Asianet Suvarna News Asianet Suvarna News

ವಿಚಾರವಾದಿ Prof K S Bhagawan ಓಡಿಸಿಕೊಂಡು ಬಂದ ಕಾಡಾನೆ!

ಸಫಾರಿ ವೇಳೆ ಕಾಡಾನೆ ದಾಳಿಯಿಂದ ವಿಚಾರವಾದಿ ಕೆ ಎಸ್ ಭಗವಾನ್   ಸ್ವಲ್ಪ ದರದಲ್ಲೇ ಬಚಾವ್ ಆಗಿರುವ ಘಟನೆ ನಡೆದಿದೆ.

Wild elephant chases rationalist Prof K S Bhagawan  during a safari at chamarajanagar brt tiger reserve forest gow
Author
First Published Jun 4, 2023, 5:55 PM IST

ಚಾಮರಾಜನಗರ (ಜೂ.4): ಸಫಾರಿ ವೇಳೆ ಕಾಡಾನೆ ದಾಳಿಯಿಂದ ವಿಚಾರವಾದಿ ಕೆ ಎಸ್ ಭಗವಾನ್ ( rationalist Prof K S Bhagawan) ಸ್ವಲ್ಪ ದರದಲ್ಲೇ ಬಚಾವ್ ಆಗಿರುವ ಘಟನೆ ನಡೆದಿದೆ. ಚಾಮರಾಜನಗರ ತಾಲೂಕಿನ ಕೆ.ಗುಡಿ ಬಳಿಯ ಸಫಾರಿ ವೇಳೆ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಎಲ್ಲರೂ ಕೂಡ ಅಪಾಯದಿಂದ ಪಾರಾಗಿದ್ದಾರೆ.  ವಿಚಾರವಾದಿ ಭಗವಾನ್ ಸೇರಿ ಆಪ್ತರು ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತಾರಣ್ಯದ ಬಿಆರ್ ಟಿ  ಸಫಾರಿ ಜೋನ್ ಬಳಿ ಸಫಾರಿಗೆ ತೆರಳಿದ್ದ ವೇಳೆ ಆನೆಗಳ ಹಿಂಡಿನ ದರ್ಶನವಾಗಿದೆ. ಮರಿ ಇದ್ದಿದ್ದರಿಂದ ಕಾಡಾನೆ ಸಫಾರಿ ಜೀಪ್ ಅನ್ನು ಅಟ್ಟಿಸಿಕೊಂಡು ಬಂದಿದೆ. ಈ ಜೀಪ್ ನಲ್ಲಿ ಭಗವಾನ್ ಸೇರಿ 8 ಮಂದಿ ಇದ್ದರು. ಆನೆ ಅಟ್ಟಿಸಿಕೊಂಡು ಬರುತ್ತಿರುವುದು ತಿಳಿದ ತಕ್ಷಣವೇ  ಸಫಾರಿ ಡ್ರೈವರ್ ಜೀಪ್ ಅನ್ನು ಹಿಂದಕ್ಕೆ ತೆಗೆದಿದ್ದಾನೆ. ಅದೃಷ್ಟವಶಾತ್ ಎಲ್ಲರೂ ಕೂಡ ಅಪಾಯದಿಂದ ಪಾರಾಗಿದ್ದು, ಆನಂತರ ಆನೆಯು ತನ್ನ ಪಾಡಿಗೆ ತಾನು ಶಾಂತಗೊಂಡು ಮುಂದಕ್ಕೆ ಹೋಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Bengaluru: ಪತಿ ಕಣ್ಣೆದುರೇ ಪತ್ನಿಯನ್ನು ಬಲಿ ತೆಗೆದುಕೊಂಡ ಕೆಎಸ್‌ಆರ್‌ಟಿಸಿ ಬಸ್!

ಕೃಷಿ ಹೊಂಡಕ್ಕೆ ಬಿದ್ದಿದ್ದ ಕಾಡಾನೆ ರಕ್ಷಣೆ
ಮಡಿಕೇರಿ: ಕೃಷಿ ಹೊಂಡಕ್ಕೆ ಬಿದ್ದು ಪರದಾಡುತ್ತಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ಕೊಡಗಿನ ವಿರಾಜಪೇಟೆ ತಾಲೂಕಿನ ಕರಡ ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ಕಾಡಾನೆಯೊಂದು ಬಿದಿತ್ತು. ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನುರಕ್ಷಿಸಿದ್ದಾರೆ.

ಕಾಡಾನೆ ಕೃಷಿ ಹೊಂಡದಿಂದ ಮೇಲೆ ಬರುತ್ತಿದ್ದಂತೆ ಅರಣ್ಯ ಇಲಾಖೆ ವಾಹನದ ಮೇಲೆ ದಾಳಿಗೆ ಮಾಡಲು ಯತ್ನಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯರು ಕೂಗಾಡಿದ ಬಳಿಕ ಅಲ್ಲಿಂದ ತೆರಳಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ನೆಹರು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ಚಕ್ರತೀರ್ಥ ಸಿದ್ಧಪಡಿಸಿದ್ದ ಪಠ್ಯಕ್ಕೆ ಕೊಕ್, ಬರಗೂರು ಸಮಿತಿ ಪಠ್ಯ ಮರು ಮುದ್ರಣಕ್ಕೆ ಒತ್ತಡ

ಕಾವಲುಗಾರ ಆನೆಯ ದಾಳಿಗೆ ಬಲಿ
ಚನ್ನಪಟ್ಟಣ: ತೋಟ ಕಾಯುತ್ತಿದ್ದ ಕಾವಲುಗಾರನೊಬ್ಬ ಆನೆ ದಾಳಿಗೆ ಕಬ್ಬಾಳುವಿನಲ್ಲಿ ಬಲಿಯಾದ ಘಟನೆ ಮಾಸುವ ಮುನ್ನವೇ ಕಾಡಾನೆ ದಾಳಿಗೆ ಸಿಲುಕಿ ಮಾವಿನ ತೋಟದಲ್ಲಿ ಕಾವಲು ಕಾಯುತ್ತಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ವಿರೂಪಸಂದ್ರ ಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದಿದೆ. ವೀರಭದ್ರಯ್ಯ (33) ಕಾಡಾನೆ ದಾಳಿಯಿಂದ ಮೃತಪಟ್ಟವರು. ಚನ್ನಪಟ್ಟಣದ ವಿರೂಪಸಂದ್ರದ ಮಾವಿನ ತೋಟದಲ್ಲಿ ಕಾವಲು ಕಾಯುವ ಕೆಲಸ ನಿರ್ವಹಿಸುತ್ತಿದ್ದ ವೀರಭದ್ರಯ್ಯ ಅವರು ಮುಂಜಾನೆ ಮೂತ್ರ ವಿಸರ್ಜನೆಗೆಂದು ತೋಟದಲ್ಲಿನ ಬೇಲಿ ಕಡೆ ಹೋಗುವಾಗ ಅಲ್ಲಿದ್ದ ಆನೆ ಏಕಾಏಕಿ ದಾಳಿ ನಡೆಸಿದೆ. ಮೂತ್ರವಿಸರ್ಜನೆಗೆಂದು ಬೇಲಿಪಕ್ಕ ಹೋಗಿದ್ದಾಗ ಮರೆಯಲ್ಲಿ ನಿಂತಿದ್ದ ಕಾಡಾನೆ ಏಕಾಏಕಿ ವೀರಭದ್ರಯ್ಯ ಮೇಲೆ ದಾಳಿ ನಡೆಸಿದೆ. ನಂತರ ಅವರ ತಲೆಯನ್ನು ತುಳಿದು ಅಪ್ಪಚ್ಚಿ ಮಾಡಿದೆ. 4 ದಿನಗಳ ಹಿಂದಷ್ಟೇ ಸಾತನೂರಿನ ಕಬ್ಬಾಳಿನಲ್ಲಿ ಕಾಡಾನೆ ದಾಳಿಗೆ ಮಾವಿನ ತೋಟ ಕಾಯುತ್ತಿದ್ದ ಕಾವಲುಗಾರನೊಬ್ಬ ಮೃತಪಟ್ಟಿದ್ದ.

 

Follow Us:
Download App:
  • android
  • ios