Asianet Suvarna News Asianet Suvarna News

ತಲಕಾಡಿನಲ್ಲಿ ವಿದೇಶಿಗರಿಂದ ಗ್ರಾಮ ದರ್ಶನ

ವಿವಿಧ ಹದಿನೈದು ದೇಶಗಳಿಂದ 80 ವಿದೇಶಿ ಪ್ರಜೆಗಳು ಸೋಮವಾರ ತಲಕಾಡಿಗೆ ಭೇಟಿ ನೀಡಿ, ಗ್ರಾಮೀಣ ಸಾಂಸ್ಕೃತಿಕ ಸೊಬಗು ಕಣ್ತುಂಬಿಕೊಂಡರು.

Village visit by foreigners in Talakad snr
Author
First Published Nov 7, 2023, 9:29 AM IST

  ತಲಕಾಡು :  ವಿವಿಧ ಹದಿನೈದು ದೇಶಗಳಿಂದ 80 ವಿದೇಶಿ ಪ್ರಜೆಗಳು ಸೋಮವಾರ ತಲಕಾಡಿಗೆ ಭೇಟಿ ನೀಡಿ, ಗ್ರಾಮೀಣ ಸಾಂಸ್ಕೃತಿಕ ಸೊಬಗು ಕಣ್ತುಂಬಿಕೊಂಡರು.

ಭಾರತೀಯ ಸಂಸ್ಕೃತಿ, ಭಕ್ತಿ, ಧ್ಯಾನ, ಸಹಬಾಳ್ವೆ, ಶಿಕ್ಷಣ ಇವುಗಳನ್ನು ಕಂಡು ವಿದೇಶಿಗರು ಸಂತಸಪಟ್ಟರು. ಭಾರತ ದೇಶದ ಹಲವು ಸಂಸ್ಕೃತಿಗಳಿಂದ ಪ್ರೇರಿತರಾಗಿ ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಭಾರತ ದರ್ಶನ ಯಾತ್ರೆಯನ್ನು ಇವರು ಕೈಗೊಂಡಿದ್ದಾರೆ.

ಮಂಗೋಲಿಯಾ, ಜರ್ಮನ್, ಯುಕೆ, ಯು ಎಸ್ ಎ, ಬೆಲ್ಜಿಯಂ ಸೇರಿದಂತೆ ಹದಿನೈದು ದೇಶಗಳಿಂದ ಆಗಮಿಸಿದ ವಿದೇಶಿ ತಂಡದವರು‌, ಮೈಸೂರು ಜಿಲ್ಲೆಯಬನ್ನೂರು, ಅತ್ತಹಳ್ಳಿ ಪ್ರವಾಸದ ನಂತರ ತಲಕಾಡಿಗೆ ಭೇಟಿ ನೀಡಿದ್ದರು. ನದಿಯಾಚೆ ಕಲಿಯೂರು ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದ ವಿದೇಶಿಗರು, ತಲಕಾಡಿನಸಮರ್ಪಣಾ ಶಾಲೆ ಸೇರಿದಂತೆ

ಹಳೇ ತಲಕಾಡು ಪ್ರವಾಸಿ ನದಿ ತೀರದ ಅರಣ್ಯ ಪ್ರದೇಶದಲ್ಲಿ ವಿಹಾರ ನಡೆಸಿದರು. ಪಂಚಲಿಂಗ ಪ್ರಧಾನ ಶ್ರೀ ವೈದ್ಯನಾಥೇಶ್ವರ ದೇಗುಲಕ್ಕೆ ಭೇಟಿ ನೀಡಿ ನಂತರ ಗ್ರಾಮದರ್ಶನ ಮಾಡಿದರು.

ನೂರ ಎಂಭತ್ತೆರಡು ದೇಶಗಳಲ್ಲಿ ಭಾರತದ ಭಕ್ತಿ, ಭಾವ ಆಧ್ಯಾತ್ಮ ಚಟುವಟಿಕೆ ಉತ್ತೇಜನಕ್ಕೆ ನೆರವಾಗಿರುವ ಆರ್ಟ್ ಆಫ್ ಲಿವಿಂಗ್ ನ ನೆರವಿನಿಂದ, ಭಾರತೀಯ ಸಂಸ್ಕೃತಿ ಬಗ್ಗೆ ಸ್ಫೂರ್ತಿ ಪಡೆದು ಮೈಸೂರಿನ ವಿವಿಧೆಡೆ ಪ್ರವಾಸ ಮಾಡಿದ ವಿದೇಶಿಗರು ಗ್ರಾಮೀಣ ಪ್ರದೇಶದ ಆಚಾರ ವಿಚಾರ ಸೊಗಡನ್ನು ಪ್ರತ್ಯಕ್ಷ ವೀಕ್ಷಿಸಿ ಸಂತಸಪಟ್ಟರು.

ವಿದೇಶಿ ತಂಡಕ್ಕೆ ಆರ್ಟ್ ಆಫ್ ಲಿವಿಂಗ್ ನ ಶಿಕ್ಷಕ ಸುಬ್ಬುಕೃಷ್ಣ, ಮೈಸೂರು ಆಶ್ರಮದ ದಿವ್ಯಾ ಪಾದಾಜಿ, ಬನ್ನೂರು ಭಾಗದ ಶಿಕ್ಷಕರಾದ ಪ್ರಸನ್ನ, ಕೆಂಪೇಗೌಡ, ಕಲಿಯೂರು ಶಾಲೆಯ ಮುಖ್ಯಶಿಕ್ಷಕ ಬಸವರಾಜು ಸಹಕಾರ ನೀಡಿದರು.

ಬಸವಣ್ಣನನ್ನು ಸಾಂಸ್ಕೃತಿಕ ರಾಯಭಾರಿ ಮಾಡಲು ಚರ್ಚೆ

ವಿಜಯಪುರ(ನ.02): ಬಸವೇಶ್ವರರ ಹೆಸರನ್ನು ಜಿಲ್ಲೆಗೆ ಇಟ್ಟು ಸೀಮಿತ ಮಾಡಬಾರದು. ಜಾಗತಿಕ ಮಟ್ಟದಲ್ಲಿ ಹೆಸರಿದೆ. ವಿಶ್ವದ ಗುರು ಆಗಿದ್ದು, ಅವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಮಾಡುವಂತೆ ಸಿಎಂ ಜೊತೆ ಚರ್ಚಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಾನೇ ಉಸ್ತುವಾರಿ ಸಚಿವನಾಗಿದ್ದಾಗ ಬಿಜಾಪುರ ಇರುವುದನ್ನು ವಿಜಯಪುರ ಅಂತ ಮಾಡಲಾಗಿತ್ತು. ಮೆರಿಟ್ ಆಧರಿಸಿ, ಇತಿಹಾಸವನ್ನು ಗಮನದಲ್ಲಿರಿಸಿಕೊಂಡು ಆ ನಿರ್ಣಯ ಕೈಗೊಳ್ಳಲಾಗಿತ್ತು. ಇದೀಗ ವಿಜಯಪುರ ಹೆಸರನ್ನು ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಬಸವಣ್ಣನವರು ಜನಿಸಿದ ಜಿಲ್ಲೆ ಇದು, ಇದಕ್ಕೆ ಯಾರೊಬ್ಬರದ್ದೂ ವಿರೋಧ ಇಲ್ಲ ಎಂದರು.

ವಿದೇಶಿ ನೇರ ಹೂಡಿಕೆಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ: ಸಚಿವ ಎಂ.ಬಿ. ಪಾಟೀಲ

ಬೆಂಗಳೂರು ಮೆಟ್ರೋಗೆ ನಮ್ಮ ಬಸವೇಶ್ವರ ಮೆಟ್ರೊ ಎಂದು ನಾಮಕರಣ ಮಾಡಲು ನಾನು ಬದ್ಧವಾಗಿದ್ದೇನೆ. ಈ ಹಿಂದೆ ವೀರಶೈವ ಮಹಾಸಭಾದವರು ಇದನ್ನು ಹೇಳಿದರು. ನಾಡಪ್ರಭು ಕೆಂಪೇಗೌಡ ಎಂದು ಕರೆಯುವಂತೆ, ಮೆಟ್ರೋಗೆ ನಾಮಕರಣ ಮಾಡಲು ಚಿಂತನೆ ನಡೆದಿದೆ. ಮಹಾರಾಷ್ಟ್ರದಲ್ಲಿ ಶಿವಾಜಿ ಮಹಾರಾಜರು ಸಾಂಸ್ಕೃತಿಕ ರಾಯಭಾರಿ ಆಗಿದ್ದಾರೆ. ಹಾಗೆ ಬಸವೇಶ್ವರರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ಇಡುವ ಮೂಲಕ ಅವರ ಗೌರವ ಹೆಚ್ಚಿಸಲಾಗುತ್ತದೆ. ಜಿಲ್ಲೆಗೆ ಬಸವೇಶ್ವರ ಹೆಸರು ಇಡೋದು ರಾಜಕಾರಣಿಗಳಿಂದ ಬಂದಿಲ್ಲ. ಇದು ಸಂಘ-ಸಂಸ್ಥೆಗಳಿಂದ ಬಂದಿದೆ. ಬಸವೇಶ್ವರ ಮೂರ್ತಿಯನ್ನು ಲಂಡನ್‌ನ ಥೇಮ್ಸ್ ನದಿ ದಡದಲ್ಲಿ ಸ್ಥಾಪನೆ ಮಾಡಲಾಗಿದೆ ಎಂದರು.

ಇಂಡಿ ಪ್ರತ್ಯೇಕ ಜಿಲ್ಲೆ ವಿಚಾರವಾಗಿ ಮಾತನಾಡಿದ ಅವರು, ಕಾಲಕಾಲಕ್ಕೆ ತಕ್ಕಂತೆ ಸರ್ಕಾರ ನಿರ್ಧಾರ ಮಾಡುತ್ತದೆ. ಅದು ಅಲ್ಲಿಯ ಶಾಸಕರ ಬೇಡಿಕೆ ಇರುತ್ತದೆ. ಅದು ಸ್ವಾಭಾವಿಕ. ಅದು ತಪ್ಪಲ್ಲ ಎಂದು ಹೇಳಿದರು.

ಬಸವನಾಡು ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಸವೇಶ್ವರ ಜನ್ಮಸ್ಥಳ ಅಭಿವೃದ್ಧಿಗೆ ಹೆಚ್ಚಿನ ಪ್ರಯತ್ನ ಸರ್ಕಾರದಿಂದ ಆಗಬೇಕಿದೆ. ಕೂಡಲಸಂಗಮದಲ್ಲಿ ಅಭಿವೃದ್ಧಿ ಆಗಬೇಕು. ನಾನೇ ₹139 ಕೋಟಿ ಮ್ಯೂಸಿಯಂಗೆ ಕೊಟ್ಟಿದ್ದೆ. ಅದು ಕಾರಣಾಂತರಗಳಿಂದ ತಕ್ಕಮಟ್ಟಿಗೆ ಅಭಿವೃದ್ಧಿ ಆಗಿಲ್ಲ ಎಂದರು.

ಮರಾಠ ನೆಲದಲ್ಲಿ "ಕನ್ನಡ ಡಿಂಡಿಮ" ಬಾರಿಸಿದ್ದ ಹೆಮ್ಮೆಯ ಕನ್ನಡಿಗ..!

ಸರ್ಕಾರ ಎಲ್ಲವನ್ನೂ ಸೂಕ್ತ ನಿರ್ಣಯ ಕೈಗೊಳ್ಳುತ್ತದೆ. ಗೊಂದಲ‌ ಸೃಷ್ಟಿ ಬೇಡ. ಬಸವೇಶ್ವರರು ಶ್ರೇಷ್ಠ ಗುರು. ಸಂವಿಧಾನ ಬೇರೆ ಅಲ್ಲ, ಬಸವೇಶ್ವರರ ಚಿಂತನೆ ಬೇರೆ ಅಲ್ಲ. ರಾಜ್ಯಕ್ಕೆ ಅಂಬೇಡ್ಕರ್ ಹೆಸರು ವಿಚಾರ ತಪ್ಪೇನಿದೆ. ಎಲ್ಲವನ್ನೂ ಸರ್ಕಾರ ನಿರ್ಧಾರ ಕೈಗೊಳ್ಳುತ್ತೆ. ಅಂಬೇಡ್ಕರರು ಸಂವಿಧಾನ ಕೊಟ್ಟವರು ಎಂದು ಹೇಳಿದರು.

Follow Us:
Download App:
  • android
  • ios