ಹಾಸನ ಕಾಮಕಾಂಡ; ಸಂತ್ರಸ್ತೆ ಕಿಡ್ನಾಪ್ ಮಾಡಿ ತಗ್ಲಾಕೊಂಡ ಹೆಚ್.ಡಿ. ರೇವಣ್ಣ ಅರೆಸ್ಟ್, ಇನ್ಮುಂದೆ ಜೈಲೇ ಗತಿ!

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋದಲ್ಲಿದ್ದ ಸಂತ್ರಸ್ತ ಮಹಿಳೆಯನ್ನು ಕಿಡ್ನಾಪ್ ಮಾಡಿದ ಆರೋಪದಡಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅರೆಸ್ಟ್ ಆಗಿದ್ದು, ಹಲವು ದಿನಗಳ ಕಾಲ ಜೈಲೇ ಗತಿ ಆಗಲಿದೆ...

Hassan Prajwal revanna sex scandal Former PM HD deve gowda son HD Revanna arrest from SIT sat

ಬೆಂಗಳೂರು (ಮೇ 04): ಹಾಸನದಲ್ಲಿ 2900ಕ್ಕೂ ಅಧಿಕ ಅಶ್ಲೀಲ ವಿಡಿಯೋದ ಪ್ರಮುಖ ರೂವಾರಿ ಆಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಆರೋಪದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ. ಈಗ ಎಸ್‌ಐಟಿ ಕಚೇರಿಗೆ ಕರೆದೊಯ್ದ ಎಸ್‌ಐಟಿ ತಂಡವು ಆರೋಗ್ಯ ತಪಾಸಣೆಗೆ ಒಳಪಡಿಸಿ ಜೈಲಿಗೆ ಕಳಿಸಲಿದ್ದಾರೆ. ನಂತರ ಕನಿಷ್ಠ ಮೇ 6ವರೆಗೆ (ಮೂರು ದಿನಗಳ ಕಾಲ) ರೇವಣ್ಣ ಜೈಲಿನಲ್ಲಿಯೇ ಕಂಬಿ ಎಣಿಸಲಿದ್ದಾರೆ. ಇದು ವಿಸ್ತರಣೆಯೂ ಆಗಲಿದೆ..

ಹೌದು, ಹೆಚ್.ಡಿ. ರೇವಣ್ಣ ಅವರ ಮೇಲೆ ದಾಖಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಎಸ್‌ಯಟಿ ತಂಡವು ನೋಟೀಸ್ ನಿಡಿದರೂ ನಿರ್ಲಕ್ಷ್ಯ ಮಾಡಿದ್ದರು. ಆದರೆ, ಲುಕ್ ಔಟ್ ನೋಟೀಸ್ ಜಾರಿಗೊಳಿಸಿದ ನಂತರ ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಆದರೆ, ಲೈಂಗಿಕ ದೌರ್ಜನ್ಯ ಕೇಸ್‌ನ ಜೊತೆಗೆ, ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಮಹಿಳೆಯನ್ನು ಕಿಡ್ನಾಪ್ ಮಾಡಿದ ಕೇಸ್ ಅವರ ಪುತ್ರನಿಂದ ದಾಖಲಾಗುತ್ತದೆ. ಲೈಂಗಿಕ ದೌರ್ಜನ್ಯದ ಕೇಸ್‌ನ ಜೊತೆಗೆ ಸಂತ್ರಸ್ತ ಮಹಿಳೆ ಕಿಡ್ನಾಪ್ ಮಾಡಿದ ಆರೋಪ ಹೊತ್ತ ಹೆಚ್.ಡಿ. ರೇವಣ್ಣ ಅವರಿಗೆ ಜಾಮೀನು ನಿರಾಕರಣೆ ಮಾಡಲಾಗುತ್ತದೆ. ಇದರ ಬೆನ್ನಲ್ಲಿಯೇ ಮಾಜಿ ಪ್ರಧಾನಿ ದೇವೇಗೌಡರ ನಿವಾಸದಲ್ಲಿ ಅಡಗಿ ಕುಳಿತಿದ್ದ ರೇವಣ್ಣನನ್ನು ಬಂಧಿಸಲಾಗುತ್ತದೆ.

ಹಾಸನ ಕಾಮಕಾಂಡ: ಸಂಸದ ಪ್ರಜ್ವಲ್ ಅಶ್ಲೀಲ ವಿಡಿಯೋ ಹಂಚಿಕೆಯಿಂದ ರೇವಣ್ಣ ಬಂಧನದವರೆಗೆ ಕಂಪ್ಲೀಟ್ ಡಿಟೇಲ್ಸ್

ಬಂಧನದ ಹೈಡ್ರಾಮ ಹೇಗಿತ್ತು ಗೊತ್ತಾ?
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ವೇಳೆ ರೇವಣ್ಣ ಅವರಿಗೆ ಜಾಮೀನು ನೀಡಿದರೆ ಸಂಜೆ 5.30ಕ್ಕೆ ಎಸ್‌ಐಟಿ ವಿಚಾರಣೆಗೆ ಹಾಜರಾಗುತ್ತಾರೆ ಎಂದು ರೇವಣ್ಣಪರ ವಕೀಲರು ಮಾಹಿರಿ ನೀಡಿದ್ದರು. ಇದರಿಂದ ಎಚ್ಚೆತ್ತುಕೊಂಡು ಎಸ್‌ಐಟಿ ಪೊಲೀಸರು ರೇವಣ್ಣ ಬೆಂಗಳೂರಿನಲ್ಲಿಯೇ ಇರುವುದನ್ನು ಖಚಿತಪಡಿಸಿಕೊಂಡು ಅವರ ಮೇಲೆ ಹದ್ದಿನ ಕಣ್ಣಿಟ್ಟು ಬಂಧನಕ್ಕೆ ಬಲೆ ಬೀಸಿದ್ದರು. ಇನ್ನು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕರಿಸಿ ಇದು ಬಂಧಿಸುವಂತಹ ಕೇಸ್ ಆಗದ್ದು, ಅರೆಸ್ಟ್ ಮಾಡಿ ಎಂದು ನ್ಯಾಯಾಲಯ ಸೂಚಿಸಿತು. ಈ ವೇಳೆಗಾಗಲೇ ರೇವಣ್ಣ ಅಡಗಿ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಅವರ ತಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮನೆಯ ಗೆಟ್‌ ಬಳಿ ನಿಂತುಕೊಂಡಿದ್ದರು. ಎಸ್‌ಐಟಿ ಅಧಿಕಾರಿಗಳು ಎಷ್ಟೇ ಬಾಗಿಲು ಬಡಿದರೂ ಸೆಕ್ಯೂರಿಟಿ ಸಿಬ್ಬಂದಿ ಮಾತ್ರ ಗೇಟ್ ತೆಗೆದಿರಲಿಲ್ಲ. ಆಗ ಸ್ವತಃ ರೇವಣ್ಣ ಅವರೇ ಗೇಟ್‌ನ ಹೊರಗೆ ಬಂದು ಪೊಲೀಸರಿಂದ ಬಂಧನಕ್ಕೊಳಗಾದರು.

ಹಾಸನ ರಾಸಲೀಲೆ ಪ್ರಕರಣ: ಕಿಡ್ನಾಪ್ ಕೇಸಲ್ಲಿ ಹೆಚ್.ಡಿ. ರೇವಣ್ಣಗೆ ಜಾಮೀನು ನಿರಾಕರಿಸಿದ ಕೋರ್ಟ್; ಬಂಧನ ಭೀತಿ

ಮೂರು ದಿನಗಳ ಜೈಲೇ ಗತಿ: ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರನ್ನು ಬಂಧಿಸಿದ ನಂತರ ಎಸ್‌ಐಟಿ ಕಚೇರಿಗೆ ಕರೆದೊಯ್ದರು. ಅಲ್ಲಿ ಕೆಲ ಹೊತ್ತಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಅಲ್ಲಿಂದ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಿದ ನಂತರ ಅವರನ್ನು ಎಸ್‌ಐಟಿ ಕಸ್ಟಡಿಯಲ್ಲಿ ಇಟ್ಟುಕೊಳ್ಳಲಾಗುತ್ತದೆ. ನಂತರ, ಅಲ್ಲಿಂದ ನಾಳೆ ಮಧ್ಯಾಹ್ನದ ವೇಳೆ (ಆರೋಪಿ ಬಂಧನದ 24 ಗಂಟೆಯೊಳಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕು) ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ. ಅಲ್ಲಿ ನ್ಯಾಯಾಧೀಶರು ಕೊಡುವ ಆದೇಶದ ಅನುಸಾರ 14 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ಕೊಡಲಾಗುತ್ತದೆ. ಆಗ ಅವರನ್ನು ವಿಚಾರಣೆಗಾಗಿ ಕಸ್ಟಡಿಯಲ್ಲಿ ಇಟ್ಟುಕೊಳ್ಳುವ ಜೊತೆಗೆ ಜೈಲಿಗೂ ಕಳಿಸಲಾಗುತ್ತದೆ.

Latest Videos
Follow Us:
Download App:
  • android
  • ios