Asianet Suvarna News Asianet Suvarna News

ವಿದೇಶಿ ನೇರ ಹೂಡಿಕೆಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ: ಸಚಿವ ಎಂ.ಬಿ. ಪಾಟೀಲ

ವಿದೇಶಿ ನೇರ ಹೂಡಿಕೆಯಲ್ಲಿ ದೇಶದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಕರ್ನಾಟಕದ ಕೀರ್ತಿ ಕೊಂಡೊಯ್ಯಬೇಕಾದ ಮಹತ್ತರ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ. ಈ ವಿಷಯದ ಜೊತೆಗೆ ಉಳಿದ ವಲಯಗಳಲ್ಲಿಯೂ ನಮ್ಮ ರಾಜ್ಯ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂಬ ಸಂಕಲ್ಪವನ್ನು ಪ್ರತಿಯೊಬ್ಬರು ತಾಳಬೇಕು ಎಂದು ಹೇಳಿದ ಸಚಿವ ಡಾ.ಎಂ.ಬಿ. ಪಾಟೀಲ 

Karnataka Top in Foreign Direct Investment  Says Minister MB Patil grg
Author
First Published Nov 2, 2023, 8:29 PM IST

ವಿಜಯಪುರ(ನ.02): ವಿದೇಶಿ ನೇರ ಹೂಡಿಕೆಯಲ್ಲಿ ಈಗಾಗಲೇ ರಾಜ್ಯ ಅಗ್ರಸ್ಥಾನದಲ್ಲಿರುವುದು ಪ್ರತಿಯೊಬ್ಬರು ಹೆಮ್ಮೆಪಡುವ ಸಂಗತಿ. ಕರ್ನಾಟಕ ಉದ್ಯಮಸ್ನೇಹಿ ರಾಜ್ಯವಾಗಿ ರೂಪುಗೊಂಡಿದೆ. ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ, ಸಂಶೋಧನೆಗೆ ಒತ್ತು, ವೈಜ್ಞಾನಿಕ ಒಡಂಬಡಿಕೆ ಹೀಗೆ ದೂರದೃಷ್ಟಿಯುಳ್ಳ ಸಮರ್ಪಕ ನೀತಿಗಳನ್ನು ರೂಪಿಸುವಲ್ಲಿ ಮೊಟ್ಟ ಮೊದಲ ರಾಜ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಶ್ಲಾಘಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ಸಂದೇಶ ನೀಡಿದ ಅವರು, ವಿದೇಶಿ ನೇರ ಹೂಡಿಕೆಯಲ್ಲಿ ದೇಶದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಕರ್ನಾಟಕದ ಕೀರ್ತಿ ಕೊಂಡೊಯ್ಯಬೇಕಾದ ಮಹತ್ತರ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ. ಈ ವಿಷಯದ ಜೊತೆಗೆ ಉಳಿದ ವಲಯಗಳಲ್ಲಿಯೂ ನಮ್ಮ ರಾಜ್ಯ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂಬ ಸಂಕಲ್ಪವನ್ನು ಪ್ರತಿಯೊಬ್ಬರು ತಾಳಬೇಕು ಎಂದು ಹೇಳಿದರು.

ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ್ದ ವಿಜಯಪುರದ ಮಠಾಧೀಶರು; ರಾಜ್ಯೋತ್ಸವದ ಮರುದಿನವೇ ಮಹಾದೇವರ ಜನ್ಮದಿನ!

ಕನ್ನಡ ಬರೀ ಭಾಷೆಯಲ್ಲ ಅದೊಂದು ಅಸ್ಮಿತೆ:

ಕನ್ನಡ ಎನ್ನುವುದು ಬರೀ ಭಾಷೆಯಲ್ಲ. ಅದು ನಮ್ಮ ಸಂಸ್ಕೃತಿ, ನಮ್ಮ ಜೀವ, ನಮ್ಮ ಭಾವ ಹಾಗೂ ಕರ್ನಾಟಕದಲ್ಲಿ ನೆಲೆಸಿರುವ ಎಲ್ಲ ಜನರ ಅಸ್ಮಿತೆ ಎಂದು ಸಚಿವ ಪಾಟೀಲ ಅಭಿಮಾನದಿಂದ ನುಡಿದರು. ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀಯರನ್ನು ನಿತ್ಯ ಸ್ಮರಿಸಬೇಕು. ಅವರ ತ್ಯಾಗ, ಹೋರಾಟದ ಫಲವಾಗಿಯೇ ಕರ್ನಾಟಕ ರೂಪುಗೊಂಡಿದೆ ಎಂದರು.

ಕರ್ನಾಟಕ ವಿವಿಧತೆಯಲ್ಲಿ ಏಕತೆಯ ತತ್ವಕ್ಕೆ ಅತೀ ಆಪ್ತವಾಗಿ ಸಾಮಾಜಿಕವಾಗಿ, ಸಾಂಸ್ಕೃತಿಕ, ಸಾಹಿತ್ಯಿಕ, ವೈಜ್ಞಾನ ಹಾಗೂ ಬೌದ್ಧಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅನನ್ಯ. ಬೇರೆ ಬೇರೆ ಪ್ರಾಂತ್ಯಗಳಿಂದಾಗಿ ಹರಿದು ಹಂಚಿಹೋಗಿದ್ದ ಕರುನಾಡನ್ನು ಕಟ್ಟುವಲ್ಲಿ ನಮ್ಮ ಹಿರಿಯರು ಪಟ್ಟ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ, ಅವರ ಒಗ್ಗಟ್ಟಿನ ಹೋರಾಟದ ಫಲವೇ ಇಂದಿನ ನಮ್ಮ ಹೆಮ್ಮೆಯ ಕರ್ನಾಟಕ ಎಂದು ಹೇಳಿದರು.

ಕರ್ನಾಟಕದ ಅನೇಕ ಮಠ-ಮಾನ್ಯಗಳು ಇಲ್ಲಿನ ಮಕ್ಕಳಿಗೆ ಅನ್ನ, ಆಶ್ರಯ ಹಾಗೂ ಜ್ಞಾನ ನೀಡುವ ಕಾಯಕದಲ್ಲಿ ತೊಡಗಿಸಿಕೊಂಡಿವೆ, ಕನ್ನಡಾಭಿಮಾನ ಜಾಗೃತಗೊಳಿಸುವ ಕಾರ್ಯದಲ್ಲಿಯೂ ಮಠ ಮಾನ್ಯಗಳ ಪಾತ್ರ ಅನನ್ಯ ಎಂದು ಹೇಳಿದರು.

ವಿಜಯಪುರ ಉತ್ಪಾದನೆ ವಲಯ ಆಗಿಸಲು ಕ್ರಮ: ಸಚಿವ ಎಂ.ಬಿ.ಪಾಟೀಲ

ನಾಡಿನ ಹಿರಿಯರ ತ್ಯಾಗ-ಸಮರ್ಪಣೆ ಭಾವದಿಂಧ ಸಾಧಿಸಿದ ಕರ್ನಾಟಕ ಏಕೀಕರಣದ ಉನ್ನತ ಆಶಯಗಳನ್ನು ಎತ್ತಿ ಹಿಡಿಯುವ ಮೂಲಕ ನಾಡಿನ ಕೀರ್ತಿಯನ್ನು ಇನ್ನಷ್ಟೂ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕರು ಶ್ರಮ ವಹಿಸಬೇಕು ಎಂದು ಕರೆ ನೀಡಿದರು.

ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಸಿಇಒ ರಾಹುಲ್ ಶಿಂಧೆ, ಎಸ್.ಪಿ. ಹೃಷಿಕೇಶ ಭಗವಾನ ಸೋನಾವಣೆ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.

Follow Us:
Download App:
  • android
  • ios