ಈ ಬಾರಿ ಕಾಂಗ್ರೆಸ್‌ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಹಾಗಾಗಿ ಜೆಡಿಎಸ್‌ಗೆ ವೋಟು ಹಾಕಬೇಡಿ, ಜಿ.ಟಿ. ದೇವೇಗೌಡನನ್ನು ಸೋಲಿಸಿ ಮಾವಿನಹಳ್ಳಿ ಸಿದ್ದೇಗೌಡನನ್ನು ಗೆಲ್ಲಿಸಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಜಯಪುರ : ಈ ಬಾರಿ ಕಾಂಗ್ರೆಸ್‌ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಹಾಗಾಗಿ ಜೆಡಿಎಸ್‌ಗೆ ವೋಟು ಹಾಕಬೇಡಿ, ಜಿ.ಟಿ. ದೇವೇಗೌಡನನ್ನು ಸೋಲಿಸಿ ಮಾವಿನಹಳ್ಳಿ ಸಿದ್ದೇಗೌಡನನ್ನು ಗೆಲ್ಲಿಸಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಅವರು ಜಯಪುರ ಹೋಬಳಿಯ ಉದ್ಬೂರು ಗ್ರಾಮದಲ್ಲಿ ಬೃಹತ್‌ ರೋಡ್‌ ಶೋ ನಡೆಸಿ ಕಾಂಗ್ರೆಸ್‌ ಅಭ್ಯರ್ಥಿಯ ಪರವಾಗಿ ಮತಯಾಚಿಸಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎಂಟು ಭಾರಿ ಸ್ಪರ್ಧಿಸಿ ಐದು ಭಾರಿ ಗೆದ್ದಿದ್ದೇನೆ. 2006ರಲ್ಲಿ ನಡೆದ ಚಾಮುಂಡೇಶ್ವರಿ ಉಪಚುನಾವಣೆ ನನಗೆ ರಾಜಕೀಯ ಮರುಜನ್ಮ ನೀಡಿದ ಕ್ಷೇತ್ರ ಇದು. ಈ ಕ್ಷೇತ್ರದ ಮತದಾರರ ಋುಣ ನನ್ನ ಮೇಲಿದೆ. ನಾನು ಹಿಂದೆ ಅಭಿವೃದ್ದಿ ಮಾಡಿದೆ ಹೊರತು, ಜಿ.ಟಿ. ದೇವೇಗೌಡ ಬೇರೇನು ಅಭಿವೃದ್ಧಿ ಮಾಡಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗೆ ಕಾನೂನು ರೂಪಿಸಿ, ಜನಸಂಖ್ಯೆಗೆ ಅನುಗುಣವಾಗಿ ಸಾವಿರಾರು ಕೋಟಿ ರು. ಗಳನ್ನು ದಲಿತರ ಕಲ್ಯಾಣಕ್ಕೆ ಮೀಸಲಿಟ್ಟಿದ್ದೆ ಎಂದರು.

.ಚಾಮುಂಡೇಶ್ವರಿಗೆ 1500ಕೋಟಿ ಹಣ ನೀಡಿದ್ದೇನೆ.ಅದರ ಸದುಪಯೋಗ ಪಡೆದು ಕಾಂಕ್ರಿಚ್‌ ರಸ್ತೆ ಮತ್ತು ಚರಂಡಿ ಮಾಡಲಾಗಿದೆ.ಎಲ್ಲವನ್ನು ನಾನೇ ಮಾಡಿದೆ ಅಂದರೆ ಹೇಗೆ.ಹಾಗಾಗಿ ಸುಳ್ಳು ಹೇಳುವ ಜಿ.ಟಿ ದೇವೇಗೌಡನನ್ನು ಚಾಮುಂಡೇಶ್ವರಿಯ ಮತದಾರರು ಈ ಬಾರಿ ನೀವು ಅವರನ್ನು ಸೋಲಿಸಲೇಬೇಕು ಎಂದು ಕರೆ ನೀಡಿದರು.

ಜಯಪುರ ಹೋಬಳಿ ಕೇಂದ್ರದಲ್ಲಿ ಕಾಂಗ್ರೆಸ್‌ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನೆ ನಿಂತಿದ್ದಾನೆ ಎಂದು ಮತ ಹಾಕಿ. ಇದು ನನ್ನ ಕೊನೆಯ ಚುನಾವಣೆ. ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್‌ ಗೆಲುವು ನನಗೆ ಅತೀವ ತೃಪ್ತಿ ನೀಡಲಿದೆ ಎಂದರು.

ಕಾಂಗ್ರೆಸ್‌ ಮುಖಂಡರಾದ ಕೆ. ಮರೀಗೌಡ, ಮಹದೇವು, ರಾಕೇಶ್‌ ಪಾಪಣ್ಣ, ಲೇಖಾ ವೆಂಕಟೇಶ್‌, ಕೃಷ್ಣಕುಮಾರ್‌ ಸಾಗರ್‌, ಉದ್ಬೂರು ಕೃಷ್ಣ, ಚೌಡನಾಯಕ, ಕುಮಾರ್‌, ಜೆ.ಜೆ ಆನಂದ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ. ಗುರುಸ್ವಾಮಿ ಇದ್ದರು.

ಕ್ಷೇತ್ರ ಬಿಟ್ಟು ಹೋಗುವವರಿಗೆ ಮತ ಹಾಕಬೇಡಿ

ಮೈಸೂರು(ಮೇ.03): ಪ್ರತಿ ಚುನಾವಣೆಯಲ್ಲೂ ಸಿದ್ದರಾಮಯ್ಯ ಏಕೆ ಕ್ಷೇತ್ರ ಹುಡುಕುತ್ತಾರೆ? ವರುಣ, ಚಾಮುಂಡೇಶ್ವರಿ, ಬಾದಾಮಿ ಯಾವ ಕಾರಣಕ್ಕೆ ಬದಲಾಯಿಸುತ್ತೀರಿ? ಇವರು ಅಭಿವೃದ್ಧಿ ಕೆಲಸ ಮಾಡದಿರುವುದರಿಂದ ಜನರು ಓಡಿಸುತ್ತಾರೆ. ವರುಣದ ಮತದಾರರಿಗೆ ನಿವೃತ್ತರಾಗುವವರು ಬೇಕೋ? ನಿರಂತರ ಕೆಲಸ ಮಾಡುವವರು ಬೇಕೋ ನಿರ್ಧರಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಾಗ್ದಾಳಿ ನಡೆಸಿದರು.

ವರುಣ ಕ್ಷೇತ್ರ ವ್ಯಾಪ್ತಿಯ ನಂಜನಗೂಡು ತಾಲೂಕಿನ ಹೊಸಕೋಟೆಯಲ್ಲಿ ನಡೆದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಚಾಮುಂಡೇಶ್ವರಿ, ನಂಜುಂಡೇಶ್ವರ, ಸುತ್ತೂರು ಮಠಕ್ಕೆ ನಮಿಸಿ ಭಾಷಣ ಆರಂಭಿಸಿದ ಅಮಿತ್‌ ಶಾ ಅವರು, ವರುಣ, ಟಿ.ನರಸೀಪುರ ಮತ್ತು ನಂಜನಗೂಡು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚಿನ ಮತಗಳೊಂದಿಗೆ ಗೆಲ್ಲಿಸುವಂತೆ ಮನವಿ ಮಾಡಿ, ತಮ್ಮ ಭಾಷಣದುದ್ದಕ್ಕೂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಉತ್ತರದಿಂದ ದಕ್ಷಿಣದವರೆಗೆ ಮತಬೇಟೆಗಿಳಿದ ತ್ರಿಮೂರ್ತಿಗಳು..ಏಕಕಾಲದಲ್ಲಿ ಮೋದಿ , ಅಮಿತ್‌ ಶಾ ,ನಡ್ಡಾ ಮತಶಿಕಾರಿ..!

ಸೋಮಣ್ಣನ ದೊಡ್ಡ ವ್ಯಕ್ತಿ ಮಾಡ್ತೇವೆ: 

ಈ ಕ್ಷೇತ್ರದಿಂದ ಸೋಮಣ್ಣನವರನ್ನು ಗೆಲ್ಲಿಸಿದರೆ ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತೇವೆ. ಪ್ರಧಾನಿ ಮೋದಿ ಅವರು ಕರ್ನಾಟಕವನ್ನು ಸಮೃದ್ಧ, ಸುರಕ್ಷಿತ ಕರ್ನಾಟಕ ಮಾಡುವ ಗುರಿ ಹೊಂದಿರುವ ಏಕೈಕ ವ್ಯಕ್ತಿಯಾಗಿದ್ದಾರೆ ಎಂದು ಅವರು ಹೇಳಿದರು.

ಶಾ ಮತಬೇಟೆ : 

ನರಸೀಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ರೇವಣ್ಣ ಪರವಾಗಿ ಪ್ರಚಾರ ನಡೆಸಿದ ಅಮಿತ್‌ ಶಾ, ಬಳಿಕ ಚಾಮರಾಜನಗರದ ವಿವಿಧೆಡೆ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿ ಬಿಜೆಪಿ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದರು. ಜಿಲ್ಲೆಯ ಹನೂರಿನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಬಿಜೆಪಿ ಅಭ್ಯರ್ಥಿ ಪ್ರೀತನ್‌ ನಾಗಪ್ಪ ಪರ ಪ್ರಚಾರ ನಡೆಸಿದರೆ, ಎನ್‌.ಮಹೇಶ್‌ ಪರ ಪ್ರಚಾರ ನಡೆಸಿ ಕೊಳ್ಳೇಗಾಲ ಕ್ಷೇತ್ರದ ಸಂತೆಮರಹಳ್ಳಿ ಸೇರಿದಂತೆ ವಿವಿಧೆಡೆ ಸಂಚರಿಸಿ ಮತಯಾಚನೆ ಮಾಡಿದರು.