ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚೌಡಾಪುರ ಗ್ರಾಮದಲ್ಲಿ, ಮೆಕ್ಕೆಜೋಳದ ಸೊಪ್ಪೆ ತರುವಾಗ ಜೋಡಿ ನಾಗರಹಾವು ಕಚ್ಚಿ ಕೆ.ಓಬಮ್ಮ (53) ಎಂಬ ಮಹಿಳೆ ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಆಕ್ರೋಶಗೊಂಡ ಗ್ರಾಮಸ್ಥರು ಹಾವುಗಳನ್ನು ಹೊಡೆದು ಕೊಂದಿದ್ದಾರೆ.
ವಿಜಯನಗರ (ಕೂಡ್ಲಿಗಿ): ಕಣದಲ್ಲಿರುವ ಜಾನುವಾರುಗಳಿಗೆ ಮೇವು ಹಾಕಲು, ಮೆಕ್ಕೆಜೋಳ ಸೊಪ್ಪಿ ತೆಗೆಯುವಾಗ ಅದರಲ್ಲಿದ್ದ ಜೋಡಿ ನಾಗರಹಾವು ಕಚ್ಚಿದ್ದರಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಚೌಡಾಪುರ ಗ್ರಾಮದ ಕೆ.ಓಬಮ್ಮ (53) ಮೃತ ಮಹಿಳೆ.
ಸಿಟ್ಟಿಗೆದ್ದ ಜನತೆ ಮಹಿಳೆಯ ಸಾವಿಗೆ ಕಾರಣವಾದ ಜೋಡಿ ನಾಗರಹಾವುಗಳನ್ನು ಹೊಡೆದು ಕೊಂದಿದ್ದಾರೆ.
ಮೆಕ್ಕೆಜೋಳ ಬಣವಿಯಲ್ಲಿನ ಸೊಪ್ಪೆ ತೆಗೆಯುವಾಗ ಅದರಲ್ಲಿದ್ದ ಜೋಡಿ ನಾಗರಹಾವುಗಳು ಮಹಿಳೆಯ ಬಲಗೈನ ರಟ್ಟೆಗೆ ಒಂದರ ಹಿಂದೆ ಒಂದರಂತೆ ಕಚ್ಚಿದ್ದರಿಂದ ಅಸ್ವಸ್ಥಳಾಗಿದ್ದಾಳೆ. ತಕ್ಷಣ ಮಹಿಳೆಯನ್ನು ಬೈಕಿನಲ್ಲಿ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಇದನ್ನೂ ಓದಿ: ಗಂಡನಿಗೆ ಕಚ್ಚಿದ ಹಾವು; ಟಿವಿ ನೋಡಿ ಬಾಯಿಂದ ವಿಷ ಹೀರಿದ ಪತ್ನಿ! ಆಮೇಲಾಗಿದ್ದೇ ಬೇರೆ ಕಥೆ
ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಸಾಂತ್ವನ
ಹಾವು ಕಚ್ಚಿ ಮೃತಪಟ್ಟ ಮಹಿಳೆ ಕುಟುಂಬದವರನ್ನು ಶಾಸಕ ಡಾ.ಎನ್.ಟಿ. ಶ್ರೀನಿವಾಸ ಭೇಟಿ ಮಾಡಿ, ಸಾಂತ್ವನ ಹೇಳಿದರು. ಚೌಡಾಪುರ ಗ್ರಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ಸೇರಿದಂತೆ ಗ್ರಾಮಸ್ಥರಿದ್ದರು.
ಇದನ್ನೂ ಓದಿ: ಮಳೆಗಾಲದಲ್ಲಿ ಮನೆಯೊಳಗೆ ಹಾವು ಬರ್ಬಾರದು ಅಂದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ


