ಬೆಂಗಳೂರಿನ ಮೆಜೆಸ್ಟಿಕ್ ನ ಸಂಗೊಳ್ಳಿ ರಾಯಣ್ಣ ಬ್ರಿಡ್ಜ್ ಬಳಿ KSRTC ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆ.

ಬೆಂಗಳೂರು (ಜೂ.4): ಬೆಂಗಳೂರಿನ ಮೆಜೆಸ್ಟಿಕ್ ನ ಸಂಗೊಳ್ಳಿ ರಾಯಣ್ಣ ಬ್ರಿಡ್ಜ್ ಬಳಿ KSRTC ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆ. ಲತಾ ಎಂಬುವವರು ಮೃತಪಟ್ಟ ದುದೈವಿಯಾಗಿದ್ದಾರೆ. ಅಪಘಾತದ ಬಸ್ ಚಿಕ್ಕಬಳ್ಳಾಪುರದ ಚಿಂತಾಮಣಿ ಡಿಪೋಗೆ ಸೇರಿದ್ದು ಎಂದು ತಿಳಿದುಬಂದಿದ್ದು,ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಿಳೆಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಅಪಘಾತದ ವೇಳೆ ಮೃತ ಲತಾ ತಲೆಗೆ ಗಂಭೀರ ಗಾಯವಾಗಿದೆ. ಉಪ್ಪಾರಪೇಟೆ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಬೆಂಗಳೂರಿನ ಮೆಜೆಸ್ಟಿಕ್ ನಿಂದ ಚಿಂತಾಮಣಿ ಕಡೆ ತೆರಳ್ತಿತ್ತು. ಮೃತ ಮಹಿಳೆ, ಮತ್ತು ಪತಿ ಒಂದೇ ಬೈಕ್ ನಲ್ಲಿ ಬಟ್ಟೆ ಅಂಗಡಿಗೆ ಶಾಪಿಂಗ್ ಗಾಗಿ ತೆರಳುತ್ತಿದ್ದರು. ಮತ್ತೊಂದು ಬೈಕ್ ನಲ್ಲಿ ಅವರ ಪುತ್ರಿ ಕೂಡ ತೆರಳುತ್ತಿದ್ದರು. ಈ ವೇಳೆ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಇಳಿಯುವ ವೇಳೆ ವೇಗವಾಗಿ ಬಸ್ ಬಲಕ್ಕೆ ಬಂದಿದೆ. ಬಸ್ ಹಿಂಬದಿ ದ್ವಿಚಕ್ರ ವಾಹನಕ್ಕೆ ಟಚ್ ಆಗಿ ಇಬ್ಬರು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಪತಿಯ ಜೊತೆಗೆ ಹಿಂಬದಿ ಕುಳಿತಿದ್ದ ಲತಾ ಮೇಲೆ ಬಸ್ ಹರಿದಿದೆ. ಈ ವೇಳೆ ಸ್ಥಳದಲ್ಲೇ ಲತಾ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Gadag: ನೀರು ತರಲು ಹೊರಟಿದ್ದ ವ್ಯಕ್ತಿ ಬಸ್ ಚಕ್ರದಡಿ ಸಿಲುಕಿ ದಾರುಣ ಸಾವು!

ಅಪಘಾತ: ಬೈಕ್‌ ಹಿಂಬದಿ ಸವಾರ ಸಾವು
ಕಲಾದಗಿ:ಬೆಳಗಾವಿ ರಾಯಚೂರು ರಾಜ್ಯ ಹೆದ್ದಾರಿ ರಸ್ತೆ ಮುರುನಾಳ ಆರ್‌ಸಿ ಬಳಿ ರಸ್ತೆಯಲ್ಲಿ ಬೈಕ್‌ಗೆ ಟಾಟಾ ಏಸ್‌ ಡಿಕ್ಕಿ ಹೊಡೆದು ಬೈಕ್‌ನ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಮುಧೋಳ ತಾಲೂಕಿನ ಚತ್ರಭಾನುಕೋಟಿಯ ಮುಂಜುನಾಥ ಕಾಳವ್ವ ಮಾದರ (26) ಮೃತ ವ್ಯಕ್ತಿ. ಚತ್ರಭಾನುಕೋಟೆಯಿಂದ ಬಾಗಲಕೋಟೆ ಕಡೆಗೆ ತೆರಳುತ್ತಿದ್ದ ವೇಳೆ ರಸ್ತೆ ಬದಿ ನಿಲ್ಲಿಸಿದ ಬೈಕ್‌ಗೆ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ ಹಿಂಬದಿ ಕುಳಿತ್ತಿದ್ದ ವ್ಯಕ್ತಿ ಗಂಭಿರ ಗಾಯಗೊಂಡು ಮೃತಪಟ್ಟಿದ್ದಾನೆ. ಸ್ಥಳಕ್ಕೆ ಕಲಾದಗಿ ಪೊಲೀಸ್‌ ಠಾಣೆ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶ್ರೀಲಂಕಾದಿಂದ ಭಾರತಕ್ಕೆ ಅಕ್ರಮ ಸಾಗಣೆ: ಸುಮಾರು 20 ಕೋಟಿ ಮೌಲ್ಯದ 32 ಕೆಜಿ ಚಿನ್ನ ವಶಕ್ಕೆ