ಕರ್ನಾಟಕದ ಜನ ಈ ಬಾರಿಯೂ ಮೋದಿ ಕೈ ಬಿಡಲ್ಲ: ಅಣ್ಣಾಮಲೈ

ಗ್ಯಾರಂಟಿಗೂ ಈ ಎಲೆಕ್ಷನ್‌ಗೂ ಸಂಬಂಧ ಇಲ್ಲ. ಪ್ರಧಾನಿ ಯಾರು?. ದೇಶ ರಕ್ಷಕರು ಯಾರು?, ಒಳ್ಳೆ ಆಡಳಿತ ಯಾರು ಕೊಡ್ತಾರೆ ಅವರಿಗೆ ಓಟ್ ಹಾಕ್ತಾರೆ. ಮೂರನೇ ಫೇಸ್ ಓಟಿಂಗ್ ಬರುತ್ತಿದೆ ಆದ್ರೂ ಇಂಡಿಯಾ ಅಲಯನ್ಸ್‌ನಲ್ಲಿ ಪ್ರಧಾನಿ ಯಾರು ಅನ್ನೋದೇ ಗೊತ್ತಿಲ್ಲ. ಈ ಬಾರಿ ಕಾಂಗ್ರೆಸ್ 56 ಕ್ಕಿಂತ ಕಡಿಮೆ ಗೆಲ್ಲುತ್ತದೆ: ಬಿಜೆಪಿ ನಾಯಕ ಅಣ್ಣಾಮಲೈ 

BJP Leader K Annamalai Talks Over PM Narendra Modi grg

ಕಲಬುರಗಿ(ಮೇ.04): ಕರ್ನಾಟಕದ ಜನ ಈ ಬಾರಿಯೂ ಮೋದಿ ಅವರಿಗೆ ಕೈ ಬಿಡಲ್ಲ. 2019 ರ ಫಲಿತಾಂಶ ಮತ್ತೊಮ್ಮೆ ರಿಪೀಟ್ ಆಗುತ್ತೆ ಎಂದು ಬಿಜೆಪಿ ನಾಯಕ ಅಣ್ಣಾಮಲೈ ಹೇಳಿದ್ದಾರೆ. 

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತಮಾಡಿದ ಅಣ್ಣಾಮಲೈ ಅವರು, ಡೆಮೋಕ್ರಾಸಿ ಬಗ್ಗೆ ಆಫ್ ದ ಪೀಪಲ್.. ಬೈ ದಿ ಪೀಪಲ್.. ಫಾರ್‌ ದಿ ಪೀಪಲ್ ಅನ್ನೋ ಮಾತಿದೆ. ಕಲಬುರಗಿ ಬಗ್ಗೆ ಹೇಳುವುದಾದ್ರೆ ಆಫ್ ದಿ ಫಾದರ್.. ಬೈದಿ ಸನ್.. ಫಾರದಿ ಸನ್ ಇನ್ ಲಾ ಅನ್ನುವ ಹಾಗಿದೆ. ಇಲ್ಲಿ ತಂದೆ, ಅವರ ಮಗ ಎಲೆಕ್ಷನ್ ಕ್ಯಾಂಪೆನ್ ಮ್ಯಾನೇಜರ್, ಅಳಿಯ ಕ್ಯಾಂಡಿಡೇಟ್. ಕಾಂಗ್ರೆಸ್ ಪರಿವಾರದಲ್ಲಿ ಏನೆಲ್ಲಾ ತಪ್ಪು ಮಾಡಿದ್ದಾರೋ ಅದೇ ತಪ್ಪು ಕಲಬುರಗಿಯಲ್ಲಿ ಆಗುತ್ತಿದೆ ಎಂದು ತಿಳಿಸಿದ್ದಾರೆ. 

ಸುಳ್ಳನ್ನೇ ಮಾರುಕಟ್ಟೆ ಮಾಡಿಕೊಂಡ ಪ್ರಧಾನಿ, ಮೋದಿ ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ..!

ಇಗೋ ಕಾರಣಕ್ಕಾಗಿ ಮಲ್ಲಿಕಾರ್ಜುನ ಖರ್ಗೆ ಅಳಿಯನನ್ನು ಇಳಿಸಿದ್ದಾರೆ.. ಮಗ ಕ್ಯಾಂಪೆನ್ ಮಾಡ್ತಿದಾರೆ. ಕಳೆದ ಬಾರಿಗಿಂತ ಹೆಚ್ಚಿನ ಲೀಡ್‌ನಲ್ಲಿ ನಮ್ಮ ಅಭ್ಯರ್ಥಿ ಡಾ. ಉಮೇಶ ಜಾಧವ್ ಗೆದ್ದು ಬರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ಗ್ಯಾರಂಟಿಗೂ ಈ ಎಲೆಕ್ಷನ್‌ಗೂ ಸಂಬಂಧ ಇಲ್ಲ. ಪ್ರಧಾನಿ ಯಾರು?. ದೇಶ ರಕ್ಷಕರು ಯಾರು?, ಒಳ್ಳೆ ಆಡಳಿತ ಯಾರು ಕೊಡ್ತಾರೆ ಅವರಿಗೆ ಓಟ್ ಹಾಕ್ತಾರೆ. ಮೂರನೇ ಫೇಸ್ ಓಟಿಂಗ್ ಬರುತ್ತಿದೆ ಆದ್ರೂ ಇಂಡಿಯಾ ಅಲಯನ್ಸ್‌ನಲ್ಲಿ ಪ್ರಧಾನಿ ಯಾರು ಅನ್ನೋದೇ ಗೊತ್ತಿಲ್ಲ. ಈ ಬಾರಿ ಕಾಂಗ್ರೆಸ್ 56 ಕ್ಕಿಂತ ಕಡಿಮೆ ಗೆಲ್ಲುತ್ತದೆ ಎಂದು ತಿಳಿಸಿದ್ದಾರೆ. 

ಮೋದಿಗಿಂತ ನಾನೇ ಹೆಚ್ಚು ಓದಿದ್ದೇನೆ, ನನ್ನ ಕ್ವಾಲಿಫಿಕೇಶನ್ ಹೆಚ್ಚಿದೆ ಅನ್ನೋ ಸಚಿವ ಪ್ರೀಯಾಂಕ್ ಖರ್ಗೆಗೆ ತಿರುಗೇಟು ನೀಡಿದ ಅಣ್ಣಾಮಲೈ ಪ್ರಿಯಾಂಕ್ ಖರ್ಗೆ ಸಾಹೇಬ್ರ ಕ್ವಾಲಿಫಿಕೇಶನ್ ಸನ್ ಆಫ್ ಮಲ್ಲಿಕಾರ್ಜುನ ಖರ್ಗೆ, ಅಷ್ಟೇ ಅವರ ಕ್ವಾಲಿಫಿಕೇಶನ್, ಅವರ ಬಗ್ಗೆ ಅವರು ತಪ್ಪಾಗಿ ತಿಳಿದುಕೊಳ್ಳಬಾರದು. ಅವರ ಬಗ್ಗೆ ಸರಿಯಾಗಿ ಮಾತನಾಡಬೇಕು ಅಂದ್ರೆ ಸನ್ ಆಫ್ ಮಲ್ಲಿಕಾರ್ಜುನ ಖರ್ಗೆ ಅಷ್ಟೆ. ಈ ಕ್ವಾಲಿಫಿಕೇಶನ್ ತಗೊಂಡು ಬಂದು ದಯವಿಟ್ಟು ಜಗಳ ಮಾಡೋಕೆ ಬರಬೇಡಿ ಎಂದು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios