Asianet Suvarna News Asianet Suvarna News

Uttara Kannada: ಕಳೆಗಟ್ಟಿದ ಗಣೇಶ ಚತುರ್ಥಿ ಹಬ್ಬದ ಸಂಭ್ರಮ

  • *ಕಳೆಗಟ್ಟಿದ ಗಣೇಶ ಚತುರ್ಥಿ ಸಂಭ್ರಮ
  • ಮಳೆಯಿಂದ ಕೆಲವೆಡೆ ಸಂಭ್ರಮಾಚರಣೆಗೆ ತೊಡಕು
  • ಜಿಲ್ಲೆಯ 1300ಕ್ಕೂ ಅಧಿಕ ಕಡೆ ಮೂರ್ತಿ ಪ್ರತಿಷ್ಠಾಪನೆ
Ganeshotsava held in grandeur in karwar uttarakannada
Author
First Published Sep 2, 2022, 9:52 AM IST

ಕಾರವಾರ (ಸೆ.2) : ಜಿಲ್ಲೆಯಾದ್ಯಂತ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಹಬ್ಬದ ದಿನವಾದ ಬುಧವಾರ ರಾತ್ರಿ ಕೆಲವು ಕಡೆ ಸುರಿದ ಮಳೆಯಿಂದಾಗಿ ಕೆಲವು ಕಡೆ ಸಂಭ್ರಮಾಚರಣೆಗೆ ತೊಡಕುಂಟಾಯಿತು. 5ರಿಂದ 11 ದಿನಗಳ ವರೆಗೂ ಸಿದ್ಧಿವಿನಾಯಕನ ಪೂಜೆ ಪುನಸ್ಕಾರ ನಡೆಯುತ್ತದೆ. ಜಿಲ್ಲೆಯಲ್ಲಿ 1300ಕ್ಕೂ ಅಧಿಕ ಕಡೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಯಲ್ಲಾಪುರದಲ್ಲಿ ಸಂಜೆ 4 ಗಂಟೆಯಿಂದಲೇ ಮಳೆ ಸುರಿದಿದ್ದು, ಹಬ್ಬದ ಸಂಭ್ರಮ ಸಡಗರಕ್ಕೆ ವರುಣ ಅಡ್ಡಿಪಡಿಸಿದ್ದನು. ಭಟ್ಕಳ ತಾಲೂಕಿನಲ್ಲಿ ಕೂಡ ಭಾರಿ ಮಳೆಯಾಗಿದ್ದು, ಮುರ್ಡೇಶ್ವರಕ್ಕೆ ಬಂದಿದ್ದ ಪ್ರವಾಸಿಗರು ಮಳೆಯಿಂದಾಗಿ ಹೈರಾಣಾಗಿದ್ದರು. ಸಿದ್ದಾಪುರ ಭಾಗದಲ್ಲೂ ರಾತ್ರಿ ಜಿಟಿಜಿಟಿ ಮಳೆಯಾಗಿದೆ.

Uttara Kannada: ಮದುವೆಯ ವೀಳ್ಯ ಕೊಟ್ಟಿಲ್ಲ ಎಂದು ಊರಗೌಡನಿಂದ ಕುಟುಂಬದ ಮೇಲೆ ಬಹಿಷ್ಕಾರ!

ಶಿರಸಿ ತಾಲೂಕಿನ ಕೆಲವು ಕಡೆ ಸಂಜೆಯಿಂದಲೇ ಗುಡುಗು ಸಿಡಿಲಿನೊಂದಿಗೆ ಜಿಟಿಜಿಟಿ ಮಳೆಯಾಗಿದ್ದು, ಸಾರ್ವಜನಿಕ ಗಣೇಶೋತ್ಸವ ನೋಡಿಕೊಂಡು ಬರುವವರಿಗೆ, ಏಕದಂತನ ದರ್ಶನಕ್ಕೆ ಹೋಗುವವರಿಗೆ ತೊಂದರೆಯಾಯಿತು. ಕಳೆದ ಎರಡು ವರ್ಷ ಕೋವಿಡ್‌ ಸೋಂಕಿನ ಕಾರಣ ಗಣೇಶ ಚತುರ್ಥಿ ಹಬ್ಬ ಸಾರ್ವತ್ರಿಕ ಆಚರಣೆಗೆ ಸರ್ಕಾರ ನಿಷೇಧ ಹೇರಿತ್ತು. ಹೀಗಾಗಿ ಸಾರ್ವಜನಿಕ ಗಣೇಶೋತ್ಸವಗಳ ಸಂಭ್ರಮ ಕಳೆಗುಂದಿತ್ತು. ಆದರೆ ಈ ವರ್ಷ ಡಿಜೆಗೆ ಸರ್ಕಾರ ಅವಕಾಶ ನೀಡಿದಿದ್ದರೂ ಸಾಂಪ್ರದಾಯಿಕವಾಗಿ ಉತ್ಸವ ನಡೆಸಲು ಅವಕಾಶ ನೀಡಿತ್ತು. ಇದು ಸಮಿತಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಚತುರ್ಥಿ ಕಳೆಗಟ್ಟಿದೆ.

ಸಾವರ್ಕರ್ ಫೋಟೊ ಇಟ್ಟು ಗಣೇಶ ಪ್ರತಿಷ್ಠಾಪನೆ:

ಶಿರಸಿ ಉಣ್ಣೇಮಠ ಗಲ್ಲಿ ಹಾಗೂ ಇತರೆಡೆ ಸಾವರ್ಕರ್‌ ಪೋಟೋವನ್ನೂ ಇಟ್ಟು ಗಣಪನನ್ನು ಪ್ರತಿಷ್ಠಾಪಿಸಲಾಗಿದೆ. ವಿವಿಧ ಕಡೆಗಳಲ್ಲಿ ಸಂಘ ಸಂಸ್ಥೆಗಳವರು ವಿವಿಧ ಭಂಗಿಯಲ್ಲಿರುವ ಬೃಹತ್‌ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರೆ, ಮನೆಯಲ್ಲಿ ಚಿಕ್ಕ ಮೂರ್ತಿಗಳನ್ನು ತಂದು ಭಕ್ತಿಯಿಂದ ಪೂಜಿಸುತ್ತಿರುವ ದೃಶ್ಯ ಎಲ್ಲ ಕಡೆಗಳಲ್ಲಿ ಕಂಡು ಬಂತು. ಪ್ರತಿ ಮನೆ ಮನೆಯಲ್ಲೂ ವಿN್ನೕಶ್ವರನಿಗೆ ವಿಶೇಷ ಪೂಜೆ ನಡೆಯಿತು. ಬನವಾಸಿ ಮಧುಕೇಶ್ವರ ದೇವಸ್ಥಾನದಲ್ಲಿ ಮಹಾರಾಜ ಕಾಲದಿಂದಲೂ ನಡೆಯುತ್ತ ಬಂದಿರುವ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಂಜಾನೆ ದೇವಸ್ಥಾನದ ಆಡಳಿತ ಮಂಡಳಿಯವರು ವಾದ್ಯ ಮೇಳದೊಂದಿಗೆ ಗುಡಿಗಾರ ಮನೆಗೆ ತೆರಳಿ ಪೂಜೆ ಸಲ್ಲಿಸಿ ಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ಗಣೇಶ ಮೂರ್ತಿಯನ್ನು ತರಲಾಯಿತು. ಮೂರ್ತಿ ಪ್ರತಿಷ್ಠಾನದ ಬಳಿಕ ಪೂಜೆ ಹಣ್ಣು ಕಾಯಿ ಸಮರ್ಪಿಸಿ ಮಹಾಮಂಗಳಾರತಿ ನಡೆಯಿತು. ನೂರಾರು ಭಕ್ತರು ಆಗಮಿಸಿ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.

Uttara Kannada: ವೃಕ್ಷಮಾತೆಗೆ ಕೊಟ್ಟ ಮಾತು ಉಳಿಸಿದ ಶಾಸಕಿ ರೂಪಾಲಿ ನಾಯ್ಕ್‌

ಪಟ್ಟಣದ ಜನತಾ ಕಾಲನಿ, ಆಂಜನೇಯ ದೇವಸ್ಥಾನ, ಕದಂಬ ವೃತ್ತ ಸೇರಿದಂತೆ ಶಾಲೆಗಳಲ್ಲಿ, ಪೊಲೀಸ್‌ ಠಾಣೆ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿಯೂ ವಿನಾಯಕನ ಆರಾಧನೆ ಸಂಭ್ರಮದಿಂದ ಆಚರಿಸಲಾಯಿತು. ಶಿರಸಿಯಲ್ಲಿ ವಿವಿಧೆಡೆ ಸಾರ್ವಜನಿಕ ಗಣೇಶ ಮೂರ್ತಿ ಸ್ಥಾಪಿಸಲಾಗಿದೆ. ದೇವಿಕೆರೆ, ನೀಲೆಕಣಿ, ರಾಘವೇಂದ್ರ ಮಠ, ಲೋಕೋಪಯೋಗಿ ಇಲಾಖೆ, ಪೊಲೀಸ್‌ ಠಾಣೆ, ಹನುಮಾನ ವ್ಯಾಯಾಮ ಶಾಲೆ, ಮಾರಿಗುಡಿ, ಶಿವಾಜಿ ವೃತ್ತ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಗಣಪನನ್ನು ಸ್ಥಾಪಿಸಲಾಗಿದೆ.

Follow Us:
Download App:
  • android
  • ios