ ಕಾಲುಸಂಕ ನಿರ್ಮಾಣ ಇನ್ನೂ ಆಗಿಲ್ಲ ಎಂದು ಗ್ರಾಮಸ್ಥ ಸಂತೋಷ್‌ ಜೈನ್‌ ತಿಳಿಸಿದ್ದಾರೆ.

ಸರ್ಕಾರ, ಜನಪ್ರತಿನಿಧಿಗಳಿಗೆ ಸೆಡ್ಡು ಹೊಡೆದು ನದಿಗೆ ತಾತ್ಕಲಿಕ ಬ್ರಿಡ್ಜ್ ನಿರ್ಮಾಣ ಮಾಡಿದ ಸ್ಥಳೀಯರು

Follow Us:
Download App:
  • android
  • ios