Ramanagara; ಕಾಡಾನೆ ದಾಳಿಗೆ ರೈತ ಮಹಿಳೆ ಸಾವು

ಆ ಕುಟುಂಬ ಹೈನುಗಾರಿಕೆ ನಂಬಿಕೊಂಡು ಜೀವನ ನಡೆಸುತ್ತಿತ್ತು, ಎಂದಿನಂತೆ ಬೆಳ್ಳಂ ಬೆಳಗ್ಗೆ ಎದ್ದು ಹಾಲು ಕರೆಯಲು ಹೋಗಿದ್ದ ಮಹಿಳೆ ಹೊಲದಲ್ಲೇ ಶವವಾಗಿದ್ದಳು. ಇದನ್ನು ಕಂಡ ಗ್ರಾಮದ ಜನರು ಒಂದು ಕ್ಷಣ ದಿಗ್ಬಾಂತ್ರರಾಗಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.

wild elephant attack in Ramanagara gow

ರಾಮನಗರ (ಆ.9): ಆ ಕುಟುಂಬ ಹೈನುಗಾರಿಕೆ ನಂಬಿಕೊಂಡು ಜೀವನ ನಡೆಸುತ್ತಿತ್ತು, ಎಂದಿನಂತೆ ಬೆಳ್ಳಂ ಬೆಳಗ್ಗೆ ಎದ್ದು ಹಾಲು ಕರೆಯಲು ಹೋಗಿದ್ದ ಮಹಿಳೆ ಹೊಲದಲ್ಲೇ ಶವವಾಗಿದ್ದಳು. ಇದನ್ನು ಕಂಡ ಗ್ರಾಮದ ಜನರು ಒಂದು ಕ್ಷಣ ದಿಗ್ಬಾಂತ್ರರಾಗಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಇವತ್ತು ಬೆಳ್ಳಂಬೆಳಗ್ಗೆ ಕಾಡಾನೆಯೊಂದು ಅಟ್ಟಹಾಸ ಮೆರೆದಿದ್ದು, ಒಂಟಿ ಸಲಗದ ಕೌರ್ಯಕ್ಕೆ ರೈತ ಮಹಿಳೆಯೊಬ್ಬಳು ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚೆನ್ನಿಗನಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಿದ್ದಾಪ್ಪಜಿ ಎಂಬುವವರ ಪತ್ನಿ, ರೈತ ಮಹಿಳೆ ಚನ್ನಮ್ಮ(55) ಮೃತ ದುರ್ದೈವಿ. ಅಂದಹಾಗೆ ಇವತ್ತು ಬೆಳಗ್ಗೆ ಆರು ಗಂಟೆ ಸುಮಾರಿಗೆ ತಮ್ಮ ಜಮೀನು ಕೆಲಸಕ್ಕೆಂದು ಹೋಗಿದ್ದಾರೆ. ಈ ವೇಳೆ ಆಹಾರ ಹರಿಸಿ ಬಂದಿದ್ದ ಕಾಡಾನೆ ಏಕಾಏಕಿ ಚನ್ನಮ್ಮ ಅವರ ಮೇಲೆ ದಾಳಿ ನಡೆಸಿದೆ. ಕಾಡಾನೆ ದಾಳಿಗೆ ಸಿಲುಕಿ ಚನ್ನಮ್ಮ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಅಂದಹಾಗೆ ಚನ್ನಪಟ್ಟಣ ತಾಲೂಕಿನ ಚೆನ್ನಿಗನಹೊಸಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಕಳೆದ ಎರಡು ಮೂರು ವರ್ಷಗಳಿಂದ ಇದೆ. ಹಿಂಡು ಹಿಂಡಾಗಿ ಬರುವ ಕಾಡಾನೆಗಳು ಇಷ್ಟು ದಿನ ಜಮೀನಿನಲ್ಲಿ ರೈತರು ಬೆಳೆದಿದ್ದ ಬೆಳೆಗಳನ್ನ ನಾಶಪಡಿಸುತ್ತಿದ್ದವು. ಆದರೆ ಇದೀಗ ಮನುಷ್ಯರ ಮೇಲೆಯೆ ದಾಳಿ ನಡೆಸುತ್ತಿವೆ. 

ಸಾಕಷ್ಟು ಬಾರಿ ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕುವಂತೆ ರೈತರು ಮನವಿ ಮಾಡಿದ್ರು, ಅರಣ್ಯ ಇಲಾಖೆ ಅಧಿಕಾರಿಗಳು ಖ್ಯಾರೆ ಎಂದಿರಲಿಲ್ಲ. ಹೀಗಾಗಿ ಇವತ್ತು ಅಧಿಕಾರಿಗಳು ಸ್ಥಳಕ್ಕೆ ಬಂದು ಭರವಸೆ ನೀಡುವವರೆಗೂ ಮೃತದೇಹವನ್ನ ತೆಗೆಯುವುದಿಲ್ಲ ಎಂದು ಮೃತಳ ಕುಟುಂಬಸ್ಥರು, ಗ್ರಾಮಸ್ಥರು ಪಟ್ಟು ಹಿಡಿದ್ದರು. ಹೀಗಾಗಿ ಘಟನಾ ಸ್ಥಳಕ್ಕೆ ಮಾಜಿ ಸಚಿವ ಸಿ ಪಿ ಯೋಗೇಶ್ವರ್, ಜಿಲ್ಲಾಧಿಕಾರಿ ಡಾ ಅವಿನಾಶ್, ಎಸ್ ಪಿ ಸಂತೋಷ್ ಬಾಬು ಸಹಾ ಬಂದು ಕುಟುಂಬಸ್ಥರಿಗೆ ಸಾಂತ್ವನಾ ಹೇಳಿ, ಕಾಡಾನೆಗಳ ಹಾವಳಿಗೆ ಕೂಡಲೇ ಕಡಿವಾಣ ಹಾಕುವ ಭರವಸೆ ನೀಡಿದ್ರು.

ಒಟ್ಟಾರೆ ಬೊಂಬೆನಗರಿ ಚನ್ನಪಟ್ಟಣ ತಾಲೂಕಿನಲ್ಲಿ ಇತ್ತೀಚಿಗೆ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಅಮಾಯಕರು ಪ್ರಾಣ  ಬಿಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕಿದೆ.

ಅರಣ್ಯಾಧಿಕಾರಿಗಳಿಗೆ ತರಾಟೆ: ಆನೆ ದಾಳಿಗೆ ತಾಲೂಕಿನ ಚೆನ್ನಿಗನಹೊಸಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರು ಮೃತರಾದ ವಿಷಯ ತಿಳಿದ ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಗ್ರಾಮಕ್ಕೆ ಭೇಟಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಈ ವೇಳೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಕರೆ ಮಾಡಿ ಮಾತನಾಡಿ, ಗ್ರಾಮಸ್ಥರಿಗೆ ಸಮಸ್ಯೆಯಾಗಿರುವ ಆನೆಗಳನ್ನು ಶೀಘ್ರ ಸ್ಥಳಾಂತರಿಸುವಂತೆ ಒತ್ತಾಯಿಸಿದರು.

ಅತ್ಯಾಚಾರ ಆರೋಪ: ಮಧ್ಯ ಪ್ರದೇಶದಲ್ಲಿ ಸ್ವಯಂಘೋಷಿತ ದೇವಮಾನವ ಬಂಧನ

ಬ್ಯಾರಿಕೇಡ್‌ ನಿರ್ಮಾಣ ಮತ್ತು ಆನೆಗಳ ಸ್ಥಳಾಂತರ ಕಾರ್ಯ ಆರಂಭದ ಕುರಿತು ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಆನೆ ದಾಳಿಯಾದಾಗಲೆಲ್ಲ ಫೆನ್ಸಿಂಗ್‌ ನಿರ್ಮಾಣ ಮತ್ತು ಸ್ಥಳಾಂತರದ ಕುರಿತು ಮಾತುಗಳನ್ನು ಹೇಳಲಾಗುತ್ತಿದೆಯೇ ಹೊರತು ಯಾವುದೇ ಪ್ರಗತಿ ಅಗಿಲ್ಲ. ಸುಮ್ಮನ್ನೆ ಕಣ್ಣೊರೆಸುವ ಮಾತು ಆಡುವುದನ್ನು ಬಿಟ್ಟು ಕಾರ್ಯಾಚರಣೆ ನಡೆಸಿ ಎಂದು ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

MYSURU; ಮನನೊಂದಿದ್ದ ಮಗನಿಂದ ಅಪ್ಪನ ಕೊಲೆ

ಬ್ಯಾರಿಕೇಡ್‌ ನಿರ್ಮಾಣ ಕಾರ್ಯ ಎಷ್ಟುಪ್ರಗತಿಯಲ್ಲಿದೆ, ಏಕೆ ಮುಂದುವರಿಸುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಸಮಸ್ಯೆ ಇರುವ ಮುನ್ನೂರು ನಾನೂರು ಕಿ.ಮಿ ಜಾಗವನ್ನು ಬಿಟ್ಟು ಬೇರೆ ಕಡೆ ಬ್ಯಾರಿಕೇಡ್‌ ನಿರ್ಮಾಣ ಕಾರ್ಯವನ್ನು ಆದಷ್ಟುಬೇಗ ಮುಗಿಸುವಂತೆ ಸೂಚನೆ ನೀಡಿದರು. ಇದರ ಜತೆಗೆ ಆನೆಗಳ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಶೀಘ್ರ ಆರಂಭಿಸುವಂತೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವಿನಾಶ್‌ ಮೆನನ್‌ ರಾಜೇಂದ್ರನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂತೋಷ್‌ ಬಾಬು, ತಹಸೀಲ್ದಾರ್‌ ಸುದರ್ಶನ್‌ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು.

Latest Videos
Follow Us:
Download App:
  • android
  • ios