Vijayapura; ತಾಜ್ ಬಾವಡಿಯಲ್ಲಿ ಗಣೇಶ ವಿಸರ್ಜನೆಗೆ ಡಿಸಿ ನಿರ್ಬಂಧ

ವಿಜಯಪುರ ತಾಜ್ ಬಾವಡಿಯಲ್ಲಿ ಗಣೇಶ ವಿಸರ್ಜನೆಗೆ ಜಿಲ್ಲಾಧಿಕಾರಿ ನಿರ್ಬಂಧ. ಜಲಮಾಲಿನ್ಯ ಕಾಯ್ದೆ ಅಡಿಯಲ್ಲಿ ಕೇಸ್ ಪಿಕ್ಸ್ ಎಂದು ಆದೇಶ. Open The Gate For Ganesh Visarjan ಅಭಿಯಾನಕ್ಕೆ ಹಿನ್ನೆಡೆ.
 

vijayapura DC not permitted to ganesh idol Immersion in taj bawadi gow

ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಸೆ.2) : ನಗರದ ತಾಜ್ ಬಾವಡಿಯಲ್ಲಿ ಗಣೇಶ ವಿಸರ್ಜನೆ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಒಂದರ್ಥದಲ್ಲಿ ಗಣೇಶ ಮಹಾಮಂಡಳ ಯುವಕರು ಹಾಗೂ ಸ್ಥಳೀಯ ಶಾಸಕರ ನಡುವೆ ಮಾತಿನ ಜಟಾಪಟಿಗೆ ಕಾರಣವಾಗಿತ್ತು. ಮಹಾಮಂಡಳದ ಯುವಕರು ಗೇಟ್ ಮುರಿತಿವಿ ಅಂದ್ರೆ, ಶಾಸಕರು ಗೂಂಡಾ ಆಕ್ಟ್ ಹಾಕುವ ಎಚ್ಚರಿಕೆ ನೀಡಿದ್ದರು. ಈ ಜಿಲ್ಲಾಡಳಿತ ಈ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದೆ. ತಾಜ್ ಬಾವಡಿ ವಿವಾದ ವಿಚಾರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್ ಗಮನಕ್ಕು ಬಂದಿದೆ. ಬರುವ ರವಿವಾರ 5ನೇ ದಿನದ ಗಣೇಶ ವಿಸರ್ಜನೆ ನಡೆಯುತ್ತಿದ್ದು, ಮಂಗಳವಾರ 7ನೇ ದಿನ ವಿಸರ್ಜನೆ ಗುರುವಾರ 9ನೇ ದಿನದ ಗಣೇಶ ವಿಸರ್ಜನೆ ನಡೆಯುತ್ತಿದೆ. ಈ ಕಾರಣ ತಾಜ್ ಬಾವಡಿ ವಿವಾದ ಹೊತ್ತಿ ಕೊಳ್ಳುವ ಸೂಚನೆಗಳಿವೆ.‌ ಹೀಗಾಗಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್ ಹೊಸ ಆದೇಶ ಹೊರಡಿಸಿದ್ದು, ತಾಜ್ ಬಾವಡಿಯಲ್ಲಿ ಗಣೇಶ ವಿಸರ್ಜನೆಗೆ ನಿರ್ಬಂಧಿಸಿದ್ದಾರೆ. ಡಿಸಿ ಹೊರಡಿಸಿರುವ ಆದೇಶ ಪತ್ರದಲ್ಲಿ ತಾಜ್ ಬಾವಡಿಯಲ್ಲಿ ಗಣೇಶ ವಿಸರ್ಜನೆಗೆ ನಿರ್ಬಂಧ ಹೇರಲಾಗಿದೆ. ತಾಜ್ ಬಾವಡಿ ಪುರಾತತ್ವ ಇಲಾಖೆಯಿಂದ ಗುರುತಿಸಲ್ಪಟ್ಟಿದೆ. ಜಲಮಾಲಿನ್ಯ ಕಾಯ್ದೆ 1974 ಅಡಿಯಲ್ಲಿ ಜಲಮಾಲಿನ್ಯ ತಡೆಗಟ್ಟಲು ಇಲ್ಲಿ ಗಣೇಶ ವಿಸರ್ಜನೆ ನಿಷೇಧಿಸಿ ಆದೇಶಿಸಲಾಗಿದೆ. ಈ ಪ್ರದೇಶದಲ್ಲಿ ಕುಡಿಯುವ ನೀರಿನ ಕಾಮಗಾರಿ ಪ್ರಗತಿಯಲ್ಲಿದ್ದು, ಗಣೇಶ ವಿಸರ್ಜನೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶ ಪತ್ರದಲ್ಲಿ ತಿಳಿಸಲಾಗಿದೆ..

ಗಣೇಶ ವಿಸರ್ಜನೆಗೆ ಪರ್ಯಾಯ ಹೊಂಡ ನಿರ್ಮಾಣ!
ಜಲಮಾಲಿನ್ಯ ತಡೆಗೆ ತಾಜ್ ಬಾವಡಿಯಲ್ಲಿ ಗಣೇಶ ವಿಸರ್ಜನೆ ಸಂಪೂರ್ಣ ನಿಷೇಧಿಸಲಾಗಿದೆ. ಜೊತೆಗೆ ಗಣೇಶ ವಿಸರ್ಜನೆಗೆ ತಾಜ್ ಬಾವಡಿ ಆವರಣದಲ್ಲಿ ಕೃತಕ ಹೊಂಡ ನಿರ್ಮಿಸಲಾಗಿದೆ. ಕೃತಕ ಹೊಂಡಗಳಲ್ಲೆ ಗಣೇಶ ವಿಸರ್ಜನೆ ಮಾಡುವಂತೆ ಕಳೆದ ಆಗಷ್ಟ 26 ರಂದು ನಡೆದ ಶಾಂತಿ ಸಭೆಯಲ್ಲೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

#Open The Gate For Ganesh Visarjan ಅಭಿಯಾನಕ್ಕೆ ಹಿನ್ನೆಡೆ..!
ವಿಜಯಪುರ ನಗರದ ಐತಿಹಾಸಿಕ ತಾಜ್‌ ಬಾವಡಿಯಲ್ಲಿ ಗಣೇಶ ವಿಸರ್ಜನೆಗೆ ಅವಕಾಶ ಕಲ್ಪಿಸಬೇಕು ಅಂತಾ #Open The Gate For Ganesh Visarjan ಹ್ಯಾಶ್‌ ಟ್ಯಾಗ್‌ ಅಭಿಯಾನ ಶುರುಮಾಡಿದ್ದರು. ಗಣೇಶ ಮಹಾಮಂಡಳದ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಿಟ್ಟುಕೊಂಡಿದ್ದರು. ಈ ವರ್ಷ ತಾಜ್‌ ಬಾವಡಿಯ ಗೇಟ್‌ ಓಪನ್‌ ಮಾಡಿ ಗಣೇಶ ವಿಸರ್ಜನೆಗೆ ಅವಕಾಶ ನೀಡಲೇ ಬೇಕು ಕಳೆದ 15 ದಿನಗಳ ಹಿಂದೆ ಕೂಡ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ ಮಾಡಿದ್ದರು ಈಗ ಈ ಅಭಿಯಾನಕ್ಕೆ ಜಿಲ್ಲಾಧಿಕಾರಿಗಳ ಆದೇಶದಿಂದ ಹಿನ್ನಡೆ ಉಂಟಾಗಿದೆ.

ಕೃತಕ ಹೊಂಡಗಳಿಂದ ಧಾರ್ಮಿಕ ಭಾವನೆಗೆ ಧಕ್ಕೆ..!
ಜಿಲ್ಲಾಡಳಿತ ತಾಜ್‌ ಬಾವಡಿ ಬದಲಿಗೆ ಕೃತಕ ಹೊಂಡಗಳಲ್ಲಿ ಗಣೇಶ ವಿಸರ್ಜನೆಗೆ ಸೂಚಿಸಿದೆ, ಜಿಲ್ಲಾಧಿಕಾರಿಗಳು ಅದೇಶವನ್ನ ಹೊರಡಿಸಿದ್ದಾರೆ. ಆದ್ರೆ ಹಿಂದೂ ಸಂಘಟನೆಗಳ ಯುವಕರು ಕೃತಕ ಹೊಂಡಗಳಲ್ಲಿ ಗಣೇಶ ಮೂರ್ತಿಗಳನ್ನ ವಿಸರ್ಜಿಸುವ ವೇಳೆ ನಡೆಯುವ ಧಾರ್ಮಿಕ ಅಪಚಾರವನ್ನ ಪ್ರಶ್ನಿಸುತ್ತಿದ್ದಾರೆ. ಕೃತಕ ಹೊಂಡಗಳಲ್ಲಿ ಗಣೇಶ ಮೂರ್ತಿಗಳನ್ನ ಹಾಕುವಾಗ ಒಡೆದು ಹೋಗುತ್ವೆ. ಗಣೇಶ ಮೂರ್ತಿ ಒಡೆದರೆ ಅದು ನಮಗೆ ಅಪಶಕುನ.. ಅಲ್ಲದೆ ಪಾಲಿಕೆ ಸಿಬ್ಬಂದಿ ಗಣೇಶ ಮೂರ್ತಿಗಳನ್ನ ಕೊಂಡೊಯ್ಯುವಾಗ ಅವುಗಳ ಮೇಲೆ ನಿಲ್ತಾರೆ ಅದು ನಮ್ಮ ಭಾವನೆಗಳಿಗೆ ಧಕ್ಕೆ ತರುತ್ತೆ ಎಂದು ಮಹಾಮಂಡಳದ ಸನ್ನಿ ಗವಿಮಠ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Uttara Kannada: ಕಳೆಗಟ್ಟಿದ ಗಣೇಶ ಚತುರ್ಥಿ ಹಬ್ಬದ ಸಂಭ್ರಮ

ಗೇಟ್ ಮುರಿದು ನುಗ್ತಿವಿ ಎಂದವರು ಏನ್ ಮಾಡ್ತಾರೆ..!?
ಅಭಿಯಾನ ಶುರು ಮಾಡಿದ್ದ ಯುವಕರು ಗೇಟ್‌ ತೆಗೆಯದೆ ಹೋದ್ರೆ ಗೇಟ್‌ ಮುರಿದು ಒಳಗೆ ನುಗ್ತೀವಿ ಎಂದು ಎಚ್ಚರಿಕೆ ನೀಡಿದ್ದರು. ಆದ್ರೀಗ ಜಿಲ್ಲಾಧಿಕಾರಿಗಳ ಆದೇಶವನ್ನ ಇವರೆಲ್ಲ ಪಾಲಿಸ್ತಾರಾ ಅನ್ನೋದೆ ಪ್ರಶ್ನೆಯಾಗಿದೆ.

Ganesh Chaturthi 2021; ಸಹೋದರಿ ಮನೆಯಲ್ಲಿ ಹಬ್ಬ ಆಚರಿಸಿದ ಸಲ್ಮಾನ್ ಖಾನ್, ಗಣೇಶ ಆರತಿ ವಿಡಿಯೋ ವೈರಲ್

ಗೇಟ್‌ ಮುರಿದರೆ ಬೀಳುತ್ತಾ ಗೂಂಡಾ ಆಕ್ಟ್..!‌?
ಈ ನಡುವೆ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ತಾಜ್‌ ಬಾವಡಿ ಗೇಟ್ ಮುರಿದಾದರು ವಿಸರ್ಜನೆ ಮಾಡ್ತೀವಿ ಎಂದ್ರೆ ಅವ್ರ ವಿರುದ್ಧ ಗೂಂಡಾ ಆಕ್ಟ್‌ ಹಾಕ್ತೀವಿ ಎಂದಿದ್ದರು. ಗೇಟ್‌ ಮುರಿದ್ರೆ ಸುಮ್ಮನೆ ಬಿಡಲ್ಲಾ ಗೂಂಡಾ ಕಾಯ್ದೆ ಪಿಕ್ಸ್‌ ಎಂದಿದ್ದರು. ಈ ನಡುವೆ ಜಿಲ್ಲಾಧಿಕಾರಿಗಳ ಮತ್ತೊಂದು ಹೊಸ ಆದೇಶ ತಾಜ್ ಬಾವಡಿ ಗೇಟ್ ಓಪನ್ ಮಾಡಿಸಿ ಗಣೇಶ ವಿಸರ್ಜನೆ ಮಾಡ್ತೀವಿ ಎಂದವರಿಗೆ ನಿರಾಶೆ ಮೂಡಿಸಿದೆ.

Latest Videos
Follow Us:
Download App:
  • android
  • ios