RSS, BJP ಅಜೆಂಡಾ ದೇಶದಲ್ಲಿ ಪ್ರಜಾಪ್ರಭುತ್ವ ಹಾಳು ಮಾಡುವುದು: ಮಲ್ಲಿಕಾರ್ಜುನ ಖರ್ಗೆ ಕಿಡಿ
ನಾನು ಬೇರೆಯವರಂತೆ ಭ್ರಷ್ಟಾಚಾರ ಮಾಡಿದ್ರೆ ಜನ ನನ್ನ ರಾಜಕೀಯವಾಗಿ 50 ವರ್ಷ ಜೀವಂತ ಇಡ್ತಿರಲಿಲ್ಲ. ಸಾಕಷ್ಟು ಕೆಲಸ ಮಾಡಿದ್ರೂ ಕಳೆದ ಬಾರಿ ಚುನಾವಣೆಯಲ್ಲಿ ನನಗೆ ತೊಂದರೆ ಆಗಿದೆ. ನನಗೆ ತೊಂದರೆ ಆಗಿದೆ ಅಂತ ನಾನು ನಿಮಗೆ ತೊಂದರೆ ಆಗಲು ಬಿಡೋದಿಲ್ಲ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ(ಮೇ.04): ಈ ಚುನಾವಣೆ ಬಹಳ ಮಹತ್ವದ ಚುನಾವಣೆಯಾಗಿದೆ. ಮೋದಿಜಿವರು ಅನೇಕ ಸಲ ಹೇಳಿದಾರೆ ಈ ಬಾರಿ 400 ಸೀಟ್ ತಗೊಂಡು ಬರ್ತೆವೆ ಅಂತ. ಟೂಥರ್ಡ ಮೆಜಾರಿಟಿ ಕೊಟ್ರೆ ದೇಶದ ಸಂವಿಧಾನ ಬದಲಾಯಿಸಿ ತೋರಿಸ್ತಿವಿ ಅಂತ ಬಿಜೆಪಿಯವರು ಹೇಳಿದ್ದಾರೆ. ಟೂಥರ್ಡ್ ಮೆಜಾರಿಟಿ ಕೊಟ್ರೆ ಈ ದೇಶದಲ್ಲಿ ಸಂವಿಧಾನ ಉಳಿಯೋದಿಲ್ಲ. ಸಂವಿಧಾನವೇ ಇಲ್ಲ ಅಂದ್ರೆ ಮೀಸಲಾತಿ ಉಳಿಯೋದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
ಇಂದು(ಶನಿವಾರ) ಕಲಬುರಗಿಯಲ್ಲಿ ನಡೆದ ಕೋಲಿ ಸಮಾಜದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, 371 ನೇ ಕಲಂ ತಿದ್ದುಪಡಿ ಮಾಡಿ ಮೀಸಲಾತಿ ಕೊಟ್ರೂ ಇದರ ಪ್ರಚಾರ ಮಾಡೋರು ಕಡಿಮೆ, ನನಗೆ ಬಯ್ಯುವವರೇ ಜಾಸ್ತಿ, ಯಾಕಂದ್ರೆ ಅಸೂಯೆ, ಅಸೂಯೆ ಇದ್ರೆ ಅಭಿವೃದ್ಧಿ ಸಾಧ್ಯವಿಲ್ಲ. ನಾನೆಂದೂ ಖರ್ಗೆ ಗ್ಯಾರಂಟಿ ಅಂತ ಎಲ್ಲೂ ಹೇಳಿಲ್ಲ. ಇದು ಹೈದ್ರಾಬಾದ್ ಕರ್ನಾಟಕದ ಗ್ಯಾರೆಂಟಿ. ನೀವು ನನಗೆ ಗೆಲ್ಲಿಸಿ ಮಹಾನ್ ಉಪಕಾರ ಮಾಡಿದ್ದಕ್ಕಾಗಿಯೇ ನಾನು ಇಷ್ಟೆಲ್ಲಾ ಅಭಿವೃದ್ಧಿ ಮಾಡಲು ಸಾಧ್ಯವಾಗಿದ್ದು ಎಂದು ತಿಳಿಸಿದ್ದಾರೆ.
ಕರ್ನಾಟಕದ ಜನ ಈ ಬಾರಿಯೂ ಮೋದಿ ಕೈ ಬಿಡಲ್ಲ: ಅಣ್ಣಾಮಲೈ
ಕೋಲಿ ಸಮಾಜ ಎಸ್ಟಿ ಮಾಡಬೇಕು ಎನ್ನುವುದು ಬೇಡಿಕೆ ಬಹಳ ದಿನಗಳಿಂದ ಇದ್ದಿದ್ದು, ಈ ಬಾರಿ ನಮ್ಮ ಪಕ್ಷಕ್ಕೆ ಭಾರಿ ಬಹುಮತ ಬಂದೇ ಬರುತ್ತೆ. ಇಂಡಿಯಾ ಒಕ್ಕೂಟಕ್ಕೆ ಬಿಜೆಪಿಯನ್ನು ಸೋಲಿಸುವಷ್ಟು ಬೆಂಬಲ ಬಂದೇ ಬರುತ್ತದೆ. ಹಾಗೆ ಬಂದ್ರೆ ಎಲ್ಲೆಲ್ಲಿ ನಿಮಗೆ ಸಹಾಯ ಬೇಕೋ ನಾನು ನಿಮ್ಮ ಜೊತೆಗಿರುತ್ತೇನೆ ಎಂದು ಕೋಲಿ ಸಮಾಜದ ಜನರಿಗೆ ಮಲ್ಲಿಕಾರ್ಜುನ ಖರ್ಗೆ ಅಭಯ ನೀಡಿದ್ದಾರೆ.
ನಾನು ಬೇರೆಯವರಂತೆ ಭ್ರಷ್ಟಾಚಾರ ಮಾಡಿದ್ರೆ ಜನ ನನ್ನ ರಾಜಕೀಯವಾಗಿ 50 ವರ್ಷ ಜೀವಂತ ಇಡ್ತಿರಲಿಲ್ಲ. ಸಾಕಷ್ಟು ಕೆಲಸ ಮಾಡಿದ್ರೂ ಕಳೆದ ಬಾರಿ ಚುನಾವಣೆಯಲ್ಲಿ ನನಗೆ ತೊಂದರೆ ಆಗಿದೆ. ನನಗೆ ತೊಂದರೆ ಆಗಿದೆ ಅಂತ ನಾನು ನಿಮಗೆ ತೊಂದರೆ ಆಗಲು ಬಿಡೋದಿಲ್ಲ ಎಂದು ತಿಳಿಸಿದ್ದಾರೆ.
RSS & BJP ಅಜೆಂಡಾ ಈ ದೇಶದಲ್ಲಿ ಪ್ರಜಾಪ್ರಭುತ್ವ ಹಾಳು ಮಾಡುವುದು. ಸಂವಿಧಾನ ತಿರುಚುವುದಾಗಿದೆ. ಹೋದ ಸಲ RSS ಭಾರಿ ಸಂಖ್ಯೆಯಲ್ಲಿ ಕಲಬುರಗಿಯಲ್ಲಿ ಬೀಡು ಬಿಟ್ಟಿದ್ರು. ಈ ಬಾರಿ ಕಡಿಮೆ ಸಂಖ್ಯೆಯಲ್ಲಿ ಬಂದಿದಾರೆ ಆದ್ರೆ ನೀವು ಸ್ವಲ್ಪ ಯಾಮಾರಿದ್ರೆ ನಿಮ್ಮ ಓಟ್ ಕಸಿದುಕೊಂಡು ಬಿಡ್ತಾರೆ. ಅವರ ಮಾತಿಗೆ ಮರುಳಾಗದೇ ಈ ಬಾರಿ ಕಾಂಗ್ರೆಸ್ ಗೆಲ್ಲಿಸಿ ಅಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.